ETV Bharat / sports

ಮೋದಿ ಸರ್ಕಾರದಡಿ ಕ್ರೀಡಾಪಟುಗಳಿಗೆ ಸಿಗುವ ಪ್ರೋತ್ಸಾಹ, ಬೆಂಬಲ ಸುಧಾರಿಸಿದೆ: ಅಂಜು ಬಾಬಿ ಜಾರ್ಜ್‌ - Support For Athletes Under PM Modi

ಪ್ರಧಾನಿಯವರು ಪ್ರತಿಯೊಬ್ಬ ಕ್ರೀಡಾಪಟುಗಳ ಜೊತೆ ಮಾತನಾಡಿ ಅವರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಭಾರತದಲ್ಲಿ ಏನೋ ಮಹತ್ತರವಾದದ್ದು ನಡೆಯುತ್ತಿದೆ ಎಂದು ಹೇಳುವ ಮೂಲಕ ನರೇಂದ್ರ ಮೋದಿಯನ್ನು ಲಾಂಗ್ ಜಂಪರ್ ಅಂಜು ಬಾಬಿ ಶ್ಲಾಘಿಸಿದ್ದಾರೆ.

Anju Bobby George
Anju Bobby George
author img

By

Published : Aug 8, 2021, 4:45 PM IST

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ಗೆದ್ದು ಭಾರತ ತನ್ನ ಹಿಂದಿನ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿತು. ಈ ಸಂತಸದ ಸಂದರ್ಭದಲ್ಲಿ ಮಾಜಿ ಕ್ರೀಡಾಪಟು ಅಂಜು ಬಾಬಿ ಜಾರ್ಜ್ ಅವರು ತಮ್ಮ ಕಾಲದಲ್ಲಿ ಕ್ರೀಡಾ ಮಂತ್ರಿಗಳು ಹೇಗಿದ್ದರು ಮತ್ತು ದೇಶದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

"ಭಾರತ ಸರ್ಕಾರವು ಕ್ರೀಡಾಪಟುಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಪದಕಗಳನ್ನು ಗೆದ್ದ ನಂತರ ಪ್ರಧಾನಿ ಮೋದಿಯವರು ಕರೆ ಮಾಡಿ ಕ್ರೀಡಾಪಟುಗಳೊಂದಿಗೆ ಮಾತನಾಡುತ್ತಿದ್ದಾರೆ. ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ನಾನು ಭಾಗವಹಿಸಿದ್ದಾಗ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ನನ್ನನ್ನು ಅಭಿನಂದಿಸಿದ್ದರು, ಅದನ್ನು ಬಿಟ್ಟು ಬೇರೇನೂ ಇಲ್ಲ. ನಾವು ಒಲಿಂಪಿಕ್ಸ್​ ಆಡುವಾಗ ಕ್ರೀಡಾ ಸಚಿವರು ಕೂಡ ಅಲ್ಲಿಗೆ ಭೇಟಿ ನೀಡುತ್ತಿದ್ದರು. ವಿಶ್ವ ಚಾಂಪಿಯನ್‌ಶಿಪ್ ಪದಕವನ್ನು ಗೆದ್ದಾಗಲೂ ಭಾರತವು ಸಂಭ್ರಮಿಸಿತ್ತು. ಆದರೆ ಕ್ರೀಡಾ ಸಚಿವಾಲಯಕ್ಕೆ ಇದು ದೊಡ್ಡ ವಿಚಾರ ಎನಿಸುತ್ತಿರಲಿಲ್ಲ" ಎಂದು ಲಾಂಗ್ ಜಂಪರ್ ಅಂಜು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ಕಂಚಿನ ವೀರರ' ಜೊತೆ ಪ್ರಧಾನಿ ಮೋದಿ ಮಾತುಕತೆ: ಸಾಧಕರಿಗೆ ಶುಭಾಶಯ

ಈಗ ಹಾಗಿಲ್ಲ. ಪ್ರಧಾನಿಯವರು ಕ್ರೀಡಾಕೂಟಕ್ಕೆ ಮುಂಚೆಯೇ ಕ್ರೀಡಾಪಟುಗಳನ್ನು ಕರೆಯುತ್ತಿದ್ದಾರೆ. ಪ್ರತಿಯೊಬ್ಬರ ಜೊತೆ ಮಾತನಾಡಿ ಅವರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಭಾರತದಲ್ಲಿ ಏನೋ ಮಹತ್ತರವಾದದ್ದು ನಡೆಯುತ್ತಿದೆ. ನಾನು ನಿಜವಾಗಿಯೂ ಈ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಂಜು ಬಾಬಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಜು ಬಾಬಿ ವೃತ್ತಿಜೀವನ

ಕೇರಳ ಮೂಲದ ಅಂಜು ಬಾಬಿ ಜಾರ್ಜ್ ಅವರು ಭಾರತದ ಮೊದಲ ಮತ್ತು ಏಕೈಕ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತರಾಗಿದ್ದಾರೆ. ಎರಡು ಬಾರಿ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದ ಅಂಜು, ಭಾರತದ ಮಹಿಳಾ ವಿಭಾಗದ ಲಾಂಗ್​ ಜಂಪ್​ನಲ್ಲಿ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ.

2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದಿದ್ದ ಅಂಜು ಒಂದೇ ಕಿಡ್ನಿಯೊಂದಿಗೆ ಈ ಸಾಧನೆ ಮಾಡಿದ್ದರು. 2005 ರಲ್ಲಿ IAAF ವಿಶ್ವ ಅಥ್ಲೆಟಿಕ್ಸ್ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇವರಿಗೆ 2002 ರಲ್ಲಿ ಅರ್ಜುನ ಪ್ರಶಸ್ತಿ, 2003 ರಲ್ಲಿ ಖೇಲ್ ರತ್ನ, ಮತ್ತು 2004 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.