ಟೋಕಿಯೋ: ಭಾರತೀಯ ಹಿರಿಯ ಟೇಬಲ್ ಟೆನ್ನಿಸ್ ಆಟಗಾರ ಎ.ಶರತ್ ಕಮಲ್ ಮೂರನೇ ಸುತ್ತಿಗೆ ಆಯ್ಕೆಯಾಗಿದ್ದಾರೆ. ಎರಡನೇ ಸುತ್ತಿನಲ್ಲಿ ಪೋರ್ಚುಗಲ್‌ನ ಟಿಯಾಗೊ ಪೊಲೊನಿಯಾರನ್ನು ಮಣಿಸಿದ್ದು, ಮೂರನೇ ಹಂತದಲ್ಲಿ ಒಲಿಂಪಿಕ್ಸ್ನ ಹಾಲಿ ಚಾಂಪಿಯನ್ ಮಾ ಲಾಂಗ್ ಅವರೊಂದಿಗೆ ಸೆಣಸಾಡಲಿದ್ದಾರೆ.
ಶರತ್ ಕಮಲ್ (39) ಎರಡನೇ ಸುತ್ತಿನಲ್ಲಿ ಕೇವಲ 49 ನಿಮಿಷಗಳ ಅವಧಿಯಲ್ಲಿ 2-11, 11-8, 11-5, 9-11, 11-6, 11-9 ರಿಂದ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: Tokyo Olympics: ಕತ್ತಿವರಸೆ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಭವಾನಿ ದೇವಿಗೆ ಸೋಲು
ಭಾರತೀಯ ಪ್ಯಾಡ್ಲರ್ ಶರತ್ಗೆ ಮೂರನೇ ಪಂದ್ಯ ಅತ್ಯಂತ ಕಠಿಣವಾಗಿರಲಿದೆ. ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ವಿಶ್ವ ಚಾಂಪಿಯನ್ ಮಾ ಲಾಂಗ್ ವಿರುದ್ಧ ಶರತ್ ಆಡಲಿದ್ದಾರೆ.
ಇದನ್ನೂ ಓದಿ:Tokyo Olympics: ಬಿಲ್ಲುಗಾರಿಕೆಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತ!