ಲಖನೌ (ಉ.ಪ್ರ): ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬಳು ಇರುತ್ತಾರೆ ಎನ್ನುವುದಕ್ಕೆ ಪ್ಯಾರಾಲಿಂಪಿಕ್ನಲ್ಲಿ ಚಿನ್ನ ಗೆದ್ದ ಸುಹಾಸ್ ಯತಿರಾಜ್ ಕಥೆ ಸಹ ಉದಾಹರಣೆ. ಆತನ ಯಶಸ್ಸಿನ ಹಿಂದೆ ಪತ್ನಿ ರಿತು ಸುಹಾಸ್ ಸಹ ಬೆನ್ನೆಲುಬಾಗಿ ನಿಂತಿದ್ದಾರೆ. ಆದರೆ, ಆಕೆ ಸಹ ನಾಗರಿಕ ಸೇವಾ ಕ್ಷೇತ್ರದಲ್ಲಿಯೇ ಸೇವೆ ಸಲ್ಲಿಸುತ್ತಿದ್ದು, ಅಲ್ಲಿಯೂ ಹೆಸರು ಮಾಡಿದ್ದಾರೆ.
ಬಹುಮುಖ್ಯವಾಗಿ ಶಾಸಕ ಮುಖ್ತಾರ್ ಅನ್ಸಾರಿಯ ಅಕ್ರಮಗಳ ಹೊರಗೆಳೆಯುವಲ್ಲಿ ರಿತು ಸುಹಾಸ್ ಪಾತ್ರವೂ ಇದೆ. ರೌಡಿಶೀಟರ್, ಶಾಸಕ ಮುಖ್ತಾರ್ ಅನ್ಸಾರಿ ವಿರುದ್ಧ ಅಕ್ರಮ ಆಸ್ತಿ, ವಂಚನೆ ಆರೋಪವಿದ್ದು, ಈಗಾಗಲೇ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ.
ಸುಹಾಸ್ ಎಲ್‌ವೈ ಅವರು 2007 ನೇ ಬ್ಯಾಚ್‌ನ ಉತ್ತರ ಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಸುಹಾಸ್ ಅವರ ಪತ್ನಿ ರಿತು ಸುಹಾಸ್ ಅವರು ಘಾಜಿಯಾಬಾದ್‌ನಲ್ಲಿ ಎಡಿಎಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ಲಖನೌನಲ್ಲಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಜಂಟಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
2008ರಲ್ಲಿ ವಿವಾಹ
ರಿತು ಸುಹಾಸ್ ಮತ್ತು ಸುಹಾಸ್ ಯತಿರಾಜ್ 2008ರಲ್ಲಿ ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಪ್ಯಾರಾಲಿಂಪಿಕ್ನಲ್ಲಿ ಭಾರತದ ಪರ ಆಡಬೇಕೆಂದು ಯತಿರಾಜ್ ಆಸೆಯಾಗಿತ್ತು. ಇದಕ್ಕಾಗಿ ಕಳೆದ 6 ವರ್ಷಗಳಿಂದ ಅವರು ಕಷ್ಟಪಟ್ಟಿದ್ದಾರೆ ಎಂದು ರಿತು ಹೇಳಿದ್ದಾರೆ. ಟೋಕಿಯೋದಲ್ಲಿ ಪದಕ ಗೆದ್ದಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಕರೆ ಮಾಡಿ ಅಭಿನಂದಿಸಿದ್ದಾರೆ. ಇದು ಇನ್ನೊಂದು ಖುಷಿಯ ವಿಚಾರವಾಗಿದೆ. ಅವರ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ ಎಂದಿದ್ದಾರೆ.
ಸುಹಾಸ್ಗೆ ಹುಟ್ಟಿನಿಂದಲೇ ವೈಕಲ್ಯ
ಸುಹಾಸ್ ಎಲ್‌ವೈ ಉತ್ತರ ಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ. ಅವರ ಕುಟುಂಬ ಮೂಲತಃ ಕರ್ನಾಟಕದವರು. ಸುಹಾಸ್ ಗೆ ಹುಟ್ಟಿನಿಂದಲೇ ಕಾಲಿನ ಸಮಸ್ಯೆ ಇತ್ತು. ಸುಹಾಸ್ ಕಠಿಣ ಪರಿಶ್ರಮ ಮತ್ತು ಹೋರಾಟದ ನಂತರ ಐಎಎಸ್ ಅಧಿಕಾರಿಯಾದರು. ಅವರಿಗೆ ಪ್ರಯಾಗರಾಜ್, ಅಜಂಗಢ್, ಜೌನ್‌ಪುರ್, ಸೋನ್‌ಭದ್ರಾ, ಮಹಾರಾಜಗಂಜ್ ಮತ್ತು ಹತ್ರಾಸ್‌ನ ಡಿಎಮ್ ಆಗಿದ್ದರು.
2004 ಬ್ಯಾಚ್ ಪಿಸಿಎಸ್ ಅಧಿಕಾರಿಯಾಗಿದ್ದ ರಿತು ಸುಹಾಸ್ ಅವರನ್ನು ಘಜಿಯಾಬಾದ್‌ನ ಎಡಿಎಂ ಆಡಳಿತಾಧಿಕಾರಿಯಾಗಿ ನೇಮಿಸಲಾಗಿತ್ತು. ಲಖನೌದಲ್ಲಿ ಎಲ್ಡಿಎ ಜಂಟಿ ಕಾರ್ಯದರ್ಶಿಯಾಗಿದ್ದಾಗ, ಮುಖ್ತಾರ್ ಅನ್ಸಾರಿ ಮತ್ತು ಅವರ ಅನೇಕ ಸಹಾಯಕರನ್ನು ಒಳಗೊಂಡ ಕಾನೂನುಬಾಹಿರ ಕಟ್ಟಡಗಳ ಪತ್ತೆ ಹಚ್ಚಿದ್ದರು.
ಇದರಲ್ಲಿ ಮುಖ್ತಾರ್ ಅವರ ಪುತ್ರರ ಹೆಸರಿನಲ್ಲಿ ದಾಲಿಬಾಗ್ ನಲ್ಲಿನ ಅಕ್ರಮ ನಿರ್ಮಾಣಗಳು, ದಲಿತಾಬಾಗಿನಲ್ಲಿ ಅಕ್ರಮ ಕಟ್ಟಡ, ಮುಖ್ತಾರ್ ಅವರ ಅತ್ತಿಗೆ ರಾಣಿ ಸುಲ್ತಾನೇಟ್ ಹಜರತ್‌ಗಂಜ್ ಕಟ್ಟಡ ಹಲವು ಅಕ್ರಮ ಬಯಲಿಗೆಳೆದಿದ್ದರು.
ಓದಿ: ಟೋಕಿಯೋ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ನಲ್ಲಿ ಬೆಳ್ಳಿ ಗೆದ್ದ ಕನ್ನಡಿಗ ಸುಹಾಸ್: ಶುಭಹಾರೈಸಿದ ಪತ್ನಿ ರಿತು