ಟೋಕಿಯೋ: ಭಾರತದ ಜಾವಲಿನ್ ಥ್ರೋವರ್ ರಂಜೀತ್ ಭಟಿ ಪ್ಯಾರಾಲಿಂಪಿಕ್ಸ್ ಜಾವಲಿನ್ ಥ್ರೋ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಶನಿವಾರ ನಡೆದ ಪುರುಷರ F57 ಫೈನಲ್ನಲ್ಲಿ ತಮ್ಮ ಆರೂ ಪ್ರಯತ್ನಗಳಲ್ಲಿ ಒಂದೇ ಒಂದು ಯಶಸ್ವಿ ಎಸೆತವಿಲ್ಲದೆ, ಎಲ್ಲವನ್ನು ಫೌಲ್ ಮಾಡಿಕೊಂಡ ರಂಜೀತ್ ಪದಕ ಸುತ್ತಿನಿಂದ ಹೊರಬಿದ್ದರು.
24 ವರ್ಷದ ಫರಿದಾಬಾದ್ನ ರಂಜೀತ್ 2019ರ ಮೊರಕ್ಕಾನ್ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ 4ನೇ ಸ್ಥಾನ ಪಡೆದಿದ್ದರು. ಗುರುಗ್ರಾಮ್ನಲ್ಲಿ ನಡೆದ ರಾಜ್ಯ ಮಟ್ಟದ ಟೂರ್ನಮೆಂಟ್ ಮತ್ತು ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದು ಟೋಕಿಯೋ ಪ್ಯಾರಾಲಿಂಪಿಕ್ಸ್ಗೆ ಅರ್ಹತೆ ಸಂಪಾದಿಸಿದ್ದರು.
ಇದಕ್ಕೂ ಮುನ್ನ ಭಾರತದ ಭಾವಿನಾಬೆನ್ ಪಟೇಲ್ ಪ್ಯಾರಅ ಟೇಬಲ್ ಟೆನಿಸ್ನಲ್ಲಿ ಫೈನಲ್ ತಲುಪಿ ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿದ್ದರು. ಈ ಮೂಲಕ ಫೈನಲ್ ಈ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಪ್ಯಾಡ್ಲರ್ ಎನಿಸಿಕೊಂಡಿದ್ದರು. ಅವರು ಸೆಮಿಫೈನಲ್ನಲ್ಲಿ ವಿಶ್ವದ 3ನೇ ಶ್ರೇಯಾಂಕದ ಚೀನಾದ ಮಿಯಾವೊ ಜಾಂಗ್ ವಿರುದ್ಧ 3-2ರಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದರು.
ಭಾರತದ ಪ್ಯಾರಾ ಆರ್ಚರ್ ರಾಕೇಶ್ ಭಾರತದ ಪ್ಯಾರಾ ಆರ್ಚರ್ ರಾಕೇಶ್ ಹಾಂಕಾಂಗ್ನ ಕಾ ಚುಯೆನ್ ನ್ಗಾಯ್ ಅವರನ್ನು 13 ಅಂಕಗಳ ಅಂತರದಿಂದ ಸುಲಭವಾಗಿ ಜಯಿಸಿ ಪ್ರೀ ಕ್ವಾರ್ಟರ್ ಫೈನಲ್ಸ್ಗೆ ಪ್ರವೇಶಿಸಿದ್ದಾರೆ.