ETV Bharat / sports

ಬೆಳ್ಳಿ ಗೆದ್ದರೂ 'ಚಿನ್ನ'ದಂತಹ ಮನಸು... ಟ್ರಕ್​ ಡ್ರೈವರ್​ಗಳಿಗೆ ಈ ರೀತಿ ಕೃತಜ್ಞತೆ​ ಹೇಳಿದ ಮೀರಾ! - ಟ್ರಕ್ ಡ್ರೈವರ್​ಗಳಿಗೆ ಚನು ಸಹಾಯ

ಮೀರಾಬಾಯಿ ಚನು ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ. ಇದರ ಹಿಂದೆ ನೂರಾರು ಜನರ ಪರಿಶ್ರಮವಿದೆ. ಅವರೆಲ್ಲರಿಗೂ ಬೆಳ್ಳಿ ಪದಕ ವಿಜೇತೆ ಇದೀಗ ಕೃತಜ್ಞತೆ ಸಲ್ಲಿಸಿದ್ದಾರೆ.

Olympian Mirabai Chanu
Olympian Mirabai Chanu
author img

By

Published : Aug 6, 2021, 5:18 PM IST

Updated : Aug 6, 2021, 5:25 PM IST

ಇಂಫಾಲ್​(ಮಣಿಪುರ): ಸಾಧನೆ ಮಾಡುವ ಪ್ರತಿ ವ್ಯಕ್ತಿಯ ಹಿಂದೆ ಸ್ಫೂರ್ತಿಯ ಕತೆ ಇರುತ್ತದೆ. ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತಕ್ಕಾಗಿ ಬೆಳ್ಳಿ ಪದಕ ಗೆದ್ದುಕೊಟ್ಟಿರುವ ಮೀರಾಬಾಯಿ ಚನು ಯಶಸ್ಸಿನ ಹಿಂದೆ ರೋಚಕ ಕತೆ ಇದೆ. ಕಷ್ಟದ ಸಮಯದಲ್ಲಿ ವೇಟ್​ ಲಿಪ್ಟರ್​ಗೆ ಸಹಾಯ ಮಾಡಿರುವ ನೂರಾರು ಜನರಿಗೆ ಇದೀಗ ಬೆಳ್ಳಿ ಪದಕ ವಿಜೇತೆ ಕೃತಜ್ಞತೆ ಸಲ್ಲಿಕೆ ಮಾಡಿದ್ದಾರೆ.

ತರಬೇತಿ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಮೀರಾಬಾಯಿ ಚನುಗೆ ಸಹಾಯ ಮಾಡಿರುವ 150 ಟ್ರಕ್​ ಡ್ರೈವರ್​​ ಹಾಗೂ ಹೆಲ್ಪರ್​ಗಳಿಗೆ ಇದೀಗ ಮೀರಾಬಾಯಿ ಚನು ಮಣಿಪುರಿ ಸ್ಕಾರ್ಫ್​​, ಶರ್ಟ್ಸ್ ನೀಡಿರುವ ಜೊತೆಗೆ ಊಟ ನೀಡಿದ್ದಾರೆ. ಈ ವೇಳೆ ಮಾತನಾಡಿರುವ ಅವರು ಕೃತಜ್ಞತೆ ಸಲ್ಲಿಕೆ ಮಾಡಿ, ಭಾವುಕರಾಗಿದ್ದಾರೆ.

  • What a kind gesture by our Olympic medalist @mirabai_chanu
    Today she rewarded truck drivers in Imphal who use to give her lift from home to sports academy during her early training days. Her home was more than 25 km from the Academy & there was no means of transport those days. pic.twitter.com/lxmpej8E3m

    — Rahul Trehan (@imrahultrehan) August 5, 2021 " class="align-text-top noRightClick twitterSection" data=" ">

ಏನಿದು ಮೀರಾಬಾಯಿ ಸ್ಟೋರಿ!

49 ಕೆಜಿ ವಿಭಾಗದ ವೇಟ್​ ಲಿಫ್ಟಿಂಗ್​ನಲ್ಲಿ ಮೀರಾ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದು, ಇದಕ್ಕೂ ಮೊದಲು ತಾವು ತರಬೇತಿ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಅನೇಕ ರೀತಿಯ ತೊಂದರೆ ಅನುಭವಿಸಿದ್ದಾರೆ. ಮೀರಾಬಾಯಿ ಅವರ ಗ್ರಾಮ ನೋಂಗ್​ಪಾಕ್​ ಕಾಕ್ಚಿಂಗ್​ ಮಣಿಪುರದ ರಾಜಧಾನಿ ಇಂಫಾಲ್​ನಿಂದ 25 ಕಿಲೋ ಮೀಟರ್ ದೂರದಲ್ಲಿತ್ತು. ನಿತ್ಯ ಅಲ್ಲಿಗೆ ತೆರಳಲು ಅನೇಕ ಟ್ರಕ್ ಡ್ರೈವರ್​ಗಳು ಮೀರಾಗೆ ಲಿಫ್ಟ್​ ನೀಡುತ್ತಿದ್ದರು.

ಇದನ್ನೂ ಓದಿರಿ: ವೈದ್ಯಕೀಯ ಚಿಕಿತ್ಸೆಗಾಗಿ ಪಿಎಂ ಅಮೆರಿಕಕ್ಕೆ ಕಳುಹಿಸಿದ್ದು ನಿಜ, ತರಬೇತಿ ವೇಳೆ ಸಾಕಷ್ಟು ಸಹಾಯ: ಮೀರಾಬಾಯಿ ಚನು!

ಇದೀಗ ಅವರಿಗೆ ಮೀರಾಬಾಯಿ ಕೃತಜ್ಞತೆ ಸಲ್ಲಿಕೆ ಮಾಡಿದ್ದಾರೆ. ಒಂದು ವೇಳೆ ನೀವೂ ನನಗೆ ಲಿಫ್ಟ್​ ನೀಡದಿದ್ದರೆ ನಾನು ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಸಹಾಯಕ್ಕಾಗಿ ನಾನು ಯಾವಾಗಲೂ ಆಭಾರಿಯಾಗಿರುತ್ತೇನೆ ಎಂದು ಕಣ್ಣೀರು ಸಹ ಹಾಕಿದ್ದಾರೆ.

ಟೋಕಿಯೋದಲ್ಲಿ ಚಿನ್ನದ ಪದಕ ಗೆದ್ದು ಭಾರತಕ್ಕೆ ಬಂದ ತಕ್ಷಣವೇ ಟ್ರಕ್​ ಡ್ರೈವರ್​ಗಳ ಹುಡುಕಾಟದಲ್ಲಿ ಮಗ್ನವಾಗಿದ್ದ ಮೀರಾಬಾಯಿ ಚನು ಇಂದು ಸಣ್ಣದಾದ ಕಾರ್ಯಕ್ರಮ ಆಯೋಜನೆ ಮಾಡಿ, ಅವರಿಗೆ ಸಹಾಯ ಮಾಡಿದ್ದಾರೆ.

Last Updated : Aug 6, 2021, 5:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.