ETV Bharat / sports

ಪಾಣಿಪತ್​​ to ಟೋಕಿಯೋ.. ಚಿನ್ನದ ಪದಕ ಗೆದ್ದ ರೈತನ ಮಗನ ಸಾಧನೆಯ ಹಾದಿ ಹೀಗಿತ್ತು!

author img

By

Published : Aug 7, 2021, 8:00 PM IST

Updated : Aug 7, 2021, 8:16 PM IST

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿರುವ ನೀರಜ್​ ಚೋಪ್ರಾ ಚಿನ್ನದ ಪದಕಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದು, ಈಮೂಲಕ ಹೊಸದೊಂದು ಸಾಧನೆ ಮಾಡಿದ್ದಾರೆ.

Neeraj Chopra
Neeraj Chopra

ಹೈದರಾಬಾದ್​: ಭಾರತದ ಭರವಸೆಯ ಜಾವಲಿನ್ ಪಟು ನೀರಜ್ ಚೋಪ್ರಾ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದು, ಈ ಮೂಲಕ ಭಾರತ ಈ ಹಿಂದೆ ಮಾಡದಂತಹ ದಾಖಲೆ ಬರೆದಿದ್ದಾರೆ. 20 ವರ್ಷಗಳ ಬಳಿಕ ಭಾರತಕ್ಕೆ ಅಥ್ಲೀಟ್ಸ್​ನಲ್ಲಿ ಚಿನ್ನದ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿರುವ ನೀರಜ್ ಚೋಪ್ರಾ, ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಎಸೆದು, ಈ ಸಾಧನೆ ಮಾಡಿದ್ದಾರೆ.

Neeraj Chopra
ಚಿನ್ನದ ಪದಕ ಗೆದ್ದ ರೈತನ ಮಗ

ನೀರಜ್ ಚೋಪ್ರಾ ಹರಿಯಾಣದ ಪಾಣಿಪತ್ ಬಳಿಯ ಖಂಡ್ರಾ ಗ್ರಾಮದವರು. ಕೂಡು ಕುಟುಂಬದಿಂದ ಬಂದ ನೀರಜ್ ಚೋಪ್ರಾ ಕುಟುಂಬದಲ್ಲಿ 16 ಜನರಿದ್ದಾರೆ. ಇವರ ತಂದೆ ಕೃಷಿಕ. ಇವರಿಗೆ ನೀಡುತ್ತಿದ್ದ ಪ್ಯಾಕೇಟ್​ ಮನಿಯಿಂದಲೇ ಸಲಕರಣೆ ಖರೀದಿಸಿ ನೀರಜ್ ಅಭ್ಯಾಸ ಮಾಡುತ್ತಿದ್ದರು. ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದುಕೊಂಡಿರುವ ಇವರು, ಭಾರತೀಯ ಸೇನೆಯಲ್ಲಿ ಸುಬೇದಾರ್ ಕೆಲಸ ಮಾಡುತ್ತಿದ್ದಾರೆ.

ನೀರಜ್​ ಚೋಪ್ರಾ ಸಾಧನೆ ಹಾದಿ

ಕಳೆದ ಜೂನ್​ ತಿಂಗಳಲ್ಲಿ ಲಿಸ್ಬನ್ ವಿಶ್ವವಿದ್ಯಾಲಯದಲ್ಲಿ ನಡೆದ ಸಿಟಿ ಆಫ್‌ ಲಿಸ್ಬನ್‌ ಅಥ್ಲೆಟಿಕ್ಸ್ ಟೂರ್ನಿಯಲ್ಲಿ 83.18 ಮೀಟರ್ ದೂರ ಜಾವಲಿನ್ ಎಸೆಯುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ನೀರಜ್​, ಪ್ರತಿಕೂಲ ಹವಾಮಾನದ ಹೊರತಾಗಿಯೂ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಸಾಕಷ್ಟು ಗಾಳಿ ಇದ್ದರೂ ಸಹ ಏಷ್ಯನ್ ಗೇಮ್ಸ್‌ ಜಾವಲಿನ್ ಚಾಂಪಿಯನ್‌ 83.18 ಮೀಟರ್ ದೂರ ಎಸೆದಿದ್ದರು.

Neeraj Chopra
ಭಾರತದ ಕೀರ್ತಿ ಪತಾಕೆ ಹಾರಿಸಿರುವ ನೀರಜ್​ ಚೋಪ್ರಾ

ಫೆಡರೇಶನ್ ಕಪ್‌ನಲ್ಲಿ ಸಾಧನೆ

ಮೊಣಕೈ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ಸುಮಾರು ಒಂದು ವರ್ಷದ ನಂತರ ಮತ್ತೆ ಟ್ರ್ಯಾಕ್‌ಗೆ ಬಂದ ಚೋಪ್ರಾ ತಮ್ಮ ವಿರುದ್ಧ ಕೆಲವರು ಹೊಂದಿದ್ದ ಅಪನಂಬಿಕೆಗಳು ತಪ್ಪೆಂದು ಸಾಬೀತುಪಡಿಸಲು ಅತ್ಯುನ್ನತ ಪ್ರದರ್ಶನವನ್ನು ನೀಡುವ ಅನಿವಾರ್ಯತೆ ಎದುರಾಗಿತ್ತು . ಅವರು ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ರು. ಕೆಲವು ದಿನಗಳ ಹಿಂದೆ ಪಟಿಯಾಲದಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ, ಚೋಪ್ರಾ ಜಾವಲಿನ್​ ಅನ್ನು 87.80 ಮೀ. ಎಸೆಯುವ ಮೂಲಕ ಮತ್ತೊಂದು ಸ್ಥಿರತೆಯ ಪ್ರದರ್ಶನ ನೀಡಿದ್ರು.

ಇದು ಅವರ ಮೊದಲ ಪ್ರಮುಖ ಪ್ರಶಸ್ತಿಯಾದ ವಿಯೆಟ್ನಾಂನಲ್ಲಿ ನಡೆದ ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್ ಚಿನ್ನವನ್ನು ಗೆದ್ದಾಗ 2016 ರಲ್ಲಿ ಪ್ರಾರಂಭವಾದ ಕ್ರೀಡಾ ಸ್ಥಿರತೆಯ ಮುಂದುವರಿಕೆಯಾಗಿದೆ. ಅವರು ಈ ಹಿಂದೆ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ನಲ್ಲಿ ಚಿನ್ನವನ್ನು ಗೆದ್ದು ಬೀಗಿದ್ದ ಪೋಲೆಂಡ್​​ನಲ್ಲಿ ಮುಂದಿನ ತಿಂಗಳು ಉತ್ತಮ ಪ್ರದರ್ಶನ ನೀಡಿದ್ದರು.

Neeraj Chopra
ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ

ಕಾಂಟಿನೆಂಟಲ್ ಚಾಂಪಿಯನ್‌ಶಿಪ್ ಅಲ್ಲಿ 85.23 ಮೀಟರ್ ದೂರ ಎಸೆದು ಸಾಧನೆ

2017 ರಲ್ಲಿ ಭುವನೇಶ್ವರದಲ್ಲಿ ನಡೆದ ಕಾಂಟಿನೆಂಟಲ್ ಚಾಂಪಿಯನ್‌ಶಿಪ್ ಅಲ್ಲಿ 85.23 ಮೀಟರ್ ಜಾವಲಿನ್​ ಎಸೆದದ್ದು 23 ರ ಹರೆಯದ ನೀರಜ್ ಚೋಪ್ರಾ ಅವರು ಏಷ್ಯನ್ ಟ್ರ್ಯಾಕ್‌ನಲ್ಲಿ ತೋರಿದ ಉತ್ತಮ ಪ್ರದರ್ಶನ. ಇವರ ಪ್ರದರ್ಶನಗಳನ್ನು ಗಮನಿಸಿದ ಹಲವರು ಇವರು ಭಾರತದ ಅಥ್ಲೆಟಿಕ್ಸ್​​ನ ಭರವಸೆಯ ಕಿರಣ ಎನ್ನಲಾಯ್ತು.

ಏಪ್ರಿಲ್ 2018 ರಲ್ಲಿ, ಅವರು 86.47 ಮೀಟರ್ ಜಾವಲಿನ್​ ಎಸೆತದಿಂದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಈ ಸಾಧನೆಯೊಂದಿಗೆ, ಚೋಪ್ರಾ ಕಾಮನ್​​ವೆಲ್ತ್​ ಗೇಮ್​ನಲ್ಲಿ ಜಾವೆಲಿನ್ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Neeraj Chopra
87.58 ಮೀಟರ್ ಎಸೆದು ದಾಖಲೆ

ದೋಹಾ ಡೈಮಂಡ್ ಲೀಗ್‌ನಲ್ಲಿ ಈ ಬಾರಿ 87.43 ಮೀಟರ್ ಎಸೆದದ್ದು, ಅವರ ವೈಯಕ್ತಿಕ ಅತ್ಯುತ್ತಮ ಸಾಧನೆಯನ್ನು ಇನ್ನಷ್ಟು ಸುಧಾರಿಸಿತು. ಆಸ್ಟ್ರೇಲಿಯಾದ ತೀರದಲ್ಲಿ ಗೆದ್ದು ಭಾರತೀಯರನ್ನು ದಿಗ್ಭ್ರಮೆಗೊಳಿಸಿದ ನಾಲ್ಕು ತಿಂಗಳ ನಂತರ, ಚೋಪ್ರಾ 88.06 ಮೀಟರ್ ಅದ್ಭುತ ಎಸೆತದಿಂದ ಏಷ್ಯನ್ ಗೇಮ್ಸ್ ಚಿನ್ನವನ್ನು ಗೆಲ್ಲುವ ಮೂಲಕ ತಮ್ಮ ಶ್ರೇಷ್ಠ ವೃತ್ತಿಜೀವನಕ್ಕೆ ಮತ್ತೊಂದು ಪ್ರಶಸ್ತಿಯ ಗರಿ ಸೇರಿಸಿದರು.

ಈ ಜಕಾರ್ತಾ ಏಷ್ಯಾಡ್ ಪ್ರದರ್ಶನವೇ ನೀರಜ್ ಚೋಪ್ರಾ ಅವರನ್ನು ಟೋಕಿಯೊದಲ್ಲಿ ಭಾರತಕ್ಕೆ ಪದಕ ತಂದುಕೊಡುವ ಭರವಸೆಯ ಅಥ್ಲೆಟಿಕ್​ ಆಗಿ ಮಾಡಿದೆ. ಯಶಸ್ಸು ಬರುತ್ತಿದ್ದಂತೆ, ಯುವ ಜಾವಲಿನ್​ ಥ್ರೋ ಎಸೆತಗಾರನ ಮೇಲಿನ ಸುತ್ತಲೂ ನಿರೀಕ್ಷೆಗಳು ಕೂಡ ಗಗನಕ್ಕೇರಿದ್ದವು.

Neeraj Chopra
ರೈತ ಕುಟುಂಬದಲ್ಲಿ ಜನಿಸಿದ ನೀರಜ್​ ಚೋಪ್ರಾ

ಇನ್ನು ಯುರೋಪ್ ಪ್ರವಾಸವು ನೀರಜ್​ ಮಟ್ಟಿಗೆ ಅತ್ಯುತ್ತಮ ಪ್ರದರ್ಶನವನ್ನು ಪ್ರದರ್ಶಿಸುವ ವೇದಿಕೆಯಾಗಿರಲಿಲ್ಲ, ಏಕೆಂದರೆ ಟೋಕಿಯೊದಲ್ಲಿ ತನ್ನ ಅತ್ಯುತ್ತಮ ನೀಡಲು ಪ್ರದರ್ಶನ ನೀಡಲು ಗಾಯದಿಂದ ಮುಕ್ತವಾಗಿರಬೇಕಿತ್ತು. ಅವರು ವೀಸಾ ಸಮಸ್ಯೆಗಳಿಂದಾಗಿ ಲಂಡನ್ ಡೈಮಂಡ್ ಲೀಗ್‌ ಮಿಸ್​ ಮಾಡಿಕೊಂಡರು. ಅದರ ಬದಲಿಗೆ ತರಬೇತಿಯತ್ತ ಗಮನ ಹರಿಸಿದರು.

ಕಳೆದ ತಿಂಗಳು ಫಿನ್‌ಲ್ಯಾಂಡ್‌ನ ಕುರ್ಟೇನ್‌ನಲ್ಲಿ, ನಡೆಯುತ್ತಿರುವ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತೀಯ ಜಾವೆಲಿನ್ ಎಸೆತಗಾರನಿಗೆ ಜರ್ಮನಿಯ ಜೊಹಾನ್ಸ್ ವೆಟ್ಟರ್ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೋದ ಕೆಶಾರ್ನ್ ವಾಲ್ಕಾಟ್ ಅವರೊಂದಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿತು. ಇದರಲ್ಲಿ ನೀರಜ್​ ಮೂರನೇ ಸ್ಥಾನ ಗಳಿಸಿದ್ರು.

ಇಂದು ನಡೆದ ಫೈನಲ್ ಪಂದ್ಯದಲ್ಲಿ ನೀರಜ್​ ಚೋಪ್ರಾ ದಿಗ್ಗಜರಿಗೆ ಮಣ್ಣು ಮುಕ್ಕಿಸಿ, ಹೊಸ ದಾಖಲೆ ಬರೆದಿದ್ದು, ಜಾವಲಿನ್​ ಥ್ರೋದಲ್ಲಿ ವಿಶ್ವದ ನಂಬರ್​.1 ಜಾವಲಿನ್ ಥ್ರೋ ಪಟು ಜೊಹಾನಸ್‌ ವೆಟ್ಟರ್​ ಅವರನ್ನು ಹಿಂದಿಕ್ಕಿರುವುದು ಮಾತ್ರ ಗಮನಾರ್ಹ ಸಾಧನೆಯಾಗಿದೆ.

ನೀರಜ್​ ಚೋಪ್ರಾ ಸಾಧನೆ

  • ಏಷ್ಯನ್ ಗೇಮ್ಸ್ 2018: ಚಿನ್ನದ ಪದಕ
  • ಕಾಮನ್ವೆಲ್ತ್ ಗೇಮ್ಸ್ 2018: ಚಿನ್ನದ ಪದಕ
  • ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2017: ಚಿನ್ನದ ಪದಕ
  • ವಿಶ್ವ U-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2016: ಚಿನ್ನದ ಪದಕ
  • ದಕ್ಷಿಣ ಏಷ್ಯನ್ ಗೇಮ್ಸ್ 2016: ಚಿನ್ನದ ಪದಕ
  • ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್ 2016: ಬೆಳ್ಳಿ ಪದಕ
  • ರಾಷ್ಟ್ರೀಯ ದಾಖಲೆ (88.07 ಮೀ 2021)
  • ಒಲಿಂಪಿಕ್ಸ್​ನಲ್ಲಿ ದಾಖಲೆ(87.58 ಮೀಟರ್​)

Last Updated : Aug 7, 2021, 8:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.