ETV Bharat / sports

Tokyo Olympics: ಹರ್ಡಲ್ಸ್​​ನಲ್ಲಿ ತನ್ನದೇ ವಿಶ್ವದಾಖಲೆ ಮುರಿದ ಆಟಗಾರ್ತಿ!

ಒಲಿಂಪಿಕ್ಸ್ ಮಹಿಳೆಯ ಹರ್ಡಲ್ಸ್​ನಲ್ಲಿ ಅಮೆರಿಕದ ಸಿಡ್ನಿ ಮೆಕ್​ಲಾಫ್ಲಿನ್ ವಿಶ್ವದಾಖಲೆ ಮಾಡಿದ್ದಾರೆ.

McLaughlin wins hurdles gold, sets world record
ಮೆಕ್​ಲಾಫ್ಲಿನ್ ವಿಶ್ವ ದಾಖಲೆ
author img

By

Published : Aug 4, 2021, 9:21 AM IST

ಟೋಕಿಯೋ: ಒಲಿಂಪಿಕ್ಸ್​ ಮಹಿಳೆಯರ 400 ಮೀಟರ್ ಹರ್ಡಲ್ಸ್​​ನಲ್ಲಿ ಗೆಲುವು ಸಾಧಿಸುವ ಮೂಲಕ ಅಮೆರಿಕದ ಸಿಡ್ನಿ ಮೆಕ್​ಲಾಫ್ಲಿನ್ ತನ್ನದೇ ವಿಶ್ವದಾಖಲೆಯನ್ನು ಮುರಿದರು. ಮೆಕ್​ಲಾಫ್ಲಿನ್ ಕೇವಲ 51.46 ಸೆಕೆಂಡುಗಳಲ್ಲಿ ತನ್ನ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಮೆಕ್​ಲಾಫ್ಲಿನ್ ಯುಎಸ್​ನ ದಾಲಿಯಾ ಮುಹಮ್ಮದ್ ಅವರನ್ನು 1-2 ಅಂಕಗಳ ಅಂತರದಿಂದ ಸೋಲಿಸಿದ್ದಾರೆ. ಮಾಜಿ ವಿಶ್ವ ಚಾಂಪಿಯನ್ ದಾಲಿಯಾ ಮುಹಮ್ಮದ್​ ಬೆಳ್ಳಿ ಪದಕಕ್ಕೆ ತೃಪ್ತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಚಿನ್ನಕ್ಕಾಗಿ ಇಂದು ಲವ್ಲಿನಾ ಪೈಪೋಟಿ: ಪಂದ್ಯ ವೀಕ್ಷಿಸಲು ಅಸ್ಸೋಂ ಕಲಾಪ ಮುಂದೂಡಿಕೆ, ರೆಡಿಯಾಗ್ತಿದೆ ರಸ್ತೆ!

ಕಳೆದ ಜೂನ್​ನಲ್ಲಿ ನಡೆದ ಒಲಿಂಪಿಕ್ಸ್​ ಕ್ವಾಲಿಫೈರ್ ಪಂದ್ಯದಲ್ಲಿ 51.90 ಸೆಕೆಂಡುಗಳಲ್ಲಿ ಗುರಿ ಮುಟ್ಟುವ ಮೂಲಕ ಮೆಕ್​ಲಾಫ್ಲಿನ್ ವಿಶ್ವದಾಖಲೆ ಮಾಡಿದ್ದರು.

ಮುಹಮ್ಮದ್ 2019ರಲ್ಲಿ ಎರಡು ಬಾರಿ ವಿಶ್ವ ದಾಖಲೆಯನ್ನು ಮಾಡಿದ್ದರು ಮತ್ತು ಅದೇ ವರ್ಷ ವಿಶ್ವ ಚಾಂಪಿಯನ್​ಶಿಪ್​ನಲ್ಲಿ 51.58 ಸೆಕೆಂಡುಗಳಲ್ಲಿ ಗುರಿ ಮುಟ್ಟುವ ಮೂಲಕ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದರು.

ಬುಧವಾರ ನಡೆದ ಒಲಿಂಪಿಕ್ಸ್ ಹರ್ಡಲ್ಸ್​​ನಲ್ಲಿ 52.03 ಸೆಕೆಂಡುಗಳಲ್ಲಿ ಗುರಿಮುಟ್ಟುವ ಮೂಲಕ ನೆದರ್​​ಲ್ಯಾಂಡ್​ನ ಫೆಮ್ಕ್​ ಬೋಲ್ ಕಂಚಿನ ಪದಕ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.