ಟೋಕಿಯೋ: ಮಹತ್ವದ ಹಾಕಿ ಪಂದ್ಯವೊಂದರಲ್ಲಿ ಐರ್ಲೆಂಡ್ ವಿರುದ್ಧ ಗ್ರೇಟ್ ಬ್ರಿಟನ್ ಮಹಿಳಾ ಹಾಕಿ ತಂಡ ಗೆಲುವು ದಾಖಲು ಮಾಡಿದ್ದು, ಇದು ಭಾರತಕ್ಕೆ ವರವಾಗಿ ಪರಿಣಮಿಸಿದೆ. ಹೀಗಾಗಿ 4ನೇ ತಂಡವಾಗಿ ಭಾರತದ ಮಹಿಳಾ ಹಾಕಿ ತಂಡ ಇದೀಗ ಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕಿದೆ. ಈ ಮೂಲಕ ಹೊಸದೊಂದು ದಾಖಲೆ ನಿರ್ಮಾಣ ಮಾಡಿದೆ.
-
UPDATE: Indian Women's #Hockey team have made it to the knockout stages of #Tokyo2020!!!
— SAIMedia (@Media_SAI) July 31, 2021 " class="align-text-top noRightClick twitterSection" data="
We will take on Australia next. First, Vandana becomes the first 🇮🇳 woman hockey player to score a hat-trick at #Olympics, and now this. WHAT A DAY!#Cheer4India pic.twitter.com/ypNWXzP6zO
">UPDATE: Indian Women's #Hockey team have made it to the knockout stages of #Tokyo2020!!!
— SAIMedia (@Media_SAI) July 31, 2021
We will take on Australia next. First, Vandana becomes the first 🇮🇳 woman hockey player to score a hat-trick at #Olympics, and now this. WHAT A DAY!#Cheer4India pic.twitter.com/ypNWXzP6zOUPDATE: Indian Women's #Hockey team have made it to the knockout stages of #Tokyo2020!!!
— SAIMedia (@Media_SAI) July 31, 2021
We will take on Australia next. First, Vandana becomes the first 🇮🇳 woman hockey player to score a hat-trick at #Olympics, and now this. WHAT A DAY!#Cheer4India pic.twitter.com/ypNWXzP6zO
ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ 2-0 ಅಂತರದಿಂದ ಗೆಲುವು ದಾಖಲು ಮಾಡಿದೆ. ಇದಕ್ಕೂ ಮೊದಲು ನಡೆದಿದ್ದ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಭಾರತ ಮಹಿಳಾ ತಂಡ 4-3 ಅಂತರದಿಂದ ಗೆಲುವು ದಾಖಲು ಮಾಡಿ ಕ್ವಾರ್ಟರ್ಫೈನಲ್ ಆಸೆ ಜೀವಂತವಾಗಿಟ್ಟುಕೊಂಡಿತ್ತು. ಈ ಪಂದ್ಯದಲ್ಲಿ ಭಾರತದ ಪರ ವಂದನಾ ಕಟಾರಿಯಾ ಮೂರು ಗೋಲು ಹಾಗೂ ನೇಹಾ ಒಂದು ಗೋಲ್ ಬಾರಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದರು.
ಇದನ್ನೂ ಓದಿರಿ: ಪದಕ ರಹಿತವಾಗಿ ಬಂದಿದ್ದಕ್ಕೆ ಕ್ಷಮೆ ಕೋರುವೆ: ಒಲಿಂಪಿಕ್ಸ್ನಲ್ಲಿ ನನಗೆ 'ಮಹಾಮೋಸ' ಎಂದ ಮೇರಿ ಕೋಮ್!
ಗ್ರೂಪ್ ‘ಎ’ ವಿಭಾಗದಲ್ಲಿ ಭಾರತ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೊದಲೆರಡು ಪಂದ್ಯಗಳಲ್ಲಿ ಸೋತು ನಂತರದ ಎರಡು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿತ್ತು. ಹೀಗಾಗಿ ಕ್ವಾರ್ಟರ್ಫೈನಲ್ ಆಸೆ ಜೀವಂತವಾಗಿಟ್ಟುಕೊಂಡಿತು.
ಇದೀಗ ಗ್ರೇಟ್ ಬ್ರಿಟನ್ ಗೆಲುವು ದಾಖಲು ಮಾಡಿರುವ ಕಾರಣ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಮಹಿಳಾ ಹಾಕಿ ತಂಡವು ಮೊದಲ ಬಾರಿಗೆ ನಾಕೌಟ್ ಪ್ರವೇಶಿಸಿರುವ ಸಾಧನೆ ಮಾಡಿದೆ. ಕ್ವಾರ್ಟರ್ ಫೈನಲ್ನ ಮೊದಲ ಪಂದ್ಯದಲ್ಲಿ ರಾಣಿ ರಾಂಪಾಲ್ ನೇತೃತ್ವದ ಭಾರತದ ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ.
ಒಲಿಂಪಿಕ್ಸ್ನಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಮೊದಲ ಭಾರತೀಯ ಆಟಗಾರ್ತಿ
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಆಟಗಾರ್ತಿ ವಂದನಾ ಕಟಾರಿಯಾ ಹ್ಯಾಟ್ರಿಕ್ ಗೋಲು ಗಳಿಸುವ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾರೆ. ಈ ಮೂಲಕ ಒಲಿಂಪಿಕ್ಸ್ನಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿರುವ ಭಾರತದ ಮೊದಲ ಆಟಗಾರ್ತಿ ಆಗಿ ಹೊರಹೊಮ್ಮಿದ್ದಾರೆ.