ನವದೆಹಲಿ: ಜಪಾನ್ನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನಲ್ಲಿ ಭಾರತದ ನೂರಾರು ಅಥ್ಲೀಟ್ಸ್ ಭಾಗಿಯಾಗಿದ್ದಾರೆ. ಈಗಾಗಲೇ ಕೆಲ ಸ್ಪರ್ಧಿಗಳು ನಿರಾಸೆ ಅನುಭವಿಸಿ, ಟೂರ್ನಿಯಿಂದ ಹೊರಬಿದ್ದಿದ್ದು, ಕೆಲ ಅಥ್ಲೀಟ್ಸ್ಗಳು ಪದಕ ಗೆಲುವತ್ತ ಮುನ್ನುಗಿದ್ದಾರೆ.
ವಿವಿಧ ರಾಜ್ಯಗಳಿಂದ ಟೋಕಿಯೋ ಒಲಿಂಪಿಕ್ಸ್ನಲ್ಲಿ ಅಥ್ಲೀಟ್ಸ್ ಭಾಗಿಯಾಗಿದ್ದು, ಇದರಲ್ಲಿ ಶೇ. 20ರಷ್ಟು ಸ್ಪರ್ಧಾಳುಗಳು ಭಾರತೀಯ ರೈಲ್ವೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತೀಯ ರೈಲ್ವೆಯಲ್ಲಿ ಸೇವೆ ಸಲ್ಲಿಸುತ್ತಿರುವ 25 ಅಥ್ಲೀಟ್ಸ್ , 5 ಕೋಚ್ ಹಾಗೂ ಓರ್ವ ಪಿಸಿಯೋ ಇದರಲ್ಲಿ ಭಾಗಿಯಾಗಿದ್ದಾರೆ.
ಬಂಪರ್ ಬಹುಮಾನ ಘೋಷಣೆ
ಒಲಿಂಪಿಕ್ಸ್ನಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆಲ್ಲುವ ಪ್ಲೇಯರ್ಸ್ಗಳಿಗೆ ಇದೀಗ ಬಂಪರ್ ಬಹುಮಾನ ಘೋಷಣೆ ಮಾಡಲಾಗಿದೆ. ಚಿನ್ನ ಗೆದ್ದರೆ 3 ಕೋಟಿ ರೂ, ಬೆಳ್ಳಿ ಪದಕ ಗೆಲ್ಲುವ ಅಥ್ಲೀಟ್ಸ್‌ಗೆ 2 ಕೋಟಿ ಹಾಗೂ ಕಂಚಿನ ಪದಕ ಗೆಲ್ಲುವ ಸ್ಪರ್ಧಿಗಳಿಗೆ 1 ಕೋಟಿ ರೂ. ನೀಡಲು ಮುಂದಾಗಿದೆ. ಉಳಿದಂತೆ 8ನೇ ಸ್ಥಾನದೊಳಗೆ ಬಂದರೆ 35 ಲಕ್ಷ ರೂ. ಸ್ಪರ್ಧೆಯಲ್ಲಿ ಭಾಗಿಯಾಗಿರುವ ಸ್ಪರ್ಧಾಳುಗಳಿಗೆ 7.5 ಲಕ್ಷ ರೂ. ನೀಡುವುದಾಗಿ ತಿಳಿಸಿದೆ.
ಇದನ್ನೂ ಓದಿ: ಭಾರತ vs ಶ್ರೀಲಂಕಾ 2ನೇ ಟಿ20: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಲಂಕಾ
ಚಿನ್ನದ ಪದಕ ಗೆಲ್ಲುವ ಅಥ್ಲೀಟ್ಸ್ಗಳ ಕೋಚ್ಗಳಿಗೆ 25 ಲಕ್ಷ ರೂ. ಬೆಳ್ಳಿ ಗೆಲ್ಲುವ ಸ್ಪರ್ಧಿಗಳ ಕೋಚ್ಗೆ 20 ಲಕ್ಷ ಹಾಗೂ ಕಂಚಿನ ವಿಜೇತ ಸ್ಪರ್ಧಿಯ ಕೋಚ್ಗೆ 15 ಲಕ್ಷ ರೂ. ನೀಡಲು ನಿರ್ಧರಿಸಿದೆ. ಉಳಿದ ಕೋಚ್ಗಳಿಗೆ 7.5 ಲಕ್ಷ ರೂ. ನೀಡಲಿದೆ. ವೇಟ್ ಲಿಫ್ಟಿಂಗ್ನಲ್ಲಿ ಈಗಾಗಲೇ ಬೆಳ್ಳಿ ಪದಕ ಗೆದ್ದಿರುವ ಮೀರಾಬಾಯಿ ಚನುಗೆ ರೈಲ್ವೆ ಇಲಾಖೆ 2 ಕೋಟಿ ರೂ. ಘೋಷಣೆ ಮಾಡಿದೆ.