ETV Bharat / sports

ಚಿನ್ನಕ್ಕಾಗಿ ಇಂದು ಲವ್ಲಿನಾ ಪೈಪೋಟಿ: ಪಂದ್ಯ ವೀಕ್ಷಿಸಲು ಅಸ್ಸೋಂ ಕಲಾಪ ಮುಂದೂಡಿಕೆ, ರೆಡಿಯಾಗ್ತಿದೆ ರಸ್ತೆ! - ಅಸ್ಸಾಂ ಗೋಲ್‌ಘಾಟ್

ಟೋಕಿಯೋ ಒಲಿಂಪಿಕ್ಸ್ ಮಹಿಳಾ ವಿಭಾಗದ ಬಾಕ್ಸಿಂಗ್​ನಲ್ಲಿ ಚಿನ್ನದ ಪದಕ ಪಡೆಯಲು ಹೋರಾಡುತ್ತಿರುವ ಭಾರತದ ಲವ್ಲಿನಾ ಬೋರ್ಗಹೈನ್​ನ ಗ್ರಾಮದ ಅಭಿವೃದ್ಧಿಗೆ ಸ್ಥಳೀಯ ಶಾಸಕ ಮುಂದಾಗಿದ್ದಾರೆ. ಇಂದು ಸೆಮಿಫೈನಲ್ ಎದುರಿಸಲಿರುವ ಲವ್ಲಿನಾ, ಗೆದ್ದು ಬರಲೆಂದು ದೇಶಾದ್ಯಂತ ಜನರು ಪ್ರಾರ್ಥಿಸುತ್ತಿದ್ದಾರೆ. ಲವ್ಲಿನಾ ಬಾಕ್ಸಿಂಗ್ ವೀಕ್ಷಿಸಲು ಅಸ್ಸೋಂ ವಿಧಾನಸಭೆಯ ಕಲಾಪವನ್ನೂ ಮುಂದೂಡಲಾಗಿದೆ.

Lovlina Borgohain medal
ಲವ್ಲಿನಾ ಬೋರ್ಗಹೈನ್​
author img

By

Published : Aug 4, 2021, 8:19 AM IST

ಗೋಲ್‌ಘಾಟ್ (ಅಸ್ಸೋಂ) ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಈಗಾಗಲೇ ಕಂಚಿನ ಪದಕ ಖಚಿತಪಡಿಸಿಕೊಂಡಿರುವ ಭಾರತದ ಬಾಕ್ಸರ್​​ ಲವ್ಲಿನಾ ಬೋರ್ಗಹೈನ್​ ಬುಧವಾರ (ಇಂದು) ನಡೆಯಲಿರುವ ಸೆಮಿಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ಅವರನ್ನು ಎದುರಿಸಲಿದ್ದಾರೆ.

ಒಂದು ವೇಳೆ ಇಲ್ಲಿ ಜಯ ಸಾಧಿಸಿದರೆ ಒಲಿಂಪಿಕ್ಸ್ ಇತಿಹಾಸದಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಬಾಕ್ಸರ್​ ಎಂಬ ಖ್ಯಾತಿಗೆ ಲವ್ಲಿನಾ ಪಾತ್ರರಾಗಲಿದ್ದಾರೆ. ಲವ್ಲಿನಾ ಅವರ ಈ ಸಾಧನೆ ದೇಶ ಮತ್ತು ಆಕೆಯ ತವರು ರಾಜ್ಯ ಅಸ್ಸೋಂಗೆ ಹೆಮ್ಮೆಯ ಸಂಗತಿಯೂ ಹೌದು.

ಲವ್ಲಿನಾ ಅವರ ಒಲಿಂಪಿಕ್ಸ್ ಸಾಧನೆ ಆಕೆಗೆ ಹೆಸರು ತಂದು ಕೊಟ್ಟಿದ್ದು ಮಾತ್ರವಲ್ಲದೆ, ಆಕೆಯ ಗ್ರಾಮದ ಲಕ್​ ಅನ್ನು ಬದಲಾಯಿಸಿದೆ. ಯಾಕೆಂದರೆ, ಲವ್ಲಿನಾ ಬಾಕ್ಸಿಂಗ್​​ನಲ್ಲಿ ಸಾಧನೆ ಮಾಡುತ್ತಿದ್ದಂತೆ, ಇದುವರೆಗೆ ಕನಿಷ್ಠ ಸೌಲಭ್ಯಗಳಿಲ್ಲದ ಆಕೆಯ ಊರು ಅಸ್ಸೋಂನ ಗೋಲ್‌ಘಾಟ್ ಜಿಲ್ಲೆಯ ಬರೋಮುಥಿಯಾ ಗ್ರಾಮದ ಅಭಿವೃದ್ದಿಗೆ ಜನಪ್ರತಿನಿಧಿಗಳು ಮುಂದಾಗಿದ್ದಾರೆ.

Tokyo Olympics
ಲವ್ಲಿನಾ ಯಶಸ್ವಿಗೆ ಪ್ರಾರ್ಥಿಸಿದ ಅಸ್ಸೋಂ ಸಿಎಂ

​ಪದಕ ಮತ್ತು ರಸ್ತೆ:

ಜುಲೈ 30 ರಂದು ನಡೆದ ಟೋಕಿಯೋ ಒಲಿಂಪಿಕ್ಸ್ ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯ ಕ್ವಾರ್ಟರ್​ ಫೈನಲ್​ನಲ್ಲಿ ಚೀನಾದ ತೈಪೆಯ ನೈಯಿನ್ ಚಿನ್​ ಚೆನ್​ ಅವರನ್ನು ಸೋಲಿಸಿ ಲವ್ಲಿನಾ ಕಂಚಿನ ಪದಕ ಖಚಿತಪಡಿಸಿಕೊಂಡಿದ್ದಾರೆ. ಬುಧವಾರ ನಡೆಯುವ ಸೆಮಿಫೈನಲ್​ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕಾಗಿ ಅವರು ಸೆಣಸಾಡಲಿದ್ದಾರೆ.

ಲವ್ಲಿನಾಗೆ ಕಂಚಿನ ಪದಕ ಖಚಿತವಾಗುತ್ತಿದ್ದಂತೆ ಆಕೆಯ ಗ್ರಾಮದ ಹದೆಗೆಟ್ಟ ರಸ್ತೆಯ ಅಭಿವೃದ್ದಿಗೆ ಸ್ಥಳೀಯ ಶಾಸಕ ಬಿಸ್ವಜಿತ್ ಫುಕಾನ್ ಮುಂದಾಗಿದ್ದಾರೆ. ಬರೋಮುಥಿಯಾ ಗ್ರಾಮದ ಲವ್ಲಿನಾ ಅವರ ಮನೆಗೆ ತೆರಳುವ ಸುಮಾರು 3.5 ಕಿ.ಮಿ ರಸ್ತೆ ಇದುವರೆಗೆ ಡಾಂಬರು ಕಂಡಿರಲಿಲ್ಲ. ಈ ರಸ್ತೆಯ ಅಭಿವೃದ್ದಿಯ ಬಗ್ಗೆ ಜನ ಪ್ರತಿನಿಧಿಗಳೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಇದೀಗ ಗ್ರಾಮದ ರಸ್ತೆಯನ್ನು ಅಭಿವೃದ್ದಿ ಮಾಡಲು ಶಾಸಕ ಮುಂದಾಗಿದ್ದಾರೆ. ಲೋಕೋಪಯೋಗಿ ಇಲಾಖೆಯ ಮೂಲಕ ರಸ್ತೆ ಅಭಿವೃದ್ದಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಇದು ಲವ್ಲಿನಾ ಅವರಿಗೆ ನಾವು ಕೊಡುತ್ತಿರುವ ಉಡುಗೊರೆ. ಲವ್ಲಿನಾ ಚಿನ್ನದ ಪಕದ ಗೆದ್ದು ಬರಲಿ ಎಂದು ಪ್ರಾರ್ಥಿಸುವಂತೆ ಅಸ್ಸೋಂ ಮತ್ತು ದೇಶದ ಜನರಲ್ಲಿ ನಾನು ಮನವಿ ಮಾಡುತ್ತೇನೆ. ಲವ್ಲಿನಾ ನಮ್ಮ ಜಿಲ್ಲೆಯಂತಹ ಸಣ್ಣ ಊರಿನ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ. ಈ ಪ್ರದೇಶದಲ್ಲಿ ವಿಶ್ವದರ್ಜೆಯ ಕ್ರೀಡಾ ಸೌಲಭ್ಯ ಒದಗಿಲು ನಾವು ಪ್ರಯತ್ನಿಸುತ್ತೇವೆ ಮತ್ತು ಇದಕ್ಕೆ ಅಸ್ಸೋಂ ಮುಖ್ಯಮಂತ್ರಿಯ ಸಹಾಯ ಕೋರುತ್ತೇವೆ ಎಂದು ಶಾಸಕ ಬಿಸ್ವಜಿತ್ ಫುಕಾನ್ ಹೇಳಿದ್ದಾರೆ.

ಒಲಿಂಪಿಕ್ಸ್​ನಲ್ಲಿ ಲವ್ಲಿನಾಗೆ ಪದಕ ಖಚಿತವಾಗುತ್ತಿದ್ದಂತೆ ನಮ್ಮ ಊರಿನ ರಸ್ತೆ ಅಭಿವೃದ್ದಿ ಕಾಮಗಾರಿ ಪ್ರಾರಂಭವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಲವ್ಲಿನಾ ಸಾಧನೆಯ ಹಾದಿ:

ಜುಲೈ 30 ರಂದು ನಡೆದ ಟೋಕಿಯೋ ಒಲಿಂಪಿಕ್ಸ್ ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯ ಸೆಮಿಫೈನಲ್​​ನಲ್ಲಿ ಚೀನಾದ ತೈಪೆಯ ನೈಯಿನ್ ಚಿನ್​ ಚೆನ್​ ಅವರನ್ನು ಸೋಲಿಸಿ ಲವ್ಲಿನಾ ಕಂಚಿನ ಪದಕ ಖಚಿತಪಡಿಸಿಕೊಂಡರು.

ಮುಯೆ ಥಾಯ್ (ಥಾಯ್ ಲ್ಯಾಂಡ್ ಮಾದರಿಯ ಬಾಕ್ಸಿಂಗ್) ತರಬೇತಿಯ ಮೂಲಕ ಬಾಕ್ಸಿಂಗ್​ನಲ್ಲಿ ತನ್ನ ವೃತ್ತಿ ಜೀವನ ಆರಂಭಿಸಿದ 23 ವರ್ಷದ ಲವ್ಲಿನಾ, ವಿಜೇಂದರ್ ಸಿಂಗ್ (2008) ಮತ್ತು ಎಂ.ಸಿ ಮೇರಿ ಕೋಮ್ (2012) ನಂತರ ಒಲಿಂಪಿಕ್ಸ್​​ನಲ್ಲಿ ಪದಕ ಖಚಿತಪಡಿಸಿಕೊಂಡ ಮೂರನೇ ಭಾರತೀಯ ಬಾಕ್ಸರ್ ಆಗಿದ್ದಾರೆ.

ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ಪಡೆದಿರುವ ಲವ್ಲಿನಾ, ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಅಸ್ಸೋಂನ ಮೊದಲ ಮಹಿಳಾ ಬಾಕ್ಸರ್ ಆಗಿದ್ದಾರೆ.

ಲವ್ಲಿನಾ ಬಾಕ್ಸಿಂಗ್ ವೀಕ್ಷಿಸಲು ಸದನ ಮುಂದೂಡಿಕೆ:

ಇಂದು, (ಆಗಸ್ಟ್‌ 4 ಬುಧವಾರ) ಒಲಿಂಪಿಕ್ ಸೆಮಿಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ಅವರನ್ನು ಲವ್ಲಿನಾ ಎದುರಿಸಲಿದ್ದಾರೆ. ಹಾಗಾಗಿ, ಅಸ್ಸೋಂ ವಿಧಾನಸಭಾ ಕಲಾಪವನ್ನು 20 ನಿಮಿಷ ಮುಂದೂಡಿಕೆ ಮಾಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಸಚಿವ ಪಿಜುಶ್ ಹಝಾರಿಕಾ ಮಾಹಿತಿ ನೀಡಿದ್ದಾರೆ.

ನಿನ್ನೆ (ಜುಲೈ 3 ಮಂಗಳವಾರ) ಗುವಾಹಟಿಯ ನೆಹರೂ ಕ್ರೀಡಾಂಗಣದಲ್ಲಿ ಮಣ್ಣಿನ ದೀಪ ಬೆಳಗಿಸಿದ ಅಸ್ಸೋಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ, 125 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಅಸ್ಸೋಮಿ ಬಾಕ್ಸರ್ ಚಿನ್ನದ ಪದಕದತ್ತ ದಾಪುಗಾಲಿಟ್ಟಿದ್ದಾರೆ. ಅವರು ವಿಜಯಿಯಾಗಿ ಬರಲಿ ಎಂದು ಪ್ರಾರ್ಥಿಸಿದ್ದಾರೆ.

ಕ್ರೀಡಾ ಮತ್ತು ಯುವಜನ ಕಲ್ಯಾಣ ಸಚಿವ ಬಿಮಲ್ ಬೋರಾ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಪಿಜುಶ್ ಹಝಾರಿಕಾ, ನಗರಾಭಿವೃದ್ಧಿ ಸಚಿವ ಅಶೋಕ್ ಸಿಂಘಾಲ್, ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಜೋಗನ್ ಮೋಹನ್ ಮತ್ತು ಅಸ್ಸೋಂ ಒಲಿಂಪಿಕ್ ಅಸೋಸಿಯೇಶನ್‌ನ ಹಲವಾರು ಪದಾಧಿಕಾರಿಗಳು ಮತ್ತು ಕ್ರೀಡಾ ಉತ್ಸಾಹಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.