ETV Bharat / sports

ರಿಂಗ್​ನಲ್ಲಿ ಕೈ ಎತ್ತಿ ಸಂಭ್ರಮಿಸಿದೆ, ಸೋತಿರುವುದನ್ನು ನಂಬಲು ಸಾಧ್ಯವಿಲ್ಲ: ಒಲಿಂಪಿಕ್ಸ್​​ನಲ್ಲಿ ಮೇರಿಗೆ ಮೋಸ?

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕೇವಲ 1 ಪಾಯಿಂಟ್​ಗಳ ಅಂತರದಿಂದ ಸೋಲು ಕಂಡಿರುವ ಮೇರಿ ಕೋಮ್​ ಇದೀಗ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Mary Kom
Mary Kom
author img

By

Published : Jul 29, 2021, 9:56 PM IST

Updated : Jul 29, 2021, 10:33 PM IST

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತದ ಭರವಸೆಯ ಬಾಕ್ಸರ್​ ಮೇರಿ ಕೋಮ್​ 2-3 ಅಂತರದಿಂದ ಸೋಲು ಕಾಣುವ ಮೂಲಕ ನಿರಾಸೆಗೊಳಗಾಗಿದ್ದಾರೆ. ಇದೀಗ ಇದೇ ವಿಚಾರವಾಗಿ ತಮ್ಮ ಅಭಿಪ್ರಾಯ ಹೊರಹಾಕಿರುವ ಬಾಕ್ಸಿಂಗ್​ ಚಾಂಪಿಯನ್​​ ಅಂಪೈರಿಂಗ್​ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಕೊಲಂಬಿಯಾ ಬಾಕ್ಸರ್​​​ ಇಂಗ್ರಿಟ್ ವೇಲೆನ್ಸಿಯಾ ವಿರುದ್ಧ ಪ್ರೀ ಕ್ವಾರ್ಟರ್​​ನ ಮೊದಲ ರೌಂಡ್​ನಲ್ಲಿ ಮೇರಿ ಕೋಮ್​ 4-1 ಅಂತರದಿಂದ ಸೋಲು ಕಂಡಿದ್ದಾರೆ. ಆದರೆ 2ನೇ ರೌಂಡ್​ನಲ್ಲಿ ಕಮ್​ಬ್ಯಾಕ್​ ಮಾಡಿ 3-2 ಅಂತರದಿಂದ ಗೆಲುವು ದಾಖಲಿದ್ದರು. ಇದಾದ ಬಳಿಕ ನಿರ್ಣಾಯಕ ರೌಂಡ್​ನಲ್ಲಿ ಮೇರಿ ಕೋಮ್​ ಎದುರಾಳಿಗೆ ಉತ್ತಮವಾದ ಪಂಚ್​ ನೀಡಿದ್ದರಿಂದ ತಾನೇ ಗೆದ್ದಿದ್ದೇನೆಂದು ರಿಂಗ್​ನಲ್ಲಿ ಸಂಭ್ರಮಿಸಿದ್ದರು. ಜೊತೆಗೆ ಕೈ ಮೇಲೆ ಎತ್ತಿ ತಮ್ಮ ಗೆಲುವಿನ ಸಂಭ್ರಮಾಚರಣೆ ಮಾಡಿದ್ದರು.

ಆದರೆ ಉದ್ದೀಪನ ಮದ್ದು ಸೇವನೆ ಪರೀಕ್ಷೆ ಮಾದರಿ ನೀಡಲು ಹೋಗಿದ್ದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಾನು ಸೋತಿರುವ ಸುದ್ದಿಗಳು ಬರಲು ಶುರುವಾಗಿದ್ದವು. ಈ ವೇಳೆ ನನ್ನ ಕೋಚ್​ ಕೂಡ ನನಗೆ ಮಾಹಿತಿ ನೀಡಿದರು. ಇದರಿಂದ ನಾನು ಆಘಾತಕ್ಕೊಳಗಾದೆ ಎಂದರು.

ಇದನ್ನೂ ಓದಿ: 6 ಸೆಕೆಂಡ್‌ ತಡ: 100 ಮೀಟರ್​​ ಬಟರ್​ ಫ್ಲೈ ಸೆಮಿಫೈನಲ್​ನಿಂದ ಹೊರಬಿದ್ದ ಸಜನ್​ ಪ್ರಕಾಶ್​​

ಸುದ್ದಿವಾಹಿನಿ ಜೊತೆ ಟೋಕಿಯೋದಿಂದಲೇ ಮಾತನಾಡಿರುವ ಮೇರಿ ಕೋಮ್​, ತಮ್ಮ ವಿರುದ್ಧ ಆಗಿರುವ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್​​ ನನ್ನ ಗೇಮ್​ನಲ್ಲಿ ಸರಿಯಾಗಿ ನಡೆದುಕೊಂಡಿಲ್ಲ. ನನ್ನ ಜೊತೆ ಈ ರೀತಿಯಾಗಿ ಮಾಡಬಾರದಿತ್ತು ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ವೇಲೆನ್ಸಿಯಾ ವಿರುದ್ಧ ನಾನು ಎರಡು ಸಲ ಗೆಲುವು ಸಾಧಿಸಿದ್ದೇನೆ. ಆದರೆ ರೆಫರಿ ಆಕೆಯ ಕೈ ಮೇಲೆ ಎತ್ತಿ ಗೆಲುವು ಘೋಷಣೆ ಮಾಡಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಕೆಟ್ಟದಾಗಿ ಅಂಪೈರಿಂಗ್ ಮಾಡಲಾಗಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸಲು ಸಾಧ್ಯವಿಲ್ಲದ ಕಾರಣ, ನಾನು ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದಿದ್ದಾರೆ.

ಮೇರಿ ಕೋಮ್​ಗೆ ಮೆಚ್ಚುಗೆ ಮಹಾಪೂರ

  • Dear Mary Kom, you lost in Tokyo Olympics by just one point but for me you are always a champion!
    You have achieved what no other female boxer in the world has ever achieved. You are a legend. India is proud of you🇮🇳
    BOXING & OLYMPICS will miss you @MangteC 🙏 pic.twitter.com/caBe555e87

    — Kiren Rijiju (@KirenRijiju) July 29, 2021 " class="align-text-top noRightClick twitterSection" data=" ">

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸೋತಿರುವ ಮೇರಿ ಕೋಮ್​ಗೆ ಇದೀಗ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಕೇಂದ್ರ ಸಚಿವ ಕಿರಣ್​ ರಿಜಿಜು, ನೀವು ಕೇವಲ ಒಂದು ಪಾಯಿಂಟ್​ನಿಂದ ಸೋತಿದ್ದೀರಿ. ಆದರೆ ಯಾವಾಗಲೂ ಚಾಂಪಿಯನ್​. ವಿಶ್ವದಲ್ಲಿ ಯಾವುದೇ ಮಹಿಳಾ ಬಾಕ್ಸರ್ ಮಾಡದ ಸಾಧನೆ ನೀವೂ ಮಾಡಿದ್ದೀರಿ. ಇದರಿಂದ ಇಡೀ ಭಾರತ ಹೆಮ್ಮೆ ಪಡುತ್ತದೆ ಎಂದಿದ್ದಾರೆ.

ಇದರ ಜೊತೆಗೆ ಟೀಂ ಇಂಡಿಯಾ ಯೂಸುಫ್ ಪಠಾಣ್, ವಾಸೀಂ ಜಾಫರ್​,​ ಆರ್​.ಪಿ ಸಿಂಗ್​ ಕೂಡ ಅವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೋಲ್ಕತ್ತಾ ನೈಟ್​ ರೈಡರ್ಸ್​​ ನೀವೂ ಎಲ್ಲರಿಗೂ ಸ್ಪೂರ್ತಿ ಎಂದು ತಿಳಿಸಿದೆ.

Last Updated : Jul 29, 2021, 10:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.