ಟೋಕಿಯೋ: ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿಸಿರುವ ದೀಪಿಕಾ ಕುಮಾರಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಕ್ಸೆನಿಯಾ ಪೆರೋವಾ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಡುವಲ್ಲಿ ಯಶಸ್ವಿಯಾಗಿದ್ದಾರೆ.
ದೀಪಿಕಾ ಕುಮಾರಿ ರಷ್ಯಾದ ಕೆ.ಪೆರೋವ್ ಎದುರು ಆಕರ್ಷಕ ಪ್ರದರ್ಶನ ತೋರುವ ಮೂಲಕ ಪ್ರಿ ಕ್ವಾರ್ಟರ್ ಫೈನಲ್ನಿಂದ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಡುವಲ್ಲಿ ಯಶಸ್ವಿಯಾಗಿದ್ದಾರೆ. ರಷ್ಯಾ ಆಟಗಾರ್ತಿ ಎದುರು ನಿರ್ಣಾಯಕ ಸೆಟ್‌ನಲ್ಲಿ ಅನುಭವಿ ಪ್ರದರ್ಶನ ತೋರಿದ ದೀಪಿಕಾ 6-5 ಪಾಯಿಂಟ್ಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದ್ದಾರೆ.
-
Such a relief!
— India_AllSports (@India_AllSports) July 30, 2021 " class="align-text-top noRightClick twitterSection" data="
Deepika Kumari is through to QF with 5-6 hard-fought win over Ksenia Perova.
Shoot-off decided the result.
📷 :@worldarchery #Tokyo2020withIndia_AllSports pic.twitter.com/vJSJhAAn4A
">Such a relief!
— India_AllSports (@India_AllSports) July 30, 2021
Deepika Kumari is through to QF with 5-6 hard-fought win over Ksenia Perova.
Shoot-off decided the result.
📷 :@worldarchery #Tokyo2020withIndia_AllSports pic.twitter.com/vJSJhAAn4ASuch a relief!
— India_AllSports (@India_AllSports) July 30, 2021
Deepika Kumari is through to QF with 5-6 hard-fought win over Ksenia Perova.
Shoot-off decided the result.
📷 :@worldarchery #Tokyo2020withIndia_AllSports pic.twitter.com/vJSJhAAn4A
16ನೇ ಘಟ್ಟದಲ್ಲಿ ದೀಪಿಕಾ ಕುಮಾರಿ ರಷ್ಯಾದ ಕೆ. ಪೆರೋವ್ ಎದುರು ಆಕರ್ಷಕ ಪ್ರದರ್ಶನ ತೋರುವ ಮೂಲಕ 8ರ ಘಟ್ಟಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ರಷ್ಯಾದ ಆಟಗಾರ್ತಿ ಎದುರು ಶೂಟ್ ಆಫ್ ಸೆಟ್‌ನಲ್ಲಿ ಅನುಭವಿ ಪ್ರದರ್ಶನ ತೋರಿ 6-5 ಅಂತರದಲ್ಲಿ ಗೆಲುವು ಸಾಧಿಸಿದರು.
ಕೊನೆಯ ಘಟ್ಟದಲ್ಲಿ ಇಬ್ಬರು ಆಟಗಾರ್ತಿಯರು 5-5 ಅಂಕಗಳನ್ನು ಪಡೆದು ಸಮ ಬಲ ಪ್ರದರ್ಶಿಸಿದ್ದರು. 27 ವರ್ಷದ ಭಾರತೀಯ ದೀಪಿಕಾ ಕುಮಾರಿ ಶೂಟ್ - ಆಫ್‌ನಲ್ಲಿ 10 ಪಾಯಿಂಟ್ಗಳನ್ನು ಪಡೆದರು. ಒತ್ತಡಕ್ಕೆ ಸಿಲುಕಿದ ರಷ್ಯಾದ ಕ್ಸೆನಿಯಾ ಪೆರೋವಾ 7 ಪಾಯಿಂಟ್ಗಳನ್ನು ಪಡೆಯುವ ಮೂಲಕ ಆಟದಿಂದ ಹೊರ ಬಿದ್ದರು. ಈ ಮೂಲಕ ಶೂಟ್ ಆಫ್‌ನಲ್ಲಿ ದೀಪಿಕಾ ಕುಮಾರಿಗೆ ಜಯ ದೊರೆಯಿತು. ನಿನ್ನೆ ನಡೆದ ಪುರಷರ ಆರ್ಚರಿ ವಿಭಾಗದಲ್ಲಿ ಎ.ದಾಸ್ ಶೂಟ್ ಆಫ್‌ನಲ್ಲಿ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದ್ದನ್ನು ಸ್ಮರಿಸಬಹುದಾಗಿದೆ.