ಟೋಕಿಯೋ: ಭಾರತದ ಯುವ ರೆಸ್ಲರ್ ದೀಪಕ್ ಪೂನಿಯಾ 86 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದು, ಚಿನ್ನದ ಕನಸು ಭಗ್ನಗೊಂಡಿದೆ, ಆದರೆ, ಕಂಚಿನ ಪದಕದ ಪಡೆಯುವ ಅವಕಾಶ ಇನ್ನೂ ಉಳಿದಿದೆ.
22 ವರ್ಷದ ಕುಸ್ತಿಪಟು ಸೆಮಿಫೈನಲ್ ಬೌಟ್ನಲ್ಲಿ 0-10ರ ಅಂತರದಲ್ಲಿ ಮಾಜಿ ವಿಶ್ವ ಚಾಂಪಿಯನ್ ಅಮೆರಿಕದ ಡೇವಿಡ್ ಟೇಲರ್ ವಿರುದ್ಧ ಸೋಲು ಕಂಡರು. ದೀಪಕ್ಗಿಂತಲೂ ಟೇಲರ್ ಹೆಚ್ಚು ತೂಕ ಮತ್ತು ಬಲಾಢ್ಯರಾಗಿದ್ದರಿಂದ ಯುವ ರೆಸ್ಲರ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು.
ದೀಪಕ್ ಕಂಚಿನ ಪದಕಕ್ಕಾಗಿ ಆಡುವ ಅವಕಾಶವನ್ನು ಹೊಂದಿದ್ದಾರೆ. ಟೇಲರ್ ಈ ಹಿಂದಿನ ಎರಡು ಸುತ್ತುಗಳಲ್ಲಿ ಸೋಲಿಸಿರುವ ಇಬ್ಬರು ಕುಸ್ತಿಪಟುಗಳ ನಡುವಿನ ಹಣಾಹಣಿಯಲ್ಲಿ ಗೆದ್ದು ಬರುವವರ ವಿರುದ್ಧ ದೀಪಕ್ ಕಂಚಿನ ಪದಕಕ್ಕೆ ಕಾದಾಡಲಿದ್ದಾರೆ.
ಇದಕ್ಕೂ ಮುನ್ನ ನಡೆದ 57 ಕೆಜಿ ವಿಭಾಗದಲ್ಲಿ ರವಿ ಕುಮಾರ್ ದಹಿಯಾ ಕಜಕಸ್ತಾನದ ರೆಸ್ಲರ್ ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಈ ಹಿಂದೆ ಸುಶೀಲ್ ಕುಮಾರ್ ಮಾತ್ರ ಫೈನಲ್ ಪ್ರವೇಶಿಸಿದ್ದರು.
ಇದನ್ನು ಓದಿ: ಫೈನಲ್ ಪ್ರವೇಶಿಸಿ ಮತ್ತೊಂದು ಪದಕ ಖಚಿತಪಡಿಸಿದ ರವಿ ಕುಮಾರ್ ದಹಿಯಾ