ETV Bharat / sports

'ಐ ಲವ್​ ಯೂ ನೀರಜ್​'... ಚಿನ್ನದ ಹುಡುಗನ ಮೇಲೆ ಚಂಡೀಗಢ ಹುಡುಗಿಗೆ ಕ್ರಷ್​!

ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದು, ಹೊಸ ಇತಿಹಾಸ ರಚನೆ ಮಾಡಿರುವ ನೀರಜ್​ ಚೋಪ್ರಾ ಮೇಲೆ ಅನೇಕ ಹುಡುಗಿಯರಿಗೆ ಕ್ರಷ್​​ ಆಗಿದ್ದು, ತಮ್ಮ ಮನದಾಳ ಹೊರಹಾಕಿದ್ದಾರೆ.

neeraj chopra
neeraj chopra
author img

By

Published : Aug 9, 2021, 5:56 PM IST

ಚಂಡೀಗಢ(ಪಂಜಾಬ್​): ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ನೀರಜ್​ ಚೋಪ್ರಾ ಐತಿಹಾಸಿಕ ಸಾಧನೆ ಮಾಡಿದ್ದು, ಭಾರತದ ಯಾವುದೇ ಅಥ್ಲೀಟ್ಸ್​ ಮಾಡದಂತಹ ದಾಖಲೆ ಬರೆದಿದ್ದಾರೆ. ಅವರ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅನೇಕ ಯುವ ಪೀಳಿಗೆ ಅವರ ಪ್ರದರ್ಶನದಿಂದ ಫುಲ್​ ಖುಷ್​ ಆಗಿದ್ದಾರೆ.

ಚಿನ್ನದ ಹುಡುಗನ ಮೇಲೆ ಚಂಡೀಗಢ ಹುಡುಗಿಗೆ ಕ್ರಷ್​

ಜಾವಲಿನ್ ಥ್ರೋದಲ್ಲಿ ಅದ್ಭುತ ಸಾಧನೆ ಮಾಡಿರುವ 23 ವರ್ಷದ ನೀರಜ್​ ಚೋಪ್ರಾ ಮೇಲೆ ಇದೀಗ ಸಾವಿರಾರು ಹುಡುಗಿಯರಿಗೆ ಕ್ರಸ್​ ಆಗಿದ್ದು, ಚಂಡೀಗಢ ಹುಡುಗಿಯೊಬ್ಬಳು ಇದೇ ವಿಚಾರವಾಗಿ ಮಾತನಾಡಿದ್ದು, "ಐ ಲವ್​ ಯೂ ನೀರಜ್"​ ಎಂದಿದ್ದಾಳೆ. ನೀರಜ್​ ಚೋಪ್ರಾ ಪ್ರದರ್ಶನದಿಂದ ಸಂತಸಗೊಂಡಿರುವ ಚಂಡೀಗಢ ಯುವತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾಳೆ. ಲಕ್ಷಾಂತರ ಯುವಕರಿಗೆ ಯವ ಪ್ರತಿಭಾವಂತ ಕ್ರೀಡಾಪಟು ನೀರಜ್​ ಚೋಪ್ರಾ ಮಾದರಿಯಾಗಿದ್ದು, ಅವರ ಕಠಿಣ ಪರಿಶ್ರಮದಿಂದಲೇ ಈ ಫಲ ಸಿಕ್ಕಿದೆ ಎಂದು ಹೇಳಿದ್ದಾಳೆ.

ನೀರಜ್​ ಚೋಪ್ರಾ ಅತಿ ಕಡಿಮೆ ವಯಸ್ಸಿನಲ್ಲೇ ಅದ್ಭುತ ಸಾಧನೆ ಮಾಡುತ್ತಿದ್ದಂತೆ ಅನೇಕ ಯುವತಿಯರು ಸಾಮಾಜಿಕ ಜಾಲತಾಣಗಳಲ್ಲಿ ನೀರಜ್​ ಚೋಪ್ರಾಗೆ ಅಭಿನಂದನೆ ಸಲ್ಲಿಸುತ್ತಿದ್ದು, ಅವರೊಬ್ಬ 'ನ್ಯಾಷನಲ್​ ಕ್ರಷ್'​​ ಎಂದಿದ್ದಾರೆ. ದೇಶಕ್ಕೆ ಗೌರವ ತಂದಿರುವ ನೀರಜ್​ ಚೋಪ್ರಾ ನೋಡಲು ಸುಂದರವಾಗಿರುವ ಕಾರಣ ಅನೇಕ ಹುಡುಗಿಯರಿಗೆ ಇಷ್ಟವಾಗಿದ್ದಾರೆ.

ಇದನ್ನೂ ಓದಿರಿ: ಚಿನ್ನಪ್ರಿಯರಿಗೆ ಗುಡ್​ನ್ಯೂಸ್​: ಬಂಗಾರದ ಬೆಲೆಯಲ್ಲಿ 317ರೂ ಕುಸಿತ, ಬೆಳ್ಳಿಯಲ್ಲೂ ದಾಖಲೆ ಇಳಿಕೆ

120 ವರ್ಷಗಳ ಒಲಿಂಪಿಕ್ಸ್​ ಇತಿಹಾಸದಲ್ಲಿ ಭಾರತಕ್ಕೆ ಅಥ್ಲೀಟ್ಸ್​ನಲ್ಲಿ ಮೊದಲ ಚಿನ್ನದ ಪದಕ ಗೆದ್ದುಕೊಡುವಲ್ಲಿ ನೀರಜ್​ ಯಶಸ್ವಿಯಾಗಿದ್ದು, ಅದಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್​​ ಸ್ಟಾರ್ಸ್​ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಹರಿಯಾಣ ಸರ್ಕಾರ 6 ಕೋಟಿ ರೂ. ಬಹುಮಾನ, ಪಂಜಾಬ್​ ಸರ್ಕಾರ 2 ಕೋಟಿ ರೂ. ನಗದು ಘೋಷಣೆ ಮಾಡಿವೆ. ಇದಲ್ಲದೇ ಬಿಸಿಸಿಐ, ಸಿಎಸ್​ಕೆ, ಮಣಿಪುರ ಸೇರಿದಂತೆ ವಿವಿಧ ರಾಜ್ಯಗಳು, ಸಂಘ-ಸಂಸ್ಥೆಗಳು ಅವರಿಗೆ ಬಹುಮಾನದ ಸುರಿಮಳೆಯನ್ನೇ ಹರಿಸಿವೆ .

2020ನೇ ಸಾಲಿನ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ ಏಳು ಪದಕಗಳು ಬಂದಿದ್ದು, ನೀರಜ್​ ಚೋಪ್ರಾ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ 13 ವರ್ಷಗಳ ಬಳಿಕ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಬಂದಿರುವ ಮೊದಲ ಚಿನ್ನ ಇದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.