ಟೋಕಿಯೋ: ಒಲಿಂಪಿಕ್ಸ್ನಲ್ಲಿ ಭಾರತದ ಅಥ್ಲೀಟ್ಸ್ಗಳು ಕೊನೆ ಕ್ಷಣದಲ್ಲಿ ನಿರಾಸೆಗೊಳಗಾಗುತ್ತಿದ್ದು, ಬಾಕ್ಸರ್ ಪೂಜಾ ರಾಣಿ ಕೂಡ ಕ್ವಾರ್ಟರ್ಫೈನಲ್ನಲ್ಲಿ ಸೋಲು ಕಾಣುವ ಮೂಲಕ ಅಭಿಯಾನ ಮುಗಿಸಿದ್ದಾರೆ. 75 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಪೂಜಾ ರಾಣಿ ಚೀನಾದ ಚಿಯಾನ್ ಲೀ ವಿರುದ್ಧ 0-5 ಅಂತರದಿಂದ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದರು. ಜೊತೆಗೆ ಕಂಚಿನ ಪದಕಕ್ಕೆ ಮುತ್ತಿಕ್ಕುವ ಅವಕಾಶ ತಪ್ಪಿಸಿಕೊಂಡಿದ್ದಾರೆ.
-
Pooja Rani goes down to Li Qian of China in the women's #boxing 75kg quarterfinal. She made her mark at the #Tokyo2020 and we wish her the best for her upcoming training and competitions.
— SAIMedia (@Media_SAI) July 31, 2021 " class="align-text-top noRightClick twitterSection" data="
Stay tuned for more Olympics updates. #Cheer4India
">Pooja Rani goes down to Li Qian of China in the women's #boxing 75kg quarterfinal. She made her mark at the #Tokyo2020 and we wish her the best for her upcoming training and competitions.
— SAIMedia (@Media_SAI) July 31, 2021
Stay tuned for more Olympics updates. #Cheer4IndiaPooja Rani goes down to Li Qian of China in the women's #boxing 75kg quarterfinal. She made her mark at the #Tokyo2020 and we wish her the best for her upcoming training and competitions.
— SAIMedia (@Media_SAI) July 31, 2021
Stay tuned for more Olympics updates. #Cheer4India
ಈಗಾಗಲೇ ಸೆಮಿಫೈನಲ್ಗೆ ಲಗ್ಗೆ ಹಾಕಿರುವ ಭಾರತದ ಮತ್ತೋರ್ವ ಬಾಕ್ಸರ್ ಲವ್ಲಿನಾ ಭಾರತಕ್ಕೆ ಕನಿಷ್ಠ ಕಂಚಿನ ಪದಕ ಗೆದ್ದು ಕೂಡಲಿದ್ದಾರೆ. ಇದೇ ಮೊದಲ ಸಲ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗುವ ಅವಕಾಶ ಪಡೆದುಕೊಂಡಿದ್ದ ಪೂಜಾ ರಾಣಿ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಕ್ವಾರ್ಟರ್ಫೈನಲ್ಗೆ ಲಗ್ಗೆ ಹಾಕಿದ್ದರು. ಆದರೆ ಇಂದಿನ ಪಂದ್ಯದಲ್ಲಿ 30 ವರ್ಷದ ಪೂಜಾ ರಿಯೋ ಒಲಿಂಪಿಕ್ಸ್ ಕಂಚಿನ ವಿಜೇತೆ ಚಿಯಾನ್ ಲೀ ವಿರುದ್ಧ ಸೋಲು ಕಂಡಿದ್ದಾರೆ.
ಇದನ್ನೂ ಓದಿರಿ: ಸೆಮಿಫೈನಲ್ನಲ್ಲಿ ಸೋಲುಂಡ ಬ್ಯಾಡ್ಮಿಂಟನ್ ತಾರೆ ಸಿಂಧು.. ಕಂಚಿನ ಪದಕಕ್ಕಾಗಿ ನಾಳೆ ಹೋರಾಟ
ಆರು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಭಾರತದ ಮೇರಿ ಕೋಮ್ 16ನೇ ಸುತ್ತಿನ ಪಂದ್ಯದಲ್ಲಿ ಕೊಲಂಬಿಯಾ ಬಾಕ್ಸರ್ ಇಂಗ್ರಿಟ್ ವೇಲೆನ್ಸಿಯಾ ವಿರುದ್ಧ 3-2 ಅಂತರದಿಂದ ಸೋಲು ಕಾಣುವ ಮೂಲಕ ತಮ್ಮ ಒಲಿಂಪಿಕ್ಸ್ ಅಭಿಯಾನ ಮುಗಿಸಿದ್ದಾರೆ.