ETV Bharat / sports

Paralympic: 50 ಮೀಟರ್​ ರೈಫಲ್​ ಶೂಟಿಂಗ್​ನಿಂದ​ ಹೊರಬಿದ್ದ ಅವನಿ ಲೇಖರಾ - ಪ್ಯಾರಾಲಿಂಪಿಕ್​​ನ ಶೂಟಿಂಗ್ ಸ್ಪರ್ಧೆ

ಪ್ಯಾರಾಲಿಂಪಿಕ್​​ನ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತೀಯ ಆಟಗಾರರು ಮುಂದಿನ ಸುತ್ತಿಗೆ ಅರ್ಹತೆ ಪಡೆಯದೆ ಹೊರಬಿದ್ದಿದ್ದಾರೆ. ಈಗಾಗಲೇ ಎರಡು ಪದಕ ಗೆದ್ದಿರುವ ಅವನಿ ಲೇಖರಾ ಜೊತೆ ಇನ್ನಿಬ್ಬರು ಆಟಗಾರರು ಸಹ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.

avani-finishes-mixed-50m-ar-prone-sh1-qualification
ಅವನಿ ಲೇಖರಾ
author img

By

Published : Sep 5, 2021, 9:19 AM IST

ಟೋಕಿಯೋ (ಜಪಾನ್): ಪ್ಯಾರಾಲಿಂಪಿಕ್​ನ ಮಹಿಳಾ ಶೂಟಿಂಗ್ ವಿಭಾಗದಲ್ಲಿ ಒಂದು ಚಿನ್ನ ಹಾಗೂ ಕಂಚಿನ ಪದಕ ಪಡೆದಿದ್ದ ಅವನಿ ಲೇಖರಾ ಇದೀಗ ಮುಗ್ಗರಿಸಿದ್ದಾರೆ. ಇಂದು ನಡೆದ ಮಿಶ್ರ 50 ಮೀಟರ್​ ರೈಫಲ್ ಶೂಟಿಂಗ್ ಎಸ್​​​ಹೆಚ್​​​​1​​ ಸ್ಪರ್ಧೆಯಲ್ಲಿ ಮುಂದಿನ ಸುತ್ತಿಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲರಾಗಿದ್ದಾರೆ.

ಅರ್ಹತಾ ಸುತ್ತಿನಲ್ಲಿ ಅವನಿ ಲೇಖರಾ 612 ಅಂಕಗಳೊಂದಿಗೆ 28ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇವರ ಜೊತೆ ಇನ್ನಿಬ್ಬರು ಶೂಟರ್ಸ್​ ಸಹ ಮುಂದಿನ ಸುತ್ತಿಗೆ ಅರ್ಹತೆ ಗಿಟ್ಟಿಸದೆ ನಿರಾಸೆ ಮೂಡಿಸಿದರು.

ಸಿದ್ದಾರ್ಥ ಬಾಬು ಒಟ್ಟು 617.2 ಅಂಕ ಗಳಿಸಿ ಚೀನಾ ಆಟಗಾರನಿಗಿಂತಲೂ 0.2 ಅಂಕ ಹಿಂದೆ ಬಿದ್ದು, ಮುಂದಿನ ಸುತ್ತಿನಿಂದ ವಂಚಿತರಾದರು. ಇನ್ನೋರ್ವ ಆಟಗಾರ ದೀಪಕ್ ಒಟ್ಟು 602.2 ಅಂಕ ಗಳಿಸಿ ಫೈನಲ್​ ಸುತ್ತಿಗೆ ಅರ್ಹತೆ ಪಡೆಯದೆ 46ನೇ ಸ್ಥಾನ ಗಳಿಸಿ ಹೊರಬಿದ್ದರು.

ಇದಕ್ಕೂ ಮೊದಲು 19 ವರ್ಷದ ಅವನಿ 10 ಮೀಟರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಬಳಿಕ ಮಹಿಳಾ ವಿಭಾಗದ 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಓದಿ: ಪ್ಯಾರಾಲಿಂಪಿಕ್ಸ್​​​ ಸಮಾರೋಪ ಸಮಾರಂಭ: ಭಾರತದ ಧ್ವಜಧಾರಿಯಾಗಿ ಅವನಿ ಲೇಖರಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.