ನವದೆಹಲಿ: ಕೊರೊನಾ ವೈರಸ್ ಭೀತಿಯ ನಡುವೆ ಆಯೋಜನೆ ಆಗಿರುವ ಯುಎಸ್ ಓಪನ್ ಟೆನಿಸ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ನಂಬರ್ 1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಖಚಿತಪಡಿಸಿದ್ದಾರೆ.
ನಾನು ಈ ವರ್ಷ ಯುಎಸ್ ಓಪನ್ ನಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಎಲ್ಲ ಅಡೆತಡೆಗಳು ಮತ್ತು ಸವಾಲುಗಳನ್ನು ಎದುರಿಸುವುದು ಸುಲಭದ ನಿರ್ಧಾರವಲ್ಲ. ಆದರೆ, ಮತ್ತೆ ಸ್ಪರ್ಧಿಸುವ ನಿರೀಕ್ಷೆಯು ನನ್ನನ್ನು ನಿಜವಾಗಿಯೂ ಉತ್ಸುಕಗೊಳಿಸುತ್ತದೆ, ಎಂದು ಜೊಕೊವಿಕ್ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಹಾಲಿ ಚಾಂಪಿಯನ್ ರಾಫೆಲ್ ನಡಾಲ್ ಅವರು ಯುಎಸ್ ಓಪನ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದರು. ಆಸ್ಟ್ರೇಲಿಯಾದ ನಿಕ್ ಕಿರ್ಗಿಯೊಸ್ ಕೂಡ ಮುಂಬರುವ ಯುಎಸ್ ಓಪನ್‌ನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.
"ಅನೇಕ ಆಲೋಚನೆಗಳ ನಂತರ, ಈ ವರ್ಷದ ಯುಎಸ್ ಓಪನ್ ಆಡದಿರಲು ನಾನು ನಿರ್ಧರಿಸಿದ್ದೇನೆ. ವಿಶ್ವಾದ್ಯಂತ ಪರಿಸ್ಥಿತಿ ತುಂಬಾ ಜಟಿಲವಾಗಿದೆ, ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ, ಸದ್ಯಕ್ಕೆ ಅದನ್ನು ನಿಯಂತ್ರಿಸಲಾಗುತ್ತಿಲ್ಲ ಎಂದು ತೋರುತ್ತಿದೆ" ಎಂದು ನಡಾಲ್ ಹೇಳಿದ್ದರು.
ಆದರೆ ಅಗ್ರ ಆಟಗಾರ ನೊವಾಕ್ ಜೊಕೊವಿಕ್ ಮಾತ್ರ ತಾವು ಕ್ರೀಡಾಕೂಟದಲ್ಲಿ ಭಾಗವಹಿಸುವುದಾಗಿ ಘೋಷಿಸಿದ್ದಾರೆ.