ಬೆಲ್‌ಗ್ರೇಡ್ : ವಿಶ್ವದ ಅಗ್ರ ಶ್ರೇಯಾಂಕಿತ ಟೆನಿಸ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್ಗೆ ಮತ್ತು ಅವರ ಗರ್ಭಿಣಿ ಪತ್ನಿಗೆ ಕೊರೊನಾ ಸೋಂಕು ಧೃಡಪಟ್ಟಿದೆ.
ಸೆರ್ಬಿಯಾ ಮತ್ತು ಕ್ರೊಯೇಷಿಯಾದಲ್ಲಿ ಆಯೋಜಿಸಿದ್ದ ಟೆನಿಸ್ ಸರಣಿಯಲ್ಲಿ ಭಾಗವಹಿಸಿದ ನಂತರ ಅವರು ಕೊರೊನಾ ಟೆಸ್ಟ್ಗೆ ಒಳಗಾಗಿದ್ದರು, ಇದೀಗ ಜೊಕೊವಿಕ್ ಮತ್ತು ಅವರ ಪತ್ನಿಗೆ ಕೊರೊನಾ ಧೃಟಪಟ್ಟಿದೆ, ಅದೃಷ್ಟವಶಾತ್ ಮಕ್ಕಳಿಗೆ ಕೊರೊನಾ ನೆಗಿಟಿವ್ ಬಂದಿದೆ.
ಅಗ್ರ ಶ್ರೇಯಾಂಕಿತ ಸರ್ಬಿಯಾದ ಆಟಗಾರನಿಗೆ ಕೊರೊನಾ ಸೋಂಕು ತಗುಲುವ ಮೂಲಕ, ಟೆನಿಸ್ನ ನಾಲ್ಕನೇ ಆಟಗಾರನಿಗೆ ಸೋಂಕು ಧೃಡಪಟ್ಟಂತಾಗಿದೆ. ಈ ಮೊದಲು ಗ್ರಿಗೋರ್ ಡಿಮಿಟ್ರೋವ್, ಬೊರ್ನಾ ಕೊರಿಕ್, ಹಾಗೂ ವಿಕ್ಟೋರ್ ಟ್ರಾಯ್ಕಿಗೆ ಸೋಂಕು ತಗುಲಿರುವುದು ಧೃಡಪಟ್ಟಿತ್ತು.
ಈ ಸಂಬಂಧ ಹೇಳಿಕೆ ನೀಡಿರುವ ಜೊಕೊವಿಕ್ 14 ದಿನಗಳ ಕಾಲ ಸ್ವಯಂ ಕ್ವಾರಂಟೈನ್ನಲ್ಲಿರುತ್ತೇನೆ, ಮತ್ತು ಈ ಟೆನಿಸ್ ಸರಣಿಯ ಪರಿಣಾಮವಾಗಿ ಯಾರಿಗಾದರು ಸೋಂಕು ತಗುಲಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.