ETV Bharat / sports

ಯುಎಸ್​ ಗ್ರ್ಯಾಂಡ್​​ಸ್ಲಾಮ್​ನಿಂದ ಹೊರಬಂದ  ವಿಶ್ವದ ನಂಬರ್​ ಒನ್​​ ಆಟಗಾರ್ತಿ ಆಶ್ಲೆ ಬಾರ್ಟಿ

ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಈ ಸಮಯದಲ್ಲಿ ಆಗಸ್ಟ್​ 31 ರಿಂದ ಸೆಪ್ಟೆಂಬರ್​ನಲ್ಲಿ ನಡೆಯುವ ಟೂರ್ನಿಯಿಂದ ಹೊರಗುಳಿಯುವುದಾಗಿ ಟೆನಿಸ್​​​​ನ ಬಹುದೊಡ್ಡ ಹೆಸರಾಗಿರುವ 24 ವರ್ಷದ ಬಾರ್ಟಿ ನಿರ್ಧರಿಸಿದ್ದಾರೆ.

author img

By

Published : Jul 30, 2020, 2:31 PM IST

ನಂಬರ್​ ಒನ್​ ಟೆನ್ನಿಸ್​ ಆಟಗಾರ್ತಿ ಆಶ್ಲೆ ಬಾರ್ಟಿ

ಬ್ರಿಸ್ಬೇನ್​: ಆಸ್ಟ್ರೇಲಿಯಾದ ವಿಶ್ವ ಟೆನಿಸ್​ನ ನಂಬರ್​ ಒನ್​ ಆಟಗಾರ್ತಿಯಾಗಿರುವ ಆಶ್ಲೇ ಬಾರ್ಟಿ 2020ರ ಯುಎಸ್ ಓಪನ್​ನಿಂದ ಹಿಂದೆ ಸರಿದಿದ್ದಾರೆ. ಕೊರೊನ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ತೊಂದರೆ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಈ ಸಮಯದಲ್ಲಿ ಆಗಸ್ಟ್​ 31 ರಿಂದ ಸೆಪ್ಟೆಂಬರ್​ನಲ್ಲಿ ನಡೆಯುವ ಟೂರ್ನಿಯಿಂದ ಹೊರಗುಳಿಯುವುದಾಗಿ ಟೆನಿಸ್​ನ ಬಹುದೊಡ್ಡ ಹೆಸರಾಗಿರುವ 24 ವರ್ಷದ ಬಾರ್ಟಿ ಹೇಳಿದ್ದಾರೆ.

" ನಾನು ಮತ್ತು ನನ್ನ ತಂಡ ಈ ವರ್ಷ ಯುಎಸ್ , ಪಾಶ್ಚಿಮಾತ್ಯ ಮತ್ತು ದಕ್ಷಿಣ ಓಪನ್ ಟೂರ್ನಿಗಳಿಗೆ ಹೋಗದಿರಲು ನಿರ್ಧರಿಸಿದ್ದೇವೆ" ಎಂದು ಬಾರ್ಟಿ ಹೇಳಿಕೆ ನೀಡಿದ್ದಾರೆ.

ನಾನು ಎರಡು ಇವೆಂಟ್​ಗಳನ್ನು ಇಷ್ಟಪಡುತ್ತೇನೆ. ಆದರೆ ಕೋವಿಡ್​ 19 ಅಪಾಯಗಳಿವೆ. ಈ ಸಂದರ್ಭದಲ್ಲಿ ನನ್ನ ತಂಡ ಆ ಅಪಾಯದಲ್ಲಿಇರಲು ನಾನು ಬಯಸುವುದಿಲ್ಲ. ಯುಎಸ್​ಟಿಎ ಟೂರ್ನಮೆಂಟ್​ಗೆ ಶುಭ ಹಾರೈಸುತ್ತೇನೆ ಮತ್ತು ಮುಂದಿನ ವರ್ಷ ಯುಎಸ್​ಗೆ ಮರಳಲು ನಾನು ಎದುರು ನೋಡುತ್ತೇನೆ ಎಂದಿದ್ದಾರೆ.

ಮೇ-ಜೂನ್‌ನಲ್ಲಿ ನಡೆಯಬೇಕಾಗಿದ್ದ ಯುಎಸ್ ಓಪನ್ ಕ್ಲೇ ಕೋರ್ಟ್ ಟೂರ್ನಿಯನ್ನು ಕೊರೊನಾವೈರಸ್ ಕಾರಣ ಸೆಪ್ಟೆಂಬರ್ 27ರ ಬಳಿಕ ಆರಂಭಿಸಲು ನಿರ್ಧರಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.