ವಿಂಬಲ್ಡನ್: ಕಳೆದ ಬಾರಿಯ ವಿಂಬಲ್ಡನ್ನ ರನ್ನರ್ ಅಪ್ ಆಗಿರುವ ಸೆರೆನಾ ವಿಲಿಯಮ್ಸ್ ಮಂಗಳವಾರ ನಡೆದ ಮಹಿಳೆಯರ ಕ್ವಾರ್ಟರ್ ಫೈನಲ್ನಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
37 ವರ್ಷದ ಅಮೆರಿಕಾದ ಆಟಗಾರ್ತಿ ಸೆರೆನಾ ತಮ್ಮದೇ ದೇಶದ ಆಲಿಸನ್ ರಿಸ್ಕ್ ವಿರುದ್ಧ ಕ್ವಾರ್ಟರ್ ಫೈನಲ್ನಲ್ಲಿ 6-4, 4-6, 6-3ರ ಸೆಟ್ಗಳಲ್ಲಿ ಮಣಿಸಿ ದ್ವಿತೀಯ ಆಟಗಾರ್ತಿಯಾಗಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಇದಕ್ಕೂ ಮುನ್ನ ನಡೆದ ಕ್ವಾರ್ಟರ್ ಫೈನಲ್ನಲ್ಲಿ ರೋಮೆನಿಯಾದ ಸ್ಟಾರ್ ಟೆನ್ನಿಸ್ ಪ್ಲೇಯರ್ ಸಿಮೋನ ಹಾಲೆಪ್ ಚೀನಾದ ಜಾಂಗ್ ಶುವಾಯ್ರನ್ನು 7-6(4) 6-1 ರಲ್ಲಿ ಮಣಿಸಿ ಮೊದಲನೆವರಾಗಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
-
The #Wimbledon ladies' semi-final line-up
— Wimbledon (@Wimbledon) July 9, 2019 " class="align-text-top noRightClick twitterSection" data="
🇺🇸 Serena Williams vs Barbora Strycova 🇨🇿
🇺🇦 Elina Svitolina vs Simona Halep 🇷🇴 pic.twitter.com/IeeVLVORku
">The #Wimbledon ladies' semi-final line-up
— Wimbledon (@Wimbledon) July 9, 2019
🇺🇸 Serena Williams vs Barbora Strycova 🇨🇿
🇺🇦 Elina Svitolina vs Simona Halep 🇷🇴 pic.twitter.com/IeeVLVORkuThe #Wimbledon ladies' semi-final line-up
— Wimbledon (@Wimbledon) July 9, 2019
🇺🇸 Serena Williams vs Barbora Strycova 🇨🇿
🇺🇦 Elina Svitolina vs Simona Halep 🇷🇴 pic.twitter.com/IeeVLVORku
ಮತ್ತೆರಡು ಕ್ವಾರ್ಟರ್ ಫೈನಲ್ನಲ್ಲಿ ಜೆಕ್ ಗಣರಾಜ್ಯದ ಬಾರ್ಬೊರಾ ಸ್ಟ್ರಿಕೋವಾ, ಇಂಗ್ಲೆಂಡ್ನ ಜೊಹನ್ನಾ ಕೊಂಟಾರನ್ನು 7-6, 6-1ರಲ್ಲೂ, ಉಕ್ರೇನಿಯಾದ ಎಲಿನಾ ಸ್ವಿಟೋಲಿನಾ 7-5, 6-4 ರಲ್ಲಿ ಜೆಕ್ ಗಣರಾಜ್ಯದ ಕರೋಲಿನಾ ಮುಚೋವಾರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆಯುವ ಸೆಮಿಫೈನಲ್ ಕದನದಲ್ಲಿ ಸೆರೆನಾ ವಿಲಿಯಮ್ಸ್ ಜೆಕ್ ಗಣರಾಜ್ಯದ ಬಾರ್ಬೊರಾ ಸ್ಟ್ರಿಕೋವಾರನ್ನು, ಸಿಮೋನ ಹಾಲೆಪ್ ಉಕ್ರೇನಿಯಾದ ಎಲಿನಾ ಸ್ವಿಟೋಲಿನಾರನ್ನು ಎದುರಿಸಲಿದ್ದಾರೆ.