ಮೆಲ್ಬೋರ್ನ್: 2021ರ ಆಸ್ಟ್ರೇಲಿಯನ್ ಓಪನ್ ಫೈನಲ್ ಸ್ಪರ್ಧಿಯಾಗಿದ್ದ ಜೆನ್ನಿಫರ್ ಬ್ರಾಡಿ, ಚಾಂಪಿಯನ್ ಒಸಾಕರನ್ನು ತಮ್ಮಂತೆ ಒಬ್ಬ ಸಾಮಾನ್ಯ ಸ್ಪರ್ಧಿಯೆಂದು ಉಲ್ಲೇಖಿಸಿದ್ದು, 23 ಗ್ರ್ಯಾಂಡ್ಸ್ಲಾಮ್ ಚಾಂಪಿಯನ್ ಸೆರೆನಾ ವಿಲಿಯಮ್ಸನ್ ಅವರನ್ನು ಟೆನ್ನಿಸ್ ಗಾಡ್ ಎಂದು ಹೇಳಿದ್ದಾರೆ.
ನವೋಮಿ ಒಸಾಕ ಮತ್ತು ಸೆರೆನಾ ವಿಲಿಯಮ್ಸ್ರನ್ನು ಹೋಲಿಕೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಬ್ರಾಡಿ, ನವೋಮಿ ಒಸಾಕ ತುಂಬಾ ವಿಶೇಷ ಎಂದು ನಾನು ಭಾವಿಸುವುದಿಲ್ಲ. ನನ್ನ ಪ್ರಕಾರ ಅವರು ನಮ್ಮಂತಯೇ ಮನುಷ್ಯರು. ಅವರು ದೊಡ್ಡ ಟೂರ್ನಮೆಂಟ್ನಲ್ಲಿ ಅವರ ಅತ್ಯುತ್ತಮ ಆಟವನ್ನು ಹೊರ ತಂದಿದ್ದಾರೆ. ಖಂಡಿತವಾಗಿ ನೀವು ಹೇಳಿದಂತೆ ಅವರು ನಾಲ್ಕು ಗ್ರ್ಯಾಂಡ್ಸ್ಸ್ಲಾಮ್ ಗೆದ್ದಿದ್ದಾರೆ. ಅವರು ತಮ್ಮ ಮೇಲೆ, ತಮ್ಮ ಆಟದ ಮೇಲೆ ಮತ್ತು ತಮ್ಮ ತಂಡದ ಮೇಲೆ ತುಂಬಾ ಆತ್ಮವಿಶ್ವಾಸ ಹೊಂದಿದ್ದಾರೆ. ಆದರೆ ಅವರನ್ನು ನಾನು ದೇವರು(ಗಾಡ್) ಎಂದು ಭಾವಿಸುವುದಿಲ್ಲ. ನನ್ನ ಪ್ರಕಾರ ಸೆರೆನಾರನ್ನು ಹಾಗೆನ್ನಬಹುದು" ಎಂದು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಒಸಾಕ 6-4,6-3ರಲ್ಲಿ ಜೆನ್ನಿಫರ್ ಬ್ರಾಡಿಯನ್ನು ಮಣಿಸಿ ತಮ್ಮ 2ನೇ ಆಸ್ಟ್ರೇಲಿಯನ್ ಓಪನ್ ಮತ್ತು 4ನೇ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ಒಂದು ವರ್ಷದ ಹಿಂದೆ ತಾವು ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಸಾಧ್ಯತೆಯು "ಮಂಗಳ ಗ್ರಹಕ್ಕೆ ಹೋಗುವ ಹಾಗೆ" ಎಂದು ಭಾವಿಸಿದ್ದೆ. ಆದರೆ ಈಗ ಪೈನಲ್ ಪ್ರವೇಶಿಸಲು ಸಾಧ್ಯವಾಗಿರುವುದರಿಂದ ಅದು ಸಾಧಿಸಬಹುದಾದ ಕೆಲಸ ಎನ್ನಿಸುತ್ತಿದೆ ಎಂದು ಬ್ರಾಡಿ ಹೇಳಿದ್ದಾರೆ.
ಇದನ್ನು ಓದಿ: ಇಂಗ್ಲೆಂಡ್ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಭಾರತದ ಮೇಲೆ ಸವಾರಿ ಮಾಡಲಿದೆ: ಕ್ರಾಲೆ