ETV Bharat / sports

ಯುಎಸ್ ಓಪನ್: ಸೆಮಿಫೈನಲ್​ ಪ್ರವೇಶಿಸಿದ ಡ್ಯಾನಿಲ್ ಮೆಡ್ವೆಡೆವ್ - ಆ್ಯಂಡ್ರಿ ರಬ್ಲೆವ್

2019ರ ಯುಎಸ್ ಓಪನ್​ ರನ್ನರ್​ ಅಪ್ ಡ್ಯಾನಿಲ್ ಮೆಡ್ವೆಡೆವ್, ಈ ಬಾರಿಯ ಯುಎಸ್​ ಓಪನ್​ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

Medvedev into US Open semifinals without dropping set so far
ಸೆಮಿಫೈನಲ್​ ಪ್ರವೇಶಿಸಿದ ಡ್ಯಾನಿಲ್ ಮೆಡ್ವೆಡೆವ್
author img

By

Published : Sep 10, 2020, 12:31 PM IST

ನ್ಯೂಯಾರ್ಕ್: 2019ರ ಯುಎಸ್ ಓಪನ್​ನ ರನ್ನರ್​ ಅಪ್ ಡ್ಯಾನಿಲ್ ಮೆಡ್ವೆಡೆವ್, ರಷ್ಯಾದ ಟೆನ್ನಿಸ್ ಆಟಗಾರ ಆ್ಯಂಡ್ರಿ ರಬ್ಲೆವ್ ವಿರುದ್ಧ ಗೆಲುವು ಸಾಧಿಸುವ ಮೂಲಕ 2020ರ ಯುಎಸ್​ ಓಪನ್​ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

3 ನೇ ಶ್ರೇಯಾಂಕಿತ ಮೆಡ್ವೆಡೆವ್ ಸತತ ಐದು ಪಾಯಿಂಟ್‌ಗಳನ್ನು ಪಡೆಯುವ ಮೂಲಕ ಟೈ ಬ್ರೇಕರ್‌ನಲ್ಲಿ ರಬ್ಲೆವ್‌ಗೆ ಯಾವುದೇ ಅವಕಾಶ ನೀಡಲಿಲ್ಲ. 7-6 (6), 6-3, 7-6 (5) ರಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರು.

ಸೆಮಿಫೈನಲ್​ ಪ್ರವೇಶಿಸಿದ ಡ್ಯಾನಿಲ್ ಮೆಡ್ವೆಡೆವ್

ಸುಮಾರು ಐದು ಗಂಟೆಗಳ ಕಾಲ ನಡೆದ ಐದು ಸೆಟ್‌ಗಳ ಯುಎಸ್ ಓಪನ್ ಫೈನಲ್‌ನಲ್ಲಿ ರಾಫೆಲ್ ನಡಾಲ್ ವಿರುದ್ಧ ಸೋತ ಒಂದು ವರ್ಷದ ನಂತರ, ಮೆಡ್ವೆಡೆವ್ ತಮ್ಮ ವೃತ್ತಿಜೀವನದ ಎರಡನೇ ಪ್ರಮುಖ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಸೆಮಿಫೈನಲ್​ ಪಂದ್ಯದಲ್ಲಿ ಮಡ್ವೆಡೆವ್ ಅವರು ನಂ.2 ಶ್ರೇಯಾಂಕದ ಡೊಮಿನಿಕ್ ಥೀಮ್ ಅಥವಾ ಅಲೆಕ್ಸ್ ಡಿ ಮಿನೌರ್ ಅವರನ್ನು ಎದುರಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.