ಲಂಡನ್: ವಿಶ್ವದ ನಂಬರ್ 1 ಶ್ರೇಯಾಂಕದ ಸರ್ಬಿಯಾದ ನೊವಾಕ್ ಜೋಕೊವಿಕ್ ವಿಂಬಲ್ಡನ್ ಗ್ರ್ಯಾಂಡ್ಸ್ಲಾಮ್ನಲ್ಲಿ ಫೈನಲ್ ತಲುಪಿದ್ದು, ತಮ್ಮ ವೃತ್ತಿ ಜೀವನದ 20ನೇ ಗ್ರ್ಯಾಂಡ್ಸ್ಲಾಮ್ ಮುಡಿಗೇರಿಸಿಕೊಳ್ಳಲು ಕೇವಲ ಒಂದು ಜಯದ ಹಿಂದಿದ್ದಾರೆ.
ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕೆನಡಾದ ಡೆನಿಸ್ ಶಪೊಲೊವ್ ಅವರನ್ನು 7-6, 7-5,7-5ರ ನೇರ ಸೆಟ್ಗಳಲ್ಲಿ ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ. ಅಲ್ಲದೆ ಇದು ಅವರು ಸತತ 20 ನೇ ವಿಂಬಲ್ಡನ್ ಜಯವಾಗಿದೆ. 2018ರಿಂದ ಈ ಮೇಜರ್ ಟೂರ್ನಿಯಲ್ಲಿ ಅವರು ಸೋಲೆ ಕಂಡಿಲ್ಲ. ಇದೀಗ ಫೈನಲ್ ಪ್ರವೇಶಿಸಿದ್ದು ಭಾನುವಾರ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ಅವರ ಸವಾಲನ್ನು ಎದುರಿಸಲಿದ್ದಾರೆ.
-
Slices, smashes and sizzling shots delivered on Day 11 🔥#Wimbledon pic.twitter.com/1pRFeBrR3E
— Wimbledon (@Wimbledon) July 10, 2021 " class="align-text-top noRightClick twitterSection" data="
">Slices, smashes and sizzling shots delivered on Day 11 🔥#Wimbledon pic.twitter.com/1pRFeBrR3E
— Wimbledon (@Wimbledon) July 10, 2021Slices, smashes and sizzling shots delivered on Day 11 🔥#Wimbledon pic.twitter.com/1pRFeBrR3E
— Wimbledon (@Wimbledon) July 10, 2021
ನಡಾಲ್-ಫೆಡರರ್ ದಾಖಲೆ ಸರಿಗಟ್ಟಲಿರುವ ಸರ್ಬಿಯನ್ ಸ್ಟಾರ್:
ನೊವಾಕ್ ಜೋಕೊವಿಕ್ಗೆ ಇದು 30ನೇ ಗ್ರ್ಯಾಂಡ್ ಸ್ಲಾಮ್ ಫೈನಲ್ ಆಗಿದೆ. ಅವರು 19 ಬಾರಿ ಚಾಂಪಿಯನ್ ಆಗಿದ್ದು, 10 ಬಾರಿ ಸೋಲು ಕಂಡಿದ್ದಾರೆ. ಇದೀಗ 30ನೇ ಫೈನಲ್ನಲ್ಲಿ ಗೆದ್ದರೆ ಸ್ಪೇನ್ನ ರಾಫೆಲ್ ನಡಾಲ್ ಮತ್ತು ಸ್ವಟ್ಜರ್ಲೆಂಡ್ನ ರೋಜರ್ ಫೆಡರರ್ ಜೊತೆ ಗರಿಷ್ಠ ಗ್ರ್ಯಾಂಡ್ ಸ್ಲಾಮ್ ಗೆದ್ದ ವಿಶ್ವ ದಾಖಲೆಯನ್ನು ಹಂಚಿಕೊಳ್ಳಲಿದ್ದಾರೆ.
ರೋಜರ್ ಫೆಡರರ್ 8 ವಿಂಬಲ್ಡನ್, 6 ಆಸ್ಟ್ರೇಲಿಯನ್ ಓಪನ್, ಒಂದು ಫ್ರೆಂಚ್ ಓಪನ್ ಮತ್ತು 5 ಯುಎಸ್ ಓಪನ್ ಗೆದ್ದಿದ್ದಾರೆ. ನಡಾಲ್ ಒಂದು ಆಸ್ಟ್ರೇಲಿಯನ್ ಓಪನ್, 13 ಫ್ರೆಂಚ್ ಓಪನ್, 2 ವಿಂಬಲ್ಡನ್ ಮತ್ತು 4 ಯುಎಸ್ ಓಪನ್ ಗೆದ್ದಿದ್ದಾರೆ. ಜೋಕೊವಿಕ್, 9 ಆಸ್ಟ್ರೇಲಿಯನ್ ಓಪನ್, 5 ವಿಂಬಲ್ಡನ್, 2 ಫ್ರೆಂಚ್ ಓಪನ್, 4 ಯುಎಸ್ ಓಪನ್ ಗೆಲುವು ಸಾಧಿಸಿದ್ದಾರೆ.
ಇದನ್ನು ಓದಿ: Wimbledon : ಫೈನಲ್ನಲ್ಲಿ ಕರೋಲಿನಾ ಪ್ಲಿಸ್ಕೋವಾ-ಆಶ್ಲೆ ಬಾರ್ಟಿ ಮುಖಾಮುಖಿ