ETV Bharat / sports

ಆಸ್ಟ್ರೇಲಿಯನ್​ ಓಪನ್.. ಫೊಗ್ನಿನಿ ಮಣಿಸಿ ಕ್ವಾಟರ್​ ಫೈನಲ್​ಗೆ ಕಾಲಿಟ್ಟ ರಾಫೆಲ್ ನಡಾಲ್​

ಸೆರ್ಬಿಯಾದ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್, ಮಿಲೋಸ್ ರಾವೊನಿಕ್ ವಿರುದ್ಧ ಜಯಗಳಿಸಿದ ನಂತರ ಪಂದ್ಯಾವಳಿಯ ಕ್ವಾರ್ಟರ್ ಫೈನಲ್​​ ಪ್ರವೇಶಿಸಿದರು..

Rafael Nadal
ರಾಫೆಲ್ ನಡಾಲ್​
author img

By

Published : Feb 15, 2021, 3:52 PM IST

ಮೆಲ್ಬೋರ್ನ್​​ : ಸ್ಪ್ಯಾನಿಷ್​ ಟೆನಿಸ್​ ಆಟಗಾರ ರಾಫೆಲ್​ ನಡಾಲ್​ ಅವರು ಇಟಲಿಯ ಫೆಬಿಯೋ ಫೊಗ್ನಿನಿ ಅವರನ್ನು ಮಣಿಸಿ 13ನೇ ಬಾರಿ ಆಸ್ಟ್ರೇಲಿಯನ್​ ಓಪನ್​​ನಲ್ಲಿ ಕ್ವಾಟರ್​​ಫೈನಲ್​ ತಲುಪಿದರು.

ಆಸ್ಟ್ರೇಲಿಯಾದ ಓಪನ್ 2009ರ ಚಾಂಪಿಯನ್ ಫೊಗ್ನಿನಿಯನ್ನು 6-3, 6-4, 6-2 ಸೆಟ್​​ಗಳಿಂದ ಸೋಲಿಸಿ 21ನೇ ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಭರವಸೆಯನ್ನು ಜೀವಂತವಾಗಿರಿಸಿಕೊಂಡರು.

ಭಾನುವಾರ ವಿಶ್ವದ 4ನೇ ಕ್ರಮಾಂಕದ ಡ್ಯಾನಿಲ್ ಮೆಡ್ವೆಡೆವ್ ಯುಎಸ್ಎ ಟೆನಿಸ್ ಆಟಗಾರ ಮ್ಯಾಕೆಂಜಿ ಮೆಕ್ಡೊನಾಲ್ಡ್ ಅವರನ್ನು 6-4, 6-2, 6-3 ಸೆಟ್‌ಗಳಿಂದ ಸೋಲಿಸುವ ಮೂಲಕ ಸತತ 18 ಪಂದ್ಯಗಳನ್ನು ಗೆದ್ದರು.

ರಾಫೆಲ್ ನಡಾಲ್ ಗೆಲುವಿನ ಕ್ಷಣಗಳು.. ​

ಸೆರ್ಬಿಯಾದ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್, ಮಿಲೋಸ್ ರಾವೊನಿಕ್ ವಿರುದ್ಧ ಜಯಗಳಿಸಿದ ನಂತರ ಪಂದ್ಯಾವಳಿಯ ಕ್ವಾರ್ಟರ್ ಫೈನಲ್​​ ಪ್ರವೇಶಿಸಿದರು. ರಾವೊನಿಕ್ ವಿರುದ್ಧ ಜೊಕೊವಿಕ್ 7-6, 4-6, 6-1, 6-4 ಅಂತರದ ಗೆಲುವು ಸಾಧಿಸಿದರು.

ಈ ಮೂಲಕ ಗ್ರ್ಯಾಂಡ್​ ಸ್ಲಾಮ್​ನಲ್ಲೇ 300 ಪಂದ್ಯಗಳಲ್ಲಿ ಗೆಲುವು ಸಾಧಿಸಿದರು. ರೋಜರ್​ ಫೆಡರರ್​​ ನಂತರ 300 ಪಂದ್ಯಗಳಲ್ಲಿ ಗೆದ್ದ ಎರಡನೇ ಆಟಗಾರ ಎಂಬ ದಾಖಲೆ ಬರೆದರು.

ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆಯುವ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಜೊಕೊವಿಕ್ ವಿಶ್ವದ ನಂ.7 ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಎದುರಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.