ನ್ಯೂಯಾರ್ಕ್(ಅಮೆರಿಕ): ಟೆನ್ನಿಸ್ ಇತಿಹಾಸದಲ್ಲೇ ಪ್ರತಿಷ್ಠಿತ ಅಮೆರಿಕನ್ ಓಪನ್ನ ಮಹಿಳೆಯರ ಸಿಂಗಲ್ಸ್ ಗ್ರಾಂಡ್ಸ್ಲಾಮ್ ವಿಭಾಗದಲ್ಲಿ ಮೊದಲ ಬಾರಿಗೆ ಬ್ರಿಟನ್‌ನ 18 ವರ್ಷದ ಎಮ್ಮಾ ರಾಡುಕಾನು ಪ್ರಶಸ್ತಿ ಗೆದ್ದು ಹೊಸ ದಾಖಲೆ ನಿರ್ಮಿಸಿದ್ದಾರೆ.
ಕೆನಡಾದ ಲೇಲಾ ಫೆರ್ನಾಂಡಿಸ್ ಅವರನ್ನು ಸೋಲಿಸಿದ ಎಮ್ಮಾ ರಾಡುಕನು 53 ವರ್ಷಗಳ ನಂತರ ಸಿಂಗಲ್ಸ್ ಗ್ರಾಂಡ್ಸ್ಲಾಮ್ ಪ್ರಶಸ್ತಿ ಗೆದ್ದ ಮೊದಲ ಬ್ರಿಟಿಷ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಾಗಿದ್ದಾರೆ. ಲೇಲಾ ಫರ್ನಾಂಡೀಸ್ ವಿರುದ್ಧ 6-4, 6-3ರ ನೇರ ಅಂತರದಲ್ಲಿ ರಾಡುಕಾನು ಗೆಲುವು ಸಾಧಿಸಿದ್ದಾರೆ.
ನ್ಯೂಯಾರ್ಕ್ನ ಆರ್ಥರ್ ಆ್ಯಶ್ ಸ್ಟೇಡಿಯಂನಲ್ಲಿ ಪಂದ್ಯ ನಡೆದಿದ್ದು, '53 ವರ್ಷಗಳ ಕಾಯುವಿಕೆ ಅಂತ್ಯವಾಗಿದೆ. 1968ರಿಂದ ಇದೇ ಮೊದಲ ಬಾರಿಗೆ ಬ್ರಿಟನ್‌ನ ಎಮ್ಮಾ ರಾಡುಕಾನು ಯುಎಸ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ' ಎಂದು ಯುಎಸ್ ಓಪಬ್ ಟ್ವೀಟ್ ಮಾಡಿದೆ.
-
An ace of a lifetime 🏆
— US Open Tennis (@usopen) September 11, 2021 " class="align-text-top noRightClick twitterSection" data="
This Emma Raducanu ace is our Serve of the Day, crowning her your 2021 US Open Women's Singles Champion.@Heineken_US | #USOpen pic.twitter.com/MLJRAsXLFh
">An ace of a lifetime 🏆
— US Open Tennis (@usopen) September 11, 2021
This Emma Raducanu ace is our Serve of the Day, crowning her your 2021 US Open Women's Singles Champion.@Heineken_US | #USOpen pic.twitter.com/MLJRAsXLFhAn ace of a lifetime 🏆
— US Open Tennis (@usopen) September 11, 2021
This Emma Raducanu ace is our Serve of the Day, crowning her your 2021 US Open Women's Singles Champion.@Heineken_US | #USOpen pic.twitter.com/MLJRAsXLFh
ಬ್ರಿಟನ್‌ನ ರಾಣಿ ಎಲಿಜಬೆತ್ ಕೂಡಾ ಎಮ್ಮಾ ರಾಡುಕಾನು ಅವರನ್ನು ಅಭಿನಂದಿಸಿದ್ದಾರೆ. ನಾನು ಎಮ್ಮಾ ರಾಡುಕಾನು ಅವರಿಗೆ ಶುಭಾಶಯಗಳನ್ನು ಕೋರುತ್ತೇನೆ. ಚಿಕ್ಕವಯಸ್ಸಿನಲ್ಲೇ ಈ ಸಾಧನೆಯನ್ನು ಅವರು ಮಾಡಿದ್ದಾರೆ. ನೀವು ಮುಂದಿನ ತಲೆಮಾರಿನ ಟೆನ್ನಿಸ್ ಆಟಗಾರರಿಗೆ ಪ್ರೇರಣೆಯಾಗಿದ್ದೀರಿ ಎಂದಿದ್ದಾರೆ.
ಬ್ರಿಟನ್‌ನ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಕ್ರೀಡಾ ಸಚಿವ ನಿಗೆಲ್ ಹಡಲ್ಸ್ಟನ್ ಕೂಡಾ ಎಮ್ಮಾ ರಾಡುಕಾನು ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿ ವಿಶ್ವದಾಖಲೆ.. ಸಿಕ್ಸರ್ ಕಿಂಗ್ ಯುವಿ ಫೋನ್ಗೆ ಕಾಯುತ್ತಿರುವ ಜಸ್ಕರನ್!