ನ್ಯೂಯಾರ್ಕ್: ಯುಎಸ್ ಓಪನ್ ಸೆಮಿಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್ ವಿರುದ್ಧ 1-6, 6-3, 6-3 ಅಂತರದ ಗೆಲುವು ಸಾಧಿಸಿದ ವಿಕ್ಟೋರಿಯಾ ಅಜರೆಂಕಾ ಫೈನಲ್ ಪ್ರವೇಶಿಸಿದ್ದಾರೆ.
ಎರಡು ಬಾರಿ ಗ್ರ್ಯಾಂಡ್‌ಸ್ಲಾಮ್ ಚಾಂಪಿಯನ್ ಆಗಿರುವ ಅಜರೆಂಕಾ ಏಳು ವರ್ಷಗಳಲ್ಲಿ ಮೊದಲ ಬಾರಿ ಪ್ರಮುಖ ಫೈನಲ್ ಹಂತಕ್ಕೆ ಪ್ರವೇಶ ಪಡೆದಿದ್ದಾರೆ. 2018ರ ಯುಎಸ್ ಓಪನ್ ಚಾಂಪಿಯನ್ ನವೋಮಿ ಒಸಾಕಾ ಅವರನ್ನು ಉಪಾಂತ್ಯ ಸುತ್ತಿನಲ್ಲಿ ಎದುರಿಸಲಿದ್ದಾರೆ.
ಮೊದಲ ಸುತ್ತಿನಲ್ಲಿ ಮಂಕಾದ ಅಜರೆಂಕಾ ನಂತರದ ಎರಡು ಸೆಟ್ಗಳಲ್ಲಿ ಪ್ರಭಲ ಪೈಪೋಟಿ ನೀಡಿದರು, ಐದು ನೇರ ಪಂದ್ಯ ಗೆದ್ದು ಎರಡನೇ ಸೆಟ್ ಅನ್ನು ಮುಗಿಸಿ ಮೂರನೇಯದರಲ್ಲಿ 3-0 ಮುನ್ನಡೆ ಸಾಧಿಸಿದರು. ವಿಲಿಯಮ್ಸ್ ತಮ್ಮ 11 ಗ್ರ್ಯಾಂಡ್ಸ್ಲಾಮ್ಗಳ ಮುಖಾಮುಖಿಯಲ್ಲಿ ಮೊದಲ ಬಾರಿಗೆ ಸೋಲು ಕಂಡಿದ್ದಾರೆ.
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಜೆನಿಫರ್ ಬ್ರಾಡಿ ಅವರನ್ನು 7-6 (1), 3-6, 6-3ರ ಅಂತರದಿಂದ ಸೋಲಿಸಿದ ಒಸಾಕ ಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ನಡೆಯಲಿರುವ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಒಸಾಕಾ ಮತ್ತು ವಿಕ್ಟೋರಿಯಾ ಅಜರೆಂಕಾ ಮುಖಾಮುಖಿಯಾಗಲಿದ್ದಾರೆ.