ಸಿಡ್ನಿ: 2022ರ ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ಸ್ಲಾಮ್ ಟೂರ್ನಿಯನ್ನು ಜನವರಿಯಲ್ಲಿ ಮೆಲ್ಬೋರ್ನ್ನಲ್ಲಿ ಆಯೋಜಿಸಲು ಟೆನಿಸ್ ಆಸ್ಟ್ರೇಲಿಯಾ ಚಿಂತಿಸುತ್ತಿದೆ.
2022ರ ಮಧ್ಯಭಾಗದವರೆಗೆ ಅಂತಾರಾಷ್ಟ್ರೀಯ ಗಡಿಗಳು ಮುಚ್ಚಲ್ಪಡುತ್ತವೆ ಎಂಬ ಫೆಡರಲ್ ಸರ್ಕಾರದ ಮುನ್ಸೂಚನೆಯಿಂದಾಗಿ ಪಂದ್ಯಾವಳಿ ಬೇರೆ ಕಡೆ ದೇಶದಿಂದಾಚೆ ನಡೆಯಬಹುದು ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದ ಬೆನ್ನಲ್ಲೇ ದೇಶದ ಅಗ್ರ ಟೆನಿಸ್ ಸಂಸ್ಥೆಯಾದ ಟೆನಿಸ್ ಆಸ್ಟ್ರೇಲಿಯಾ ಸೋಮವಾರ ಈ ಕುರಿತು ಹೇಳಿಕೆ ಮಾಡಿದೆ.
"ಟೆನಿಸ್ ಆಸ್ಟ್ರೇಲಿಯಾ ಸಾಂಕ್ರಾಮಿಕ ರೋಗದ ನಡುವೆಯೂ 2021ರ ಆಸ್ಟ್ರೇಲಿಯನ್ ಓಪನ್ ಅನ್ನು ಯಶಸ್ವಿಯಾಗಿ ನಡೆಸಿದೆ. ಹಾಗಾಗಿ ಜನವರಿಯಲ್ಲಿ 2022ರ ಆಸ್ಟ್ರೇಲಿಯನ್ ಓಪನ್ ಅನ್ನು ಯೋಜಿಸುತ್ತಿದ್ದೇವೆ. ಈ ವರ್ಷವೂ ಮೆಲ್ಬೋರ್ನ್ನಲ್ಲೇ ವಿಶ್ವದ ಅತ್ಯುತ್ತಮ ಆಟಗಾರರಿಗೆ ಆತಿಥ್ಯ ವಹಿಸಲು ನಾವು ಎದುರು ನೋಡುತ್ತಿದ್ದೇವೆ. ಅಭಿಮಾನಿಗಳು ಮತ್ತು ಆಟಗಾರರಿಗಾಗಿ ಉತ್ತಮ ಮತ್ತು ಸುರಕ್ಷಿತ ವಾತಾವರಣ ನಿರ್ಮಿಸಿಕೊಡಲು ಸರ್ಕಾರದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. "ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿ:WTA ರ‍್ಯಾಂಕಿಂಗ್: ಟಾಪ್ 10ಕ್ಕೆ ಎಂಟ್ರಿಕೊಟ್ಟ 19 ವರ್ಷದ ಇಗಾ ಸ್ವಿಯಾಟೆಕ್