ನ್ಯೂಯಾರ್ಕ್: ಕೋವಿಡ್-19 ಕಳವಳವನ್ನು ಉಲ್ಲೇಖಿಸಿ ವಿಶ್ವದ 5ನೇ ಕ್ರಮಾಂಕದ ಟೆನಿಸ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಮತ್ತು ನಂ .7 ನೇ ಆಟಗಾರ್ತಿ ಕಿಕಿ ಬರ್ಟೆನ್ಸ್ ಈ ವರ್ಷದ ಯುಎಸ್ ಓಪನ್‌ನಿಂದ ಹೊರ ಬಂದಿದ್ದಾರೆ.
ಇದಕ್ಕೂ ಮೊದಲು ವಿಶ್ವ ನಂ .1 ಆಟಗಾರ್ತಿ ಆಶ್ಲೇ ಬಾರ್ಟಿ ಕೂಡ ನ್ಯೂಯಾರ್ಕ್‌ನ ಗ್ರ್ಯಾಂಡ್ ಸ್ಲ್ಯಾಮ್‌ನಿಂದ ಹಿಂದೆ ಸರಿದಿದ್ದರು.
ಯುಎಸ್ ಓಪನ್ ಪ್ರಸ್ತುತ ಆಗಸ್ಟ್ 31 ರಿಂದ ನಡೆಯಲಿದೆ. ಹೆಚ್ಚುತ್ತಿರುವ COVID-19 ಪ್ರಕರಣಗಳಿಂದಾಗಿ, ಟೆನಿಸ್ ತಾರೆಗಳು ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸ್ವಿಟೋಲಿನಾ ಟ್ವೀಟ್ ಮಾಡಿದ್ದು, ಎಲ್ಲ ಅಂಶಗಳನ್ನು ಪರಿಗಣಿಸಿ, 2020ರ ಯುಎಸ್ ಓಪನ್ ಆಡದಿರಲು ನಿರ್ಧರಿಸಿದ್ದೇನೆ. ಆಟಗಾರರಿಗೆ ಅವಕಾಶ ನೀಡಿದ ಯುಎಸ್ಟಿಎ, ಸಂಘಟಕರು ಮತ್ತು ಡಬ್ಲ್ಯೂಟಿಎಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ
"ಸುರಕ್ಷಿತ ವಾತಾವರಣದಲ್ಲಿ ಟೂರ್ನಿ ನಡೆಸಲು ಅವರು ಮಾಡುತ್ತಿರುವ ಎಲ್ಲ ಪ್ರಯತ್ನಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಗೌರವಿಸುತ್ತೇನೆ. ಆದರೆ, ನನ್ನ ತಂಡವನ್ನು ಮತ್ತು ನನ್ನನ್ನು ಹೆಚ್ಚಿನ ಅಪಾಯಕ್ಕೆ ಸಿಲುಕಿಸದೇ ಯುಎಸ್ಗೆ ಪ್ರಯಾಣಿಸದಿರಲು ನಿರ್ಧರಿಸಿದ್ದೇನೆ" ಎಂದಿದ್ದಾರೆ.
ಬರ್ಟೆನ್ಸ್ ಕೂಡ ಇನ್ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್ ಮೂಲಕ ತನ್ನ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಸುದೀರ್ಘ ಪರಿಗಣನೆಯ ನಂತರ, ಯುಎಸ್ ಓಪನ್ನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ. ಕೋವಿಡ್-19 ಪರಿಸ್ಥಿತಿ ಆತಂಕಕಾರಿಯಾಗಿದೆ ಮತ್ತು ಎಲ್ಲರ ಆರೋಗ್ಯ ಹಾಗೂ ಈ ವೈರಸ್‌ನ ನಿಯಂತ್ರಣವು ಆದ್ಯತೆಯಾಗಿದೆ" ಎಂದಿದ್ದಾರೆ.