ಪ್ಯಾರಿಸ್: ವಿಶ್ವದಾಖಲೆಯ 24ನೇ ಗ್ರ್ಯಾಂಡ್ ಸ್ಲಾಮ್ ಮೇಲೆ ಕಣ್ಣಿಟ್ಟಿದ್ದ ಅಮೆರಿಕಾದ ಸ್ಟಾರ್ ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸನ್ ಇದೀಗ ಪ್ರೇಂಚ್ ಓಪನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಟೂರ್ನಿಯಲ್ಲಿ ಭಾಗಿಯಾಗಿ ಮೊದಲ ಪಂದ್ಯ ಗೆಲ್ಲುವ ಮೂಲಕ ಶುಭಾರಂಭ ಮಾಡಿ ಎರಡನೇ ಸುತ್ತಿಗೆ ಲಗ್ಗೆ ಹಾಕಿದ್ದ ವಿಲಿಯಮ್ಸನ್ ಗಾಯದ ತೊಂದರೆಗೊಳಗಾಗಿ 2020 ಫ್ರೆಂಚ್ ಓಪನ್ನಿಂದ ಹೊರಗುಳಿಯುತ್ತಿರುವುದಾಗಿ ಹೇಳಿದ್ದಾರೆ.
-
"I always give a hundred per cent... and I take solace in that."@serenawilliams #RolandGarros pic.twitter.com/t9FNt49Prb
— Roland-Garros (@rolandgarros) September 30, 2020 " class="align-text-top noRightClick twitterSection" data="
">"I always give a hundred per cent... and I take solace in that."@serenawilliams #RolandGarros pic.twitter.com/t9FNt49Prb
— Roland-Garros (@rolandgarros) September 30, 2020"I always give a hundred per cent... and I take solace in that."@serenawilliams #RolandGarros pic.twitter.com/t9FNt49Prb
— Roland-Garros (@rolandgarros) September 30, 2020
ನಡೆಯುವುದಕ್ಕೂ ಹೆಣಗಾಡುತ್ತಿರುವ ಸೆರೆನಾ ಎರಡನೇ ಸುತ್ತಿನ ಮೊದಲ ಪಂದ್ಯಕ್ಕೂ ಮೊದಲೇ ಹಿಂದೆ ಸರಿದಿದ್ದಾರೆ. ಮೂರು ವಾರಗಳ ಹಿಂದೆ ನಡೆದ ಯುಎಸ್ ಓಪನ್ನ ಸೆಮಿಫೈನಲ್ ಪಂದ್ಯದಲ್ಲಿ ಇವರು ಗಾಯಕ್ಕೊಳಗಾಗಿದ್ದರು. ಇದರ ಮಧ್ಯೆ ಕೂಡ ಫ್ರೆಂಚ್ ಓಪನ್ನಲ್ಲಿ ಭಾಗಿಯಾಗಿದ್ದರು. ಇದೀಗ ನಾಲ್ಕರಿಂದ ಆರು ವಾರಗಳ ವಿಶ್ರಾಂತಿ ಅಗತ್ಯವಾಗಿರುವ ಕಾರಣ ಈ ನಿರ್ಧಾರ ಕೈಗೊಂಡಿದ್ದಾರೆ.
2014ರಲ್ಲಿ ಪ್ಯಾರಿಸ್ನಲ್ಲಿ ನಡೆದ ಎರಡನೇ ಸುತ್ತಿನ ಸೋಲಿನ ಬಳಿಕ ಇದೇ ಮೊದಲ ಸಲ ಅವರು ಟೂರ್ನಿಯಿಂದ ಹೊರಗುಳಿಯುತ್ತಿದ್ದಾರೆ.