ETV Bharat / sports

ಯುಎಸ್​ ಓಪನ್​: ಶುಭಾರಂಭದೊಂದಿಗೆ ವಿಶ್ವದಾಖಲೆಯ ಗ್ರ್ಯಾಂಡ್​ ಸ್ಲಾಮ್​ ಮೇಲೆ ಕಣ್ಣಿಟ್ಟಿದ್ದಾರೆ ಸೆರೆನಾ - ಸೆರೆನಾ ವಿಲಿಯಮ್ಸ್​ಗೆ ಜಯ

ಇದೇ ತಿಂಗಳು 39 ವಯಸ್ಸಿಗೆ ಕಾಲಿಡಲಿರುವ ಸೆರೆನಾ 6 ಬಾರಿ ಯುಎಸ್​ ಟ್ರೋಫಿಗಳನ್ನು ಎತ್ತಿ ಹಿಡಿದಿದ್ದಾರೆ. ಅಲ್ಲದೆ ಕಳೆದ ಎರಡು ಬಾರಿ ರನ್ನರ್​ ಅಪ್​ ಆಗಿರುವ ಅವರು, ಈ ವರ್ಷ ಚಾಂಪಿಯನ್ ಆದರೆ ಅತಿ ಹೆಚ್ಚು ಗ್ರ್ಯಾಂಡ್​ಸ್ಲಾಮ್​ ಗೆದ್ದಿರುವ ಮಾರ್ಗರೆಟ್ ಕೋರ್ಟ್​ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಯುಎಸ್​ ಓಪನ್ 2020
ಸರೆನಾ ವಿಲಿಯಮ್ಸ್​
author img

By

Published : Sep 2, 2020, 5:46 PM IST

ನ್ಯೂಯಾರ್ಕ್​: ವಿಶ್ವದಾಖಲೆಯ 24ನೇ ಗ್ರ್ಯಾಂಡ್​ ಸ್ಲಾಮ್​ ಮೇಲೆ ಕಣ್ಣಿಟ್ಟಿರುವ ಅಮೆರಿಕದ ಸೆರೆನಾ ವಿಲಿಯಮ್ಸ್​ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಜಯಶಾಲಿಯಾಗಿದ್ದಾರೆ.

ಸೆರೆನಾ ಅಮೆರಿಕದವರೇ ಆದ ಕ್ರಿಸ್ಟಿ ಆನ್​ ವಿರುದ್ಧ 7-5, 6-3 ಸೆಟ್​ ಜಯ ಸಾಧಿಸಿದರು ಈ ಜಯದ ಮೂಲಕ ಸೆರೆನಾ ಯುಎಸ್​ ಓಪನ್​ನಲ್ಲಿ 102ನೇ ಗೆಲುವು ಸಾಧಿಸಿ ಕ್ರಿಸ್​ ಎವರ್ಟ್​ ಅವರ ದಾಖಲೆಯನ್ನು ಮುರಿದರು. ಈ ಪಂದ್ಯದಲ್ಲಿ 13 ಏಸ್​ ಸಿಡಿಸಿದ ವಿಲಿಯಮ್ಸ್​ ಸರ್ವೀಸ್​ನಲ್ಲಿ ಕೇವಲ 6 ಅಂಕಗಳನ್ನು ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟರು.

ಸೆರೆನಾ ವಿಲಿಯಮ್ಸ್​
ಸೆರೆನಾ ವಿಲಿಯಮ್ಸ್​

ಇದೇ ತಿಂಗಳು 39 ವಯಸ್ಸಿಗೆ ಕಾಲಿಡಲಿರುವ ಸೆರೆನಾ 6 ಬಾರಿ ಯುಎಸ್​ ಟ್ರೋಫಿಗಳನ್ನು ಎತ್ತಿ ಹಿಡಿದಿದ್ದಾರೆ. ಅಲ್ಲದೆ ಕಳೆದ ಎರಡು ಬಾರಿ ರನ್ನರ್​ ಅಪ್​ ಆಗಿರುವ ಅವರು ಈ ವರ್ಷ ಚಾಂಪಿಯನ್ ಆದರೆ ಅತಿ ಹೆಚ್ಚು ಗ್ರ್ಯಾಂಡ್​ಸ್ಲಾಮ್​ ಗೆದ್ದಿರುವ ಮಾರ್ಗರೆಟ್ ಕೋರ್ಟ್​ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಸೆರೆನಾ ವಿಲಿಯಮ್ಸ್​ ತಮ್ಮ ಮುಂದಿನ ಪಂದ್ಯದಲ್ಲಿ ರಷ್ಯಾದ ಮಾರ್ಗರೆಟ್​ ಗ್ಯಾಸ್ಪರ್ಯನ್ ವಿರುದ್ಧ ಸೆಣಸಾಡಲಿದ್ದಾರೆ. ಗ್ಯಾಸ್ಪರ್ಯನ್ ತಮ್ಮ ಮೊದಲ ಸುತ್ತಿನಲ್ಲಿ 6-3, 6-7, 6-0 ರಲ್ಲಿ ಪೋರ್ಟೊ ರಿಕಾದ ಮೊನಿಕಾ ಪುಯಿಗ್ ಅವರನ್ನು ಮಣಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.