ಪ್ಯಾರೀಸ್ : 23 ಸಲ ಗ್ರ್ಯಾಂಡ್ಸ್ಲಾಮ್ ಚಾಂಪಿಯನ್ ಆಗಿರುವ ಅಮೆರಿಕಾದ ಸೆರೆನಾ ವಿಲಿಯಮ್ಸ್ ಹಿಮ್ಮಡಿ ಗಾಯದ ಕಾರಣ ಫ್ರೆಂಚ್ ಓಪನ್ ಚಾಂಪಿಯನ್ಶಿಪ್ನಿಂದ ಹೊರ ಬಿದ್ದಿದ್ದಾರೆ. 39 ವರ್ಷದ ಟೆನ್ನಿಸ್ ತಾರೆ ಬುಧವಾರ 2ನೇ ಸುತ್ತಿನ ಪಂದ್ಯದಲ್ಲಿ ಬಲ್ಗೇರಿಯಾದ ಸ್ವೆಟಾನಾ ಪಿಂಕೋವ ಅವರ ಸವಾಲನ್ನು ಎದುರಿಸಬೇಕಿತ್ತು.
"ಸೆರೆನಾ ವಿಲಿಯಮ್ಸ್ ಅಕಿಲ್ಸ್ ಇಂಜುರಿ(ಹಿಮ್ಮಡಿ ಸ್ನಾಯುಸೆಳೆತ)ಗೆ ಒಳಗಾಗಿದ್ದು ರೋಲ್ಯಾಂಡ್(ಫ್ರೆಂಚ್ ಓಪನ್)ನಿಂದ ಹಿಂದೆ ಸರಿದಿದ್ದಾರೆ" ಎಂದು ಫ್ರೆಂಚ್ ಓಪನ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಖಚಿತಪಡಿಸಿದೆ.
-
Serena Williams has withdrawn from #RolandGarros with an achilles injury. pic.twitter.com/u6vGa9JCkX
— Roland-Garros (@rolandgarros) September 30, 2020 " class="align-text-top noRightClick twitterSection" data="
">Serena Williams has withdrawn from #RolandGarros with an achilles injury. pic.twitter.com/u6vGa9JCkX
— Roland-Garros (@rolandgarros) September 30, 2020Serena Williams has withdrawn from #RolandGarros with an achilles injury. pic.twitter.com/u6vGa9JCkX
— Roland-Garros (@rolandgarros) September 30, 2020
ಈ ತಿಂಗಳ ಆರಂಭದಲ್ಲಿ ನಡೆದಿದ್ದ ಯುಎಸ್ ಓಪನ್ ಸೆಮಿಫೈನಲ್ನಲ್ಲಿ ವಿಕ್ಟೋರಿಯಾ ಅಜರೆಂಕಾ ವಿರುದ್ಧ ಸೋಲಿನ ಸಂದರ್ಭದಲ್ಲಿ ವಿಲಿಯಮ್ಸ್ ಗಾಯಗೊಂಡಿದ್ದರು. ಈ ಸಮಸ್ಯೆಗೆ ಎರಡು ವಾರಗಳ ವಿಶ್ರಾಂತಿ ಅಗತ್ಯವಿರುತ್ತದೆ ಮತ್ತು ನಂತರ ನಾಲ್ಕರಿಂದ ಆರು ವಾರಗಳ ಪುನರ್ವಸತಿ ಅಗತ್ಯವಿರುತ್ತದೆ ಎಂದು ಸೆರೆನಾ ತಿಳಿಸಿದ್ದರು.
ಫ್ರೆಂಚ್ ಓಪನ್ ಗೆದ್ದು ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದಿರುವ ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್ ಅವರ ದಾಖಲೆ ಸರಿಗಟ್ಟುವ ಆಸೆ ಹೊಂದಿದ್ದ ಸೆರೆನಾಗೆ ಗಾಯ ನಿರಾಶೆ ತಂದಿದೆ. ಮಾರ್ಗರೇಟ್ 24 ಪ್ರಶಸ್ತಿ ಗೆದ್ದಿದ್ರೆ, ಸೆರೆನಾ 23 ಬಾರಿ ಗ್ರ್ಯಾಂಡ್ಸ್ಲಾಮ್ ಎತ್ತಿ ಹಿಡಿದಿದ್ದಾರೆ.