ನವದೆಹಲಿ: ಭಾರತದ ರಾಮ್ಕುಮಾರ್ ರಾಮನಾಥನ್ ಅರ್ಜೆಂಟೀನಾದ ತಾಮಸ್ ಮಾರ್ಟಿನ್ ಅವರನ್ನು ಮಣಿಸುವ ಮೂಲಕ ವಿಂಬಲ್ಡನ್ ಕ್ವಾಲಿಫೈಯರ್ನ 3ನೇ ಸುತ್ತು ಪ್ರವೇಶಿಸಿದ್ದಾರೆ.
ವಿಂಬಲ್ಡನ್ ಸಿಂಗಲ್ಸ್ ವಿಭಾಗದಲ್ಲಿ ಏಕೈಕ ಆಟಗಾರನಾಗಿ ಉಳಿದಿರುವ ರಾಮ್ಕುಮಾರ್, ಇಂದು ನಡೆದ ಪಂದ್ಯದಲ್ಲಿ 6-3, 6-4ರ ಅಂತರದಲ್ಲಿ ಮಾರ್ಟಿನ್ ವಿರುದ್ಧ ಸುಲಭ ಜಯ ಸಾಧಿಸಿ 3ನೇ ಸ್ಥಾನ ಪಡೆದರು.
ಎಟಿಪಿ ಶ್ರೇಯಾಂಕದಲ್ಲಿ 212ನೇ ಶ್ರೇಯಾಂಕ ಪಡೆದಿರುವ ರಾಮ್ಕುಮಾರ್, ಮೊದಲ ಸುತ್ತಿನಲ್ಲಿ ಜೋಸೆಫ್ ಕೊವ್ಲಿಕಾ ವಿರುದ್ಧ 6-2, 6-0 ಸೆಟ್ಗಳಿಂದ ಗೆಲುವು ಸಾಧಿಸಿದ್ದರು. ಭಾರತದ ಮತ್ತೊಬ್ಬ ಆಟಗಾರ ಪಜ್ಞೇಶ್ ಗುಣೇಶ್ವರನ್ ಮೊದಲ ಸುತ್ತಿನ ಪಂದ್ಯದಲ್ಲೇ 1-6, 6-7ರಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದರು.
ಇದನ್ನು ಓದಿ:ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದರೆ 6 ಕೋಟಿ ರೂ. ಬಹುಮಾನ... ಈ ರಾಜ್ಯದಿಂದ ಘೋಷಣೆ