ಪ್ಯಾರಿಸ್: ಪ್ಯಾರಿಸ್ ಮಾಸ್ಟರ್ಸ್‌ನ ಎರಡನೇ ಸುತ್ತಿನಲ್ಲಿ ಸ್ಪ್ಯಾನಿಷ್ ಆಟಗಾರ ಫೆಲಿಸಿಯಾನೊ ಲೋಪೆಜ್ ಅವರನ್ನು ಸೋಲಿಸಿದ ರಾಫೆಲ್ ನಡಾಲ್ ಸಿಂಗಲ್ಸ್ ವಿಭಾಗದಲ್ಲಿ ಒಂದು ಸಾವಿರ ಪಂದ್ಯ ಗೆದ್ದ ದಾಖಲೆ ಬರೆದಿದ್ದಾರೆ.
ಫೆಲಿಸಿಯಾನೊ ಲೋಪೆಜ್ ಅವರನ್ನು 4-6, 7-6 (5), 6-4 ಸೆಟ್‌ಗಳಿಂದ ಸೋಲಿಸಿದಾಗ ನಡಾಲ್ 1,000 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ವಿಶ್ವದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1968ರಲ್ಲಿ ಓಪನ್ಸ್ ಯುಗ ಪ್ರಾರಂಭವಾದಾಗಿನಿಂದ, 20 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಜಿಮ್ಮಿ ಕಾನರ್ಸ್ (1,274), ರೋಜರ್ ಫೆಡರರ್ (1,242) ಮತ್ತು ಇವಾನ್ ಲೆಂಡ್ಲ್ (1,068) ಸಾವಿರ ಪಂದ್ಯ ಗೆದ್ದ ದಾಖಲೆ ಬರೆದಿದ್ದರು. ಇದೀಗ ನಡಾಲ್ ಕೂಡ ಸಾವಿರ ಪಂದ್ಯ ಗೆದ್ದು ದಾಖಲೆ ಬರೆದಿದ್ದಾರೆ.