ETV Bharat / sports

ಯುಎಸ್ ಓಪನ್​ : ಅಜರೆಂಕಾ ಮಣಿಸಿ ಚಾಂಪಿಯನ್​ ಪಟ್ಟಕ್ಕೇರಿದ ಒಸಾಕಾ - ಯುಎಸ್ ಓಪನ್​ಗೆದ್ದ ನವೋಮಿ ಒಸಾಕ

ಬೆಲರಷಿಯನ್​ ಟೆನ್ನಿಸ್​ ಪ್ಲೇಯರ್​ ವಿಕ್ಟೋರಿಯಾ ಅಜರೆಂಕಾರನ್ನು ಸೋಲಿಸಿದ ಜಪಾನ್​​ನ ನವೋಮಿ ಒಸಾಕ ಯುಎಸ್​ ಓಪನ್​ನಲ್ಲಿ ಚಾಂಪಿಯನ್​ ಪಟ್ಟಕ್ಕೇರಿದರು.

Naomi Osaka clinches 2nd US Open title
ಯುಎಸ್ ಓಪನ್​ಗೆದ್ದ ನವೋಮಿ ಒಸಾಕ
author img

By

Published : Sep 13, 2020, 8:00 AM IST

ನ್ಯೂಯಾರ್ಕ್: ಯುಎಸ್ ಓಪನ್ ಫೈನಲ್‌ ಪಂದ್ಯದಲ್ಲಿ ಬೆಲರಷಿಯನ್​ ಟೆನ್ನಿಸ್​ ಆಟಗಾರ್ತಿ​ ವಿಕ್ಟೋರಿಯಾ ಅಜರೆಂಕಾ ವಿರುದ್ಧ ಮಿಂಚಿದ ಜಪಾನ್​​ನ ನವೋಮಿ ಒಸಾಕಾ, ಮೂರನೇ ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ನಾಲ್ಕನೇ ಶ್ರೇಯಾಂಕಿತ ಒಸಾಕಾ, ಆರ್ಥರ್ ಆಶೆ ಕ್ರೀಡಾಂಗಣದಲ್ಲಿ 1 ಗಂಟೆ 53 ನಿಮಿಷ ಹೋರಾಟದಲ್ಲಿ 1-6, 6-3, 6-3 ಸೆಟ್‌ಗಳಿಂದ ವಿಕ್ಟೋರಿಯಾ ಅಜರೆಂಕಾ ಅವರನ್ನು ಸೋಲಿಸಿದ್ದಾರೆ.

2018ರ ಯುಎಸ್ ಓಪನ್ ಮತ್ತು 2019ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಜಯಗಳಿಸಿದ ನಂತರ 22 ವರ್ಷದ ಒಸಾಕಾಗೆ ಇದು ಮೂರನೇ ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿಯಾಗಿದೆ. 31 ವರ್ಷದ ಅಜರೆಂಕಾ ಕೇವಲ 26 ನಿಮಿಷಗಳಲ್ಲಿ ಮೊದಲ ಸೆಟ್​ನಲ್ಲಿ ಜಯ ದಾಖಲಿಸಿದರು. ಅದರೆ ಮುಂದಿನ ಎರಡು ಸೆಟ್​ಗಳಲ್ಲಿ ತಿರುಗೇಟು ನೀಡಿದ ​ಒಸಾಕಾ ಭರ್ಜರಿ ಜಯ ದಾಖಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.