ETV Bharat / sports

ಯುಎಸ್​ ಓಪನ್ 2020​: ಸೆಮಿಫೈನಲ್​ ಪ್ರವೇಶಿಸಿದ ನವೋಮಿ ಒಸಾಕ - ಯುಎಸ್​ ಓಪನ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿದ ನವೋಮಿ ಒಸಾಕ

ಮಂಗಳವಾರ ನಡೆದ ಪಂದ್ಯದಲ್ಲಿ ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿರುವ ಒಸಾಕ ಕ್ವಾರ್ಟರ್ ಫೈನಲ್‌ನಲ್ಲಿ ಶ್ರೇಯಾಂಕರಹಿತ ಆಟಗಾರ್ತಿ ಅಮೆರಿಕದ ಶೆಲ್ಬಿ ರೋಜರ್ಸ್ ವಿರುದ್ಧ 6-3, 6-4ರ ನೇರ ಸೆಟ್​ಗಳ ಅಂತರದಲ್ಲಿ ಜಯ ಸಾಧಿಸಿ ಸಿಮಿಗೆ ಎಂಟ್ರಿಕೊಟ್ಟಿದ್ದಾರೆ.

ಯುಎಸ್​ ಓಪನ್ 2020​
ನವೋಮಿ ಒಸಾಕ
author img

By

Published : Sep 9, 2020, 10:21 PM IST

Updated : Sep 9, 2020, 11:23 PM IST

ನ್ಯೂಯಾರ್ಕ್: ಜಪಾನ್​ ಯದಯೋನ್ಮುಖ ಆಟಗಾರ್ತಿ ನವೋಮಿ ಒಸಾಕ ಯುಎಸ್​ ಓಪನ್​ನ ಮಹಿಳೆಯರ ಸಿಂಗಲ್ಸ್​ ವಿಭಾಗದಲ್ಲಿ ಸೆಮಿಫೈನಲ್​ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿರುವ ಒಸಾಕ ಕ್ವಾರ್ಟರ್ ಫೈನಲ್‌ನಲ್ಲಿ ಶ್ರೇಯಾಂಕರಹಿತ ಆಟಗಾರ್ತಿ ಅಮೆರಿಕದ ಶೆಲ್ಬಿ ರೋಜರ್ಸ್ ವಿರುದ್ಧ 6-3, 6-4ರ ನೇರ ಸೆಟ್​ಗಳ ಅಂತರದಲ್ಲಿ ಜಯ ಸಾಧಿಸಿ ಸಿಮಿಗೆ ಎಂಟ್ರಿಕೊಟ್ಟಿದ್ದಾರೆ.

22 ವರ್ಷದ ಒಸಾಕ ಕೇವಲ ಒಂದು ಗಂಟೆ 20 ನಿಮಿಷಗಳಲ್ಲಿ 27 ವರ್ಷದ ಎದುರಾಳಿಯನ್ನು ಮಣಿಸಿದರು. ಅವರು ಸೆಮಿಫೈನಲ್​ನಲ್ಲಿ 41 ಶ್ರೇಯಾಂಕಿತೆಯಾಗಿರುವ ಅಮೆರಿಕಾದ ಜೆನ್ನಿಫರ್​ ಬ್ರಾಡಿ ಅವರನ್ನು ಎದುರಿಸಲಿದ್ದಾರೆ.

ಪುರುಷರ ಕ್ವಾರ್ಟರ್​ ಫೈನಲ್​ನಲ್ಲಿ ನಾಲ್ಕುಗಂಟೆಗೂ ಹೆಚ್ಚು ಕಾಲ ನಡೆದ ಜಿದ್ದಾಜಿದ್ದಿಯ ಹೋರಾಟದ ಪಂದ್ಯದಲ್ಲಿ ಪ್ಯಾಬ್ಲೊ ಕರೆನೊ ಬೂಸ್ಟಾ ಕೆನಡಾದ ಢೇನಿಸ್ ಶಪೊವಲೊವ್ ಅವರನ್ನು 3-6, 7-6(5), 7-6 (4), 0-6, 6-3ರಲ್ಲಿ ಮಣಿಸಿ ಸೆಮಿಫೈನಲ್​ಗೆ ಎಂಟ್ರಿಕೊಟ್ಟಿದ್ದಾರೆ.

ಸೆಮಿಫೈನಲ್‌ನಲ್ಲಿ ಅವರು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಎದುರಿಸಲಿದ್ದಾರೆ. ಜರ್ಮನಿಯ ಜ್ವೆರೆವ್ ಕ್ರೊಯೇಷಿಯಾದ ಬೋರ್ನಾ ಕೋರಿಕ್ ವಿರುದ್ಧ 1-6, 7-6 (7/5), 7-6 (7/1), 6-3ರಲ್ಲಿ ಗೆಲುವು ಸಾಧಿಸಿದರು.

ಇಂದು ನಡೆಯುವ ಮತ್ತರೆಡು ಕ್ವಾರ್ಟರ್​ ಫೈನಲ್​ನಲ್ಲಿ ಡೊಮೆನಿಕ್ ಥೀಮ್​- ಅಲೆಕ್ಸ್​ ಡಿ ಮಿನೌರ್​, ಮಡ್ವದೆವ್​-ರುಬ್ಲೆವ್​ ಸೆಣಸಾಡಲಿದ್ದಾರೆ. ಮಹಿಳೆಯರ ಸಿಂಗಲ್ಸ್​ ಕ್ವಾರ್ಟರ್​ ಫೈನಲ್​ನಲ್ಲಿ ಸೆರೆನಾ ವಿಲಿಯಮ್ಸ್​ ಹಾಗೂ ಸ್ವೆಟಾನ ಪಿರಂಕೋವಾ ಕಾದಾಡಲಿದ್ದಾರೆ.

Last Updated : Sep 9, 2020, 11:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.