ಪ್ಯಾರಿಸ್: ಭಾರತದ ಟಾಪ್ ಟೆನಿಸ್ ಆಟಗಾರ ಸುಮಿತ್ ನಗಾಲ್ ಸತತ ಮೂರನೇ ಗ್ರ್ಯಾಂಡ್ ಸ್ಲಾಮ್ ಪ್ರಮುಖ ಸುತ್ತು ಪ್ರವೇಶಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಫ್ರೆಂಚ್ ಓಪನ್ ಕ್ವಾಲಿಫೈಯರ್ನ 2ನೇ ಸುತ್ತಿನಲ್ಲಿ ಸೋಲು ಕಂಡು ನಿರಾಶೆಯನುಭವಿಸಿದ್ದಾರೆ.
ಹರಿಯಾಣದ ಯುವ ಆಟಗಾರ ಮಣ್ಣಿನ ಅಂಕಣದಲ್ಲಿ ನಡೆದ ಪಂದ್ಯದಲ್ಲಿ 3-6, 3-6ರಲ್ಲಿ ಚಿಲಿ ಆಟಗಾರ ಅಲೆಜಂಡ್ರೋ ತಬಿಲೊ ವಿರುದ್ಧ ಬುಧವಾರ ರಾತ್ರಿ ಸೋಲು ಕಂಡು ನಿರಾಸೆಯನುಭವಿಸಿದ್ದಾರೆ.
ತಮಗಿಂತಲೂ 23 ಶ್ರೇಯಾಂಕ ಕಡಿಮೆಯಿರುವ ಆಟಗಾರನ ವಿರುದ್ಧ ಒಂದುವರೆ ಗಂಟೆ ನಡೆದ ಪಂದ್ಯದಲ್ಲಿ ಸೋಲುವ ಮೂಲಕ ಟೂರ್ನಮೆಂಟ್ನಲ್ಲಿ ಭಾರತ ಸವಾಲು ಅಂತ್ಯವಾಯಿತು. ರಾಮ್ ಕುಮಾರ್ ರಾಮನಾಥನ್, ಪ್ರಜ್ನೇಶ್ ಗುಣೇಶ್ವರನ್ ಮತ್ತು ಅಂಕಿತ ರೈನಾ ಈಗಾಗಲೇ ಸೋಲು ಕಂಡು ಹೊರಬಿದ್ದಿದ್ದಾರೆ.
ಡಬಲ್ಸ್ನಲ್ಲಿ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಫ್ರೆಂಚ್ ಓಪನ್ನಲ್ಲಿ ಭಾಗವಹಿಸಲಿದ್ದಾರೆ. ಸಾನಿಯಾ ಮಿರ್ಜಾ ಈ ಟೂರ್ನಿಯಲ್ಲಿ ಭಾಗವಹಿಸಲಿದಿರಲು ತೀರ್ಮಾನಿಸಿದ್ದು, ತಮ್ಮ ಸ್ಪೆಷಲ್ ರ‍್ಯಾಂಕಿಂಗ್ಅನ್ನು ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ವೇಳೆ ಉಪಯೋಗಿಸಲು ಬಯಸಿದ್ದಾರೆ.
ಇದನ್ನು ಓದಿ:ಟೆಸ್ಟ್ ಚಾಂಪಿಯನ್ಶಿಪ್ 3 ಪಂದ್ಯಗಳ ಫೈನಲ್ ಆಗಿದ್ದರೆ ಸೂಕ್ತವಾಗಿರುತ್ತಿತ್ತು: ಕಪಿಲ್ ದೇವ್