ETV Bharat / sports

ಸಿನ್ನರ್​ ಮಣಿಸಿ ಫ್ರೆಂಚ್ ಓಪನ್ ಸೆಮಿಫೈನಲ್ ಪ್ರವೇಶಿಸಿದ ನಡಾಲ್​ - french open 2020

12 ಬಾರಿಯ ಚಾಂಪಿಯನ್ ನಡಾಲ್, ರೊಲ್ಯಾಂಡ್​ ಗ್ಯಾರೋಸ್​ನಲ್ಲಿ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ 19 ವರ್ಷದ ಜನ್ನಿಕ್ ಸಿನ್ನರ್​ ಅವರನ್ನು 7-6(4), 6-4 ಹಾಗೂ 6-1ಪಾಯಿಂಟ್​​​ಗಳಲ್ಲಿ ಮಣಿಸಿ ಸೆಮಿಫೈನಲ್​ ಪ್ರವೇಶಿಸಿದ್ದಾರೆ.

ಸೆಮಿಫೈನಲ್ ಪ್ರವೇಶಿಸಿದ ನಡಾಲ್​
ಸೆಮಿಫೈನಲ್ ಪ್ರವೇಶಿಸಿದ ನಡಾಲ್​
author img

By

Published : Oct 7, 2020, 4:02 PM IST

ಪ್ಯಾರಿಸ್​: ವಿಶ್ವದ 2ನೇ ಶ್ರೇಯಾಂಕದ ಟೆನಿಸ್ ಪ್ಲೇಯರ್ ರಾಫೆಲ್​ ನಡಾಲ್​ ಫ್ರೆಂಚ್ ಓಪನ್​ನ​ ಕ್ವಾರ್ಟರ್ ಫೈನಲ್​ನಲ್ಲಿ ಗೆದ್ದು 13ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ್ದಾರೆ.

12 ಬಾರಿ ಚಾಂಪಿಯನ್ ಆಗಿರುವ ನಡಾಲ್ ರೊಲ್ಯಾಂಡ್​ ಗ್ಯಾರೋಸ್​ನಲ್ಲಿ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ 19 ವರ್ಷದ ಜನ್ನಿಕ್ ಸಿನ್ನರ್​ ವಿರುದ್ಧ 7-6(4), 6-4 ಹಾಗೂ 6-1ರಲ್ಲಿ ಮಣಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದರು.

ನಡಾಲ್ vs ಜನ್ನಿಕ್ ಸಿನ್ನರ್

ಕ್ಲೇ-ಕೋರ್ಟ್ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಯಲ್ಲಿ ಈ ವರ್ಷ ಕೃತಕ ದೀಪಗಳನ್ನು ಬಳಸಲಾಗುತ್ತಿದೆ. ಹಾಗಾಗಿ ರಾತ್ರಿ ವೇಳೆಯೂ ಸಹ ಪಂದ್ಯಗಳು ನಡೆಯುತ್ತಿವೆ. ಮಂಗಳವಾರ 5 ಪಂದ್ಯಗಳಿದ್ದಿದ್ದರಿಂದ ನಡಾಲ್ ಮತ್ತು ಸಿನ್ನರ್​ ನಡುವಿನ ಪಂದ್ಯ ಮಧ್ಯರಾತ್ರಿ 1.30ಕ್ಕೆ ಮುಗಿಯಿತು.

ಸುಲಭ ಜಯ ಸಾಧಿಸಿರುವ ನಡಾಲ್​ ಸೆಮಿಫೈನಲ್​ನಲ್ಲಿ ಅರ್ಜೆಂಟೀನಾದ ಡಿಗೊ ಸ್ವಾರ್ಟ್ಜಮನ್ ವಿರುದ್ಧ ಸೆಣಸಾಡಲಿದ್ದಾರೆ. ಈ ಪಂದ್ಯದಲ್ಲೂ ನಡಾಲ್​ ಗೆಲ್ಲುವ ನೆಚ್ಚಿನ ಆಟಗಾರನಾಗಿದ್ದಾರೆ. ಏಕೆಂದರೆ ಡಿಗೊ ಸ್ವಾರ್ಟ್ಜಮನ್​ ವಿರುದ್ಧ ನಡಾಲ್ 9-1 ರಿಂದ ಸೋಲು - ಗೆಲುವಿನ ಅಂತರ ಕಾಪಾಡಿಕೊಂಡಿದ್ದಾರೆ. ಇವರಿಬ್ಬರ ನಡುವಿನ ಪಂದ್ಯ ಶುಕ್ರವಾರ ನಡೆಯಲಿದೆ.

ಇಂದು ಮತ್ತೊಂದು ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್​ ಒನ್ ಆಟಗಾರ ನೊವಾಕ್ ಜೋಕೊವಿಕ್​ ಸ್ಪೇನಿನ ಕ್ಯಾರೆನೊ ಬುಸ್ಟಾ ಅವರ ಸವಾಲನ್ನು ಎದುರಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.