ETV Bharat / sports

ಎಟಿಪಿ ಫೈನಲ್ಸ್​​: ಸೆಮಿಫೈನಲ್ ಪ್ರವೇಶಿಸಿದ ರಾಫೆಲ್ ನಡಾಲ್ - ಸೆಮಿಫೈನಲ್ ಪ್ರವೇಶಿಸಿದ ರಾಫೆಲ್ ನಡಾಲ್

ನಡಾಲ್ 6-4, 4-6, 6-2 ಸೆಟ್‌ಗಳಿಂದ ಸ್ಟೆಫಾನೋಸ್ ಸಿಟ್ಸಿಪಾಸ್ ಸೋಲಿಸಿ, ಆರನೇ ಬಾರಿ ಸೆಮಿಫೈನಲ್ ಪ್ರವೇಶಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ಅವರು ಡೇನಿಯಲ್ ಮೆಡ್ವೆಡೆವ್ ಅವರನ್ನ ಎದುರಿಸಲಿದ್ದಾರೆ.

Nadal beats champion Tsitsipas for semi-final spot at ATP Finals
ರಾಫೆಲ್ ನಡಾಲ್
author img

By

Published : Nov 20, 2020, 11:35 AM IST

ಲಂಡನ್: ಎಟಿಪಿ ಫೈನಲ್ಸ್​​ನಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ರಾಫೆಲ್ ನಡಾಲ್, ಹಾಲಿ ಚಾಂಪಿಯನ್ ಸ್ಟೆಫಾನೋಸ್ ಸಿಟ್ಸಿಪಾಸ್ ಅವರನ್ನ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಎರಡು ಗಂಟೆ ಐದು ನಿಮಿಷಗಳ ರೋಚಕ ಹಣಾಹಣಿ ಪಂದ್ಯದಲ್ಲಿ, ನಡಾಲ್ 6-4, 4-6, 6-2 ಸೆಟ್‌ಗಳಿಂದ ಸ್ಟೆಫಾನೋಸ್ ಸಿಟ್ಸಿಪಾಸ್ ಸೋಲಿಸಿ, ಆರನೇ ಬಾರಿ ಸೆಮಿಫೈನಲ್ ಪ್ರವೇಶಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ಅವರು ಡೇನಿಯಲ್ ಮೆಡ್ವೆಡೆವ್ ಅವರನ್ನ ಎದುರಿಸಲಿದ್ದಾರೆ.

ಕಳೆದ ವರ್ಷ, ನಡಾಲ್ ಅಂತಿಮ ರೌಂಡ್ - ರಾಬಿನ್ ಪಂದ್ಯದಲ್ಲಿ ಸಿಟ್ಸಿಪಾಸ್ ಅವರನ್ನು ಸೋಲಿಸಿದ್ದರು. ಈ ಬಾರಿಯು ಅವರನ್ನ ಮಣಿಸಿ ಮತ್ತೆ ಟೂರ್ನಿಯಿಂದ ಹೊರ ಕಳುಹಿಸಿದ್ದಾರೆ. ಈ ಪಂದ್ಯದಲ್ಲಿ 6 - 4 ರಿಂದ ಮೊದಲ ಸೆಟ್​ ಗೆದ್ದ ನಡಾಲ್​ಗೆ, ಎರಡನೇ ಸೆಟ್​ನಲ್ಲಿ ಸ್ಟೆಫಾನೋಸ್ ಸಿಟ್ಸಿಪಾಸ್ ಪ್ರತಿರೋಧ ತೋರಿಸಿ 4 - 6 ರಿಂದ ಸೆಟ್​ ಗೆದ್ದುಕೊಂಡರು. ಆದರೆ ಮೂರನೇ ಸೆಟ್​ನಲ್ಲಿ ಫಾರ್ಮಗೆ ಮರಳಿದ ನಡಾಲ್​ 6 - 2 ರಿಂದ ಸುಲಭವಾಗಿ ಸೆಟ್​​ ತಮ್ಮದಾಗಿಸಿಕೊಂಡರು.

ಕಳೆದ ವರ್ಷದಂತೆ ಈ ವರ್ಷವು ನಾನು ಸೆಮಿಫೈನಲ್‌ನಲ್ಲಿ ಪ್ರವೇಶಿಸಿದ್ದೇನೆ. ಕಳೆದ ಬಾರಿ ದುರದೃಷ್ಟದಿಂದ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ್ದೆ, ಆದರೆ ಈ ಬಾರಿ ಹಾಗೆ ಆಗಲು ಬಿಡುವುದಿಲ್ಲ. ಈ ಬಾರಿ ಸೆಮಿಫೈನಲ್‌ನಲ್ಲಿ ಆಡಲು ಉತ್ಸುಕನಾಗಿದ್ದೇನೆ. ಈ ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡಿ ಗೆಲವು ಸಾಧಿಸುತ್ತೇನೆ ಎನ್ನುವ ನಂಬಿಕೆ ಇದೆ ಎಂದು ಪಂದ್ಯದ ಬಳಿಕ ನಡಾಲ್​ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.