ಲಂಡನ್: ಡಿಯಾಗೋ ಸ್ವಾರ್ಟ್ಜ್ಮನ್ ಅವರನ್ನು ಮಣಿಸಿದ ರಷ್ಯಾದ ಡ್ಯಾನಿಲ್ ಮಡ್ವೆಡೆವ್ ಎಟಿಪಿ ಫೈನಲ್ಸ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೆಡ್ವೆಡೆವ್ 6-3, 6-3 ರ ಸೆಟ್ಗಳ ಅಂತರದಲ್ಲಿ ಅರ್ಜೆಂಟೈನಾ ಆಟಗಾರನನ್ನು ಮಣಿಸಿದರು. ಕಳೆದ ವರ್ಷ ಗೆಲುವೇ ಇಲ್ಲದೇ ಟೂರ್ನಿ ಮುಗಿಸಿದ್ದ ಮಡ್ವಡೆವ್ ಈ ಬಾರಿ ಸೋಲುಕಾಣದೇ ಸೆಮಿಫೈನಲ್ ಸಾಧನೆ ಮಾಡಿದ್ದಾರೆ.
ಮೆಡ್ವೆಡೆವ್ ಸೆಮಿಫೈನಲ್ನಲ್ಲಿ 20 ಗ್ರ್ಯಾಂಡ್ಸ್ಲಾಮ್ ವಿನ್ನರ್ ಆಗಿರುವ ಸ್ಪೇನಿನ ಸ್ಟಾರ್ ಆಟಗಾರ ರಾಫೆಲ್ ನಡಾಲ್ ವಿರುದ್ಧ ಭಾನುವಾರ ಕಾದಾಡಲಿದ್ದಾರೆ. ಕಳೆದ ಬಾರಿ ಎಟಿಪಿ ಫೈನಲ್ಸ್ನ ಮುಖಾಮುಖಿಯಲ್ಲಿ ನಡಾಲ್ ವಿರುದ್ಧ ರಷ್ಯನ್ ಸ್ಟಾರ್ ಸೋಲು ಕಂಡಿದ್ದರು. ಅಲ್ಲದೆ ವೃತ್ತಿಪರ ಮುಖಾಮುಖಿಯಲ್ಲೂ ನಡಾಲ್ ವಿರುದ್ಧ 3-0ಯಲ್ಲಿ ಹಿನ್ನಡೆ ಹೊಂದಿದ್ದಾರೆ.