ಪ್ಯಾರಿಸ್: ಕೆನಡಾದ ಮಿಲೋಸ್ ರಾವೊನಿಕ್ ಅವರನ್ನು 6-4, 7-6 (4) ಸೆಟ್‌ಗಳಿಂದ ಸೋಲಿಸಿ ಡೆನಿಯಲ್ ಮೆಡ್ವೆಡೆವ್ ಮೊದಲ ಬಾರಿಗೆ ಪ್ಯಾರಿಸ್ ಮಾಸ್ಟರ್ಸ್ ಫೈನಲ್ಗೆ ಎಂಟ್ರಿ ಕೊಟ್ಟಿದ್ದಾರೆ.
ಮೂರನೇ ಶ್ರೇಯಾಂಕಿತ ರಷ್ಯನ್ ಆಟಗಾರ ಮೆಡ್ವೆಡೆವ್ ಫೈನಲ್ ಪಂದ್ಯದಲ್ಲಿ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಮೂರನೇ ಮಾಸ್ಟರ್ಸ್ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.
10ನೇ ಶ್ರೇಯಾಂಕಿತ ರಾವೊನಿಕ್ ಇಲ್ಲಿಯವರೆಗೆ ಮಾಸ್ಟರ್ಸ್ ಪಂದ್ಯಾವಳಿಯನ್ನು ಗೆದ್ದಿಲ್ಲ. ನಿನ್ನೆ ನಡೆದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಎರಡನೇ ಬಾರಿ ಸೆಮಿಫೈನಲ್ ಪಂದ್ಯದಲ್ಲಿ ಪರಾಭವಗೊಂಡಿದ್ದಾರೆ. ಈ ಹಿಂದೆ 2014 ರಲ್ಲಿ ಜೊಕೊವಿಕ್ ವಿರುದ್ಧ ಸೋತಿದ್ದರು.
2019 ರ ಯು.ಎಸ್. ಓಪನ್ ರನ್ನರ್ ಅಪ್ ಮೆಡ್ವೆಡೆವ್ ತನ್ನ ವೃತ್ತಿಜೀವನದ ಎಂಟನೇ ಮತ್ತು ಈ ವರ್ಷದ ಮೊದಲನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಜ್ವೆರೆವ್ ಅವರನ್ನು ಎದುರಿಸಲಿದ್ದಾರೆ.