ನಡಾಲ್ : ಭಾರತ ಲೆಜೆಂಡರಿ ಟೆನ್ನಿಸ್ ಆಟಗಾರ ಮಹೇಶ್ ಭೂಪತಿ ಯುಎಸ್ ಓಪನ್ ಬಗ್ಗೆ ಭವಿಷ್ಯ ನುಡಿದಿದ್ದು, ಜೋಕೊವಿಕ್ ಮತ್ತು ನವೋಮಿ ಒಸಾಕ ಚಾಂಪಿಯನ್ ಆಗಿ ಹೊರಹೊಮ್ಮಲಿದ್ದಾರೆ ಎಂದಿದ್ದಾರೆ.
ಭಾರತ ಟೇಬಲ್ ಟೆನ್ನಿಸ್ ಆಟಗಾರ ಮುದಿತ್ ದನಿ ಅವರ ಆನ್ಲೈನ್ ಶೋನಲ್ಲಿ ಮಾತನಾಡಿರುವ ಭೂಪತಿ, ಸರ್ಬಿಯನ್ ನೊವಾಕ್ ಜೋಕೊವಿಕ್ ಹಾಗೂ ಜಪಾನ್ನ ನವೋಮಿ ಒಸಾಕ ಸಿಂಗಲ್ಸ್ನಲ್ಲಿ ಕಿರೀಟ ಧರಿಸಲಿದ್ದಾರೆ ಎಂದಿದ್ದಾರೆ.
ಸ್ಟಾರ್ ಆಟಗಾರರಾದ ಫೆಡರರ್ ಹಾಗೂ ನಡಾಲ್ ಈ ಬಾರಿ ಯುಎಸ್ ಗ್ರ್ಯಾಂಡ್ಸ್ಲಾಮ್ನಲ್ಲಿ ಪಾಲ್ಗೊಳ್ಳದಿರುವುದರಿಂದ ಸರ್ಬಿಯನ್ ಸ್ಟಾರ್ ತಮ್ಮ ನಾಲ್ಕನೇ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ ಎಂಬುದು ಅವರ ಅಭಿಪ್ರಾಯವಾಗಿದೆ.
46 ವರ್ಷದ ಮಾಜಿ ಆಟಗಾರ, 1997ರಲ್ಲಿ ತಮ್ಮ ಮೊದಲ ಗ್ರ್ಯಾಂಡ್ ಸ್ಲಾಮ್ ಕಿರೀಟ ಧರಿಸಿದ್ದರು. ಲಿಯಾಂಡರ್ ಪೇಸ್ ಜೊತೆಗಾರನಾಗಿ ಆಡಿದ್ದ ಆ ದಿನಗಳು ಭಾರತ ಟೆನ್ನಿಸ್ ಸುವರ್ಣ ದಿನಗಳಾಗಿದ್ದವು. ಭೂಪತಿ ಡಬಲ್ಸ್ನಲ್ಲಿ 3 ಹಾಗೂ ಮಿಕ್ಸಡ್ ಡಬಲ್ಸ್ನಲ್ಲಿ 8 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.