ETV Bharat / sports

World Championships TT: ಮಹಿಳಾ ಡಬಲ್ಸ್​, ಮಿಕ್ಸಡ್​ ಡಬಲ್ಸ್​ನಲ್ಲಿ ಕ್ವಾರ್ಟರ್ ಫೈನಲ್​ಗೆ ಭಾರತ - tatble tennis news

ಗುರುವಾರ ನಡೆದ 16ರ ಸುತ್ತಿನಲ್ಲಿ ಮನಿಕಾ ಮತ್ತು ಅರ್ಚನಾ ಕಾಮತ್​ ಜೋಡಿ 11-4,11-9, 6-11,11-7 ಅಂಕಗಳ ಅಂತರದಿಂದ ಹಂಗೇರಿಯ ಡೋರಾ ಮದರಾಸ್​ ಮತ್ತು ಜಾರ್ಜಿನಾ ಪೋಟ ವಿರುದ್ಧ ಗೆಲುವು ಸಾಧಿಸಿ 8ರ ಘಟ್ಟಕ್ಕೆ ಪ್ರವೇಶಿಸಿದರು.

Table tennis World Championships
ಮನಿಕಾ ಬಾತ್ರಾ ಟೇಬಲ್ ಟೆನಿಸ್​
author img

By

Published : Nov 27, 2021, 1:01 PM IST

ಹಸ್ಟನ್(ಯುಎಸ್​ಎ): ಭಾರತದ ಸ್ಟಾರ್​ ಟೇಬಲ್​ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ವಿಶ್ವ ಟೇಬಲ್​ ಟೆನಿಸ್​ ಚಾಂಪಿಯನ್ಸ್​ಶಿಪ್ಸ್​​ನಲ್ಲಿ ಮಹಿಳಾ ಡಬಲ್ಸ್ ಮತ್ತು ಮಿಕ್ಸಡ್​ ಡಬಲ್ಸ್​ ವಿಭಾಗದಲ್ಲಿ ಕ್ವಾರ್ಟರ್​​ ಫೈನಲ್ಸ್​ ಪ್ರವೇಶಿಸಿದ್ದಾರೆ.

ಗುರುವಾರ ನಡೆದ 16ರ ಸುತ್ತಿನಲ್ಲಿ ಮನಿಕಾ ಮತ್ತು ಅರ್ಚನಾ ಕಾಮತ್​ ಜೋಡಿ 11-4,11 - 9, 6-11,11-7 ಅಂಕಗಳ ಅಂತರದಿಂದ ಹಂಗೇರಿಯ ಡೋರಾ ಮದರಾಸ್​ ಮತ್ತು ಜಾರ್ಜಿನಾ ಪೋಟ ವಿರುದ್ಧ ಗೆಲುವು ಸಾಧಿಸಿ 8ರ ಘಟ್ಟಕ್ಕೆ ಪ್ರವೇಶಿಸಿದರು.

ಭಾರತೀಯ ಜೋಡಿ ಕ್ವಾರ್ಟರ್ಸ್​ನಲ್ಲಿ ಲಕ್ಸೆಂಬರ್ಗ್​ನ ಸಾರಾ ಡಿ ನ್ಯೂಟ್​ ಮತ್ತು ಕ್ಷಿಯಾನ್​ ಲಿಯಾನ್ ನೀ ವಿರುದ್ಧ ಸೆಣಸಾಡಲಿದ್ದಾರೆ. ಈ ಪಂದ್ಯವನ್ನು ಗೆದ್ದ ತಂಡ ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಳ್ಳಲಿದೆ.

ಮಿಶ್ರ ಡಬಲ್ಸ್​ನಲ್ಲೂ ಗೆಲುವು:

ಜಿ. ಸತಿಯಾನ್​ ಜೊತೆಗೂಡಿ ಮಿಶ್ರ ಡಬಲ್ಸ್​ನಲ್ಲಿ ಸ್ಪರ್ಧಿಸಿದ್ದ ಮನಿಕಾ USA - China ಜೋಡಿ ಕನಕ್​ ಝಾ ಮತ್ತು ವಾಂಗ್​ ಮನ್ಯೂ ವಿರುದ್ಧ ಮೊದಲೆರಡು ಸೆಟ್​ ಕಳೆದುಕೊಂಡರೂ ಅದ್ಭುತ ಕಮ್​ಬ್ಯಾಕ್ ಮಾಡಿ ಗೆಲುವು ಸಾಧಿಸಿದರು. ಭಾರತೀಯ ಜೋಡಿ 15 -17, 10 -12, 12-10,11-6,11-7ರಲ್ಲಿ (3-2) ಗೆಲುವು ಸಾಧಿಸಿತು. ಈ ಜೋಡಿ ಮುಂದಿನ ಸುತ್ತಿನಲ್ಲಿ ಜಪಾನ್​ನ ಹರಿಮೊಟೋ ತೊಮಕಜು ಮತ್ತು ಹಯಾಟ ಹಿನಾ ವಿರುದ್ಧ ಸ್ಪರ್ಧಿಸಲಿದೆ.​

ಆದರೆ, ಮತ್ತೊಂದು ಮಿಶ್ರ ಡಬಲ್ಸ್ ಜೋಡಿ ಶರತ್ ಕಮಲ್ ಮತ್ತು ಅರ್ಚನಾ ತಮ್ಮ 16ರ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ಜಿಯಾ ನಾನ್ ಯುವಾನ್ ಮತ್ತು ಇಮ್ಯಾನುಯೆಲ್ ಲೆಬೆಸನ್ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರು.

ಇದನ್ನೂ ಓದಿ:ಇಂಡೋನೇಷ್ಯಾ ಓಪನ್‌ : ಕೊರಿಯಾದ ಯುಜಿನ್ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಪಿ ವಿ ಸಿಂಧು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.