ETV Bharat / sports

ಆಸ್ಟ್ರೇಲಿಯಾ ಓಪನ್: ದಿವಿಜ್ ಶರಣ್ ಮತ್ತು ಅಂಕಿತಾ ರೈನಾ ಪರಾಭವ

ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಯಲ್ಲಿ ನೇರ ಪ್ರವೇಶ ಪಡೆದ ಮೂರನೇ ಭಾರತೀಯ ಮಹಿಳಾ ಟೆನಿಸ್ ಆಟಗಾರ್ತಿ ಅಂಕಿತಾ ಮತ್ತು ವೈಲ್ಡ್​ ಕಾರ್ಡ್​ ಪ್ರವೇಶ ಪಡೆದಿದ್ದ ರೊಮೇನಿಯಾದ ಮಿಹೇಲಾ ಬುಜಾರ್ನೆಕು ಜೋಡಿ, ಒಲಿವಿಯಾ ಗಡೆಕ್ಕಿ ಮತ್ತು ಬೆಲಿಂಡಾ ವೂಲ್ಕಾಕ್ ಜೋಡಿ ವಿರುದ್ದ ಆಸ್ಟ್ರೇಲಿಯಾ ಓಪನ್ ಮಹಿಳಾ ಡಬಲ್ಸ್ ಪಂದ್ಯದಲ್ಲಿ ಸೋಲುಂಡಿದ್ದಾರೆ.

author img

By

Published : Feb 11, 2021, 3:18 PM IST

Australian Open
ಆಸ್ಟ್ರೇಲಿಯಾ ಓಪನ್

ಮೆಲ್ಬೋರ್ನ್: ಆಸ್ಟ್ರೇಲಿಯಾ ಓಪನ್ ಪುರುಷರ ಮತ್ತು ಮಹಿಳಾ ಡಬಲ್ಸ್ ಪಂದ್ಯ ನಡೆಯುತ್ತಿದ್ದು, ಭಾರತದ ದಿವಿಜ್ ಶರಣ್ ಮತ್ತು ಅಂಕಿತಾ ರೈನಾ ಪರಾಭವಗೊಂಡಿದ್ದಾರೆ.

ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಯಲ್ಲಿ ನೇರ ಪ್ರವೇಶ ಪಡೆದ ಮೂರನೇ ಭಾರತೀಯ ಮಹಿಳಾ ಟೆನಿಸ್ ಆಟಗಾರ್ತಿ ಅಂಕಿತಾ ಮತ್ತು ವೈಲ್ಡ್​ ಕಾರ್ಡ್​ ಪ್ರವೇಶ ಪಡೆದಿದ್ದ ರೊಮೇನಿಯಾದ ಮಿಹೇಲಾ ಬುಜಾರ್ನೆಕು ಜೋಡಿ ಒಲಿವಿಯಾ ಗಡೆಕ್ಕಿ ಮತ್ತು ಬೆಲಿಂಡಾ ವೂಲ್ಕಾಕ್ ಜೋಡಿ ವಿರುದ್ಧ 3-6, 0-6 ಸೆಟ್​ಗಳಿಂದ ಸೋಲುಂಡಿದ್ದಾರೆ.

ಇನ್ನು ಒಂದು ಗಂಟೆ ನಾಲ್ಕು ನಿಮಿಷಗಳ ಕಾಲ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ದಿವಿಜ್ ಮತ್ತು ಅವರ ಸ್ಲೋವಾಕಿಯಾದ ಜೊತೆಯಾಟಗಾರ ಇಗೊರ್ ಜೆಲೆನಾಯ್​ ಅವರು ಜರ್ಮನ್​ನ ಯಾನಿಕ್ ಹ್ಯಾನ್‌ಫ್ಮನ್ ಮತ್ತು ಕೆವಿನ್ ಕ್ರಾವಿಯೆಟ್ಜ್ ವಿರುದ್ಧ 1-6, 4-6 ಸೆಟ್​ಗಳಿಂದ ಸೋಲು ಅನುಭವಿಸಿದ್ದಾರೆ.

ಈ ಮೂಲಕ ಮಹಿಳಾ ಮತ್ತು ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಭಾರತ ಆಟಗಾರರು ಸೋಲುಂಡಿದ್ದಾರೆ. ಪುರುಷರ ಡಬಲ್ಸ್ ವಿಭಾಗದಲ್ಲಿ ಇತರ ಭಾರತೀಯರಾದ ರೋಹನ್ ಬೋಪಣ್ಣ ಮತ್ತು ಜಪಾನ್‌ನ ಬೆನ್ ಮೆಕ್ಲಾಕ್ಲಾನ್ ಅವರು ಕೊರಿಯನ್ ವೈಲ್ಡ್ ಕಾರ್ಡ್ ಜೋಡಿ ಜಿ ಸುಂಗ್ ನಾಮ್ ಮತ್ತು ಮಿನ್-ಕ್ಯೂ ಸಾಂಗ್ ವಿರುದ್ಧ 4-6 6-7 ಸೆಟ್​ ಅಂತರದ ಸೋಲಿನ ನಂತರ ಆರಂಭಿಕ ಸುತ್ತಿನಲ್ಲಿ ಹೊರಗುಳಿದಿದ್ದಾರೆ.

ಆದಾಗ್ಯೂ, ಅನುಭವಿ ಬೋಪಣ್ಣ ಮಿಶ್ರ ಡಬಲ್ಸ್‌ನಲ್ಲಿ ಚೀನಾದ ಯಿಂಗಿಂಗ್ ಡುವಾನ್ ಜೊತೆ ಪಾಲುದಾರರಾಗಲಿದ್ದಾರೆ. ಮೊದಲ ಸುತ್ತಿನಲ್ಲಿ ಅಮೆರಿಕನ್ ಬೆಥನಿ ಮ್ಯಾಟೆಕ್-ಸ್ಯಾಂಡ್ಸ್ ಮತ್ತು ಯುನೈಟೆಡ್ ಕಿಂಗ್‌ಡಂನ ಜೇಮಿ ಮುರ್ರೆ ವಿರುದ್ಧ ಸೆಣಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.