ಬ್ಯುನಸ್ ಐರಿಸ್: 2009 ರ ಯುಎಸ್ ಓಪನ್ ಚಾಂಪಿಯನ್ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಈ ವಾರದ ನಂತರ ಮತ್ತೊಂದು ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ.
ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದು, ಪೊಟ್ರೊ ಈ ವರ್ಷದ ಕೊನೆಯಲ್ಲಿ ಟೋಕಿಯೊ ಕ್ರೀಡಾಕೂಟದಲ್ಲಿ ಆಡುವ ಭರವಸೆ ವ್ಯಕ್ತಪಡಿಸಿದ್ದಾರೆ. ಜೂನ್ 2019 ರಲ್ಲಿ ಕ್ವೀನ್ಸ್ ಕ್ಲಬ್‌ನಲ್ಲಿ ನಡೆದ ಮೊದಲ ಸುತ್ತಿನಲ್ಲಿ ಮೊಣಕಾಲು ನೋವು ಕಾಣಿಸಿಕೊಂಡ ನಂತರ ಪೋರ್ಟೊ ಸ್ಪರ್ಧಾತ್ಮಕ ಟೆನಿಸ್ ಆಡಲು ಸಾಧ್ಯವಾಗಿರಲಿಲ್ಲ. ಪೊಟ್ರೊ ಈಗಾಗಲೇ ಮೂರು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
"ನಾನು ಶಸ್ತ್ರಚಿಕಿತ್ಸೆಗೆ ಪಡೆದಿದ್ದೇನೆ ಆದರೆ, ನೋವು ಇನ್ನೂ ಇದೆ" ಎಂದು ಡೆಲ್ ಪೊಟ್ರೊ ತಮ್ಮ ಅಧಿಕೃತ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ನಾನು ಮತ್ತೆ ಟೆನಿಸ್ ಆಡಲು ಬಯಸುತ್ತೇನೆ. ಒಲಿಂಪಿಕ್ಸ್ ಆಡಲು ಸಾಧ್ಯವಾಗುತ್ತದೆ ಎಂದು ತಿಳಿದಿದೆ, ಆದ್ದರಿಂದ ಸಾಧ್ಯವಾದಷ್ಟು ಬೇಗ ಶಸ್ತ್ರಚಿಕಿತ್ಸೆ ಮಾಡಸಿಕೊಳ್ಳಲು ನಾನು ಒಪ್ಪಿಕೊಂಡಿದ್ದೇನೆ." ಎಂದಿದ್ದಾರೆ.
ಸ್ವಿಸ್ ನ ರೋಜರ್ ಫೆಡರರ್ ಅವರನ್ನು ಸೋಲಿಸುವ ಮೂಲಕ 2009 ರ ಯುಎಸ್ ಓಪನ್ ಪ್ರಶಸ್ತಿಯನ್ನು ಗೆದ್ದ ಪೊಟ್ರೊ, ಅವರ ವೃತ್ತಿಜೀವನದಲ್ಲಿ ದೀರ್ಘಕಾಲ ಗಾಯಕ್ಕೆ ತುತ್ತಾಗಿ ಅನೇಕ ಟೂರ್ನಿಗಳಿಂದ ಹೊರಗುಳಿದಿದ್ದಾರೆ.
ಓದಿ : ಏಷ್ಯನ್ ರೆಸ್ಲಿಂಗ್ ಚಾಂಪಿಯನ್ಶಿಪ್ಗೆ ಭಾರತೀಯ ಮಹಿಳಾ ಕುಸ್ತಿ ತಂಡ ಆಯ್ಕೆ
ಜನವರಿಯಲ್ಲಿ ತನ್ನ ತಂದೆಯ ನಿಧನದ ನಂತರ ನಿವೃತ್ತಿ ಪಡೆಯಬೇಕು ಅಂದುಕೊಂಡಿದ್ದೆ. "ಖಂಡಿತ, ಈ ಕಳೆದ ಕೆಲವು ವಾರಗಳು ನನಗೆ ಸುಲಭವಾಗಿರಲಿಲ್ಲ. ನನ್ನ ತಂದೆ ತೀರಿಕೊಂಡ ನಂತರ ಎಲ್ಲವೂ ತುಂಬಾ ಕಷ್ಟಕರವಾಗಿದೆ" ಎಂದು ಅವರು ಹೇಳಿದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಟೆನಿಸ್ ಪಂದ್ಯಾವಳಿ ಜುಲೈ 24 ರಂದು ಪ್ರಾರಂಭವಾಗಲಿದೆ. ಡೆಲ್ ಪೊಟ್ರೊ 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದರು.