ಮೆಲ್ಬೋರ್ನ್: ಹಾಲಿ ಚಾಂಪಿಯನ್ ಸೋಫಿಯಾ ಕೆನಿನ್ 2ನೇ ಸುತ್ತಿನ ಪಂದ್ಯದಲ್ಲಿ ಈಸ್ಟೋನಿಯಾದ ಕೈಯಾ ಕೆನೆಪಿ ವಿರುದ್ಧ ಸೋಲು ಕಾನುವ ಮೂಲಕ ಟೂರ್ನಿಯಲಿಂದ ಹೊರಬಿದ್ದಿದ್ದಾರೆ.
65ನೇ ಶ್ರೇಯಾಂಕದ ಕೆನೆಪಿ 4 ನೇ ಶ್ರೇಯಾಂಕದ ಅಮೆರಿಕನ್ ಆಟಗಾರ್ತಿ ವಿರುದ್ಧ ಎರಡೂ ಸೆಟ್ಗಳಲ್ಲೂ ಪ್ರಾಬಲ್ಯ ಸಾಧಿಸಿದರು. ಅವರ 6-3, 6-2 ಅಂತರದ ನೇರ ಸೆಟ್ಗಳಲ್ಲಿ ಹಾಲಿ ಚಾಂಪಿಯನ್ರನ್ನು ಮಣಿಸಿ 3ನೇ ಸುತ್ತಿಗೆ ಪ್ರವೇಶ ಪಡೆದರು.
ತಮ್ಮ 19 ನೇ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಆಡುತ್ತಿರುವ ಅನುಭವಿ ಸ್ಪೇನ್ನ ಫೆಲಿಸಿಯಾನೊ ಲೋಪೆಜ್ 2ನೇ ಸುತ್ತಿನಲ್ಲಿ ಇಟಲಿಯ ಲೊರೆಂಜೊ ಸೊನೆಗೊ ವಿರುದ್ಧ ಐದು ಸೆಟ್‌ಗಳ ಪಂದ್ಯವನ್ನು ಗೆದ್ದರು. ಅವರು 5-7, 3-6, 6-3, 7-5, 6-4 ಅಂತರದಲ್ಲಿ 3 ಗಂಟೆ, 18 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಗೆದ್ದು ಮೂರನೇ ಸುತ್ತು ಪ್ರವೇಶಿಸಿದರು. ಅವರು ಮುಂದಿನ ಪಂದ್ಯದಲ್ಲಿ ರಷ್ಯಾದ ಆಂಡ್ರೆ ರುಬ್ಲೆವ್ ಅವರನ್ನು ಎದುರಿಸಲಿದ್ದಾರೆ.
ಇದನ್ನು ಓದಿ:ಲಿಂಗ ತಾರತಮ್ಯ ಹೇಳಿಕೆ: ಟೋಕಿಯೋ ಒಲಿಂಪಿಕ್ಸ್ ಮುಖ್ಯಸ್ಥ ಯೋಶಿರೋ ಮೋರಿ ರಾಜೀನಾಮೆ