ETV Bharat / sports

ಹೆಚ್ಚು ಧೈರ್ಯದಿಂದ ನಾವು ಮೈದಾನಕ್ಕಿಳಿದೆವು ಎಂದು ಭಾವಿಸುವುದಿಲ್ಲ: ಸೋಲಿನ ಬಳಿಕ ಕೊಹ್ಲಿ ಮಾತು

ಭಾರತದ ಪರ ಆಡುವಾಗ ಹಲವು ನಿರೀಕ್ಷೆಗಳಿರುತ್ತವೆ. ಜನರು ಕ್ರೀಡಾಂಗಣಕ್ಕೆ ಬರುತ್ತಾರೆ ಮತ್ತು ಭಾರತಕ್ಕಾಗಿ ಆಡುವ ಪ್ರತಿಯೊಬ್ಬರೂ ಅದನ್ನು ಸ್ವೀಕರಿಸಬೇಕು ಮತ್ತು ನಿಭಾಯಿಸಬೇಕು..

virat-kohli-reaction
ಸೋಲಿನ ಬಳಿಕ ಕೊಹ್ಲಿ ಮಾತು
author img

By

Published : Nov 1, 2021, 12:06 PM IST

ದುಬೈ : ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ನೀಡಿದೆ. ಮೊದಲ ಪಂದ್ಯದಂತೆಯೇ ಆರಂಭಿಕ ಬ್ಯಾಟಿಂಗ್ ಕ್ರಮಾಂಕದಲ್ಲಿ ಉತ್ತಮ ರನ್ ಹರಿದು ಬರದೆ ಕಡಿಮೆ ಮೊತ್ತಕ್ಕೆ ಕುಸಿತ ಕಂಡು ಸೋಲು ಕಂಡಿದೆ.

ಪಂದ್ಯದ ಬಳಿಕ ತಂಡದ ಪ್ರದರ್ಶನ ಕುರಿತಂತೆ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. ಬ್ಯಾಟಿಂಗ್, ಬೌಲಿಂಗ್​ನಲ್ಲಿ ನಾವು ಹೆಚ್ಚು ಧೈರ್ಯದಿಂದ ಮೈದಾನಕ್ಕಿಳಿದೆವು ಎಂದು ನಾನು ಭಾವಿಸುವುದಿಲ್ಲ. ನಮ್ಮನ್ನು ನಾನು ಹೆಚ್ಚು ಸಮರ್ಥಿಸಿಕೊಳ್ಳುವುದಿಲ್ಲ.

ಆದರೆ, ಮೈದಾನಕ್ಕೆ ಕಾಲಿಟ್ಟಾಗ ನಾವು ಧೈರ್ಯಶಾಲಿಯಾಗಿರಲಿಲ್ಲ. ಪಂದ್ಯದಲ್ಲಿ ಇನ್ನೇನು ಆಟ ಆರಂಭಿಸಬೇಕು ಎನ್ನುವಷ್ಟರಲ್ಲಿ ವಿಕೆಟ್ ಉರುಳುತ್ತಿದ್ದವು. ಚೆನ್ನಾಗಿ ಆಡುವ ಅವಕಾಶ ಸಿಕ್ಕಾಗಲೆಲ್ಲಾ ವಿಕೆಟ್ ಉರುಳಿತು ಎಂದಿದ್ದಾರೆ.

ಭಾರತದ ಪರ ಆಡುವಾಗ ಹಲವು ನಿರೀಕ್ಷೆಗಳಿರುತ್ತವೆ. ಜನರು ಕ್ರೀಡಾಂಗಣಕ್ಕೆ ಬರುತ್ತಾರೆ ಮತ್ತು ಭಾರತಕ್ಕಾಗಿ ಆಡುವ ಪ್ರತಿಯೊಬ್ಬರೂ ಅದನ್ನು ಸ್ವೀಕರಿಸಬೇಕು ಮತ್ತು ನಿಭಾಯಿಸಬೇಕು.

ನಾವು ಕಳೆದೆರಡು ಪಂದ್ಯದಲ್ಲಿ ಸೋಲು ಕಂಡಿದ್ದೇವೆ. ಯಾವಾಗಲೂ ಧನಾನ್ಮತವಾಗಿಯೇ ಯೋಚಿಸಬೇಕು. ಒತ್ತಡವನ್ನ ಮರೆತು ಮತ್ತೆ ಮುನ್ನಡೆಯಬೇಕು. ಟೂರ್ನಿಯಲ್ಲಿ ಇನ್ನೂ ಪಂದ್ಯಗಳಿವೆ ಎಂದಿದ್ದಾರೆ.

ಓದಿ: T20 ವಿಶ್ವಕಪ್: 2ನೇ ಪಂದ್ಯದಲ್ಲಿ ಕಳಪೆ ಪ್ರದರ್ಶನಕ್ಕೆ ಸೇಹ್ವಾಗ್ ಬೇಸರ.. ಟೀಕಿಸಬೇಡಿ ಎಂದ ಟರ್ಬನೇಟರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.