ETV Bharat / sports

ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ವಿಂಡೀಸ್ ಆಲ್​ರೌಂಡರ್ ಡ್ವೇನ್​ ಬ್ರಾವೋ ಗುಡ್​​ಬೈ.. - dwayne-bravo

2012 ಮತ್ತು 2016ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖರಾಗಿದ್ದ ಡ್ವೇನ್ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ವಿದಾಯ ಘೋಷಿಸಲಿದ್ದಾರೆ. ನಾಳೆಯ ಟಿ20 ಪಂದ್ಯ ಅವರಿಗೆ ಅಂತಿಮ ಪಂದ್ಯವಾಗಿರಲಿದೆ.

dwayne-bravo
ಡ್ವೇನ್​ ಬ್ರಾವೋ
author img

By

Published : Nov 5, 2021, 12:59 PM IST

Updated : Nov 5, 2021, 1:15 PM IST

ವೆಸ್ಟ್​ ಇಂಡೀಸ್ ಆಲ್​ರೌಂಡರ್ ಡ್ವೇನ್ ಬ್ರಾವೋ ಟಿ20 ವಿಶ್ವಕಪ್ ಪಯಣ ಮುಗಿಯುತ್ತಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಲಿದ್ದಾರೆ. 38 ವರ್ಷದ ಬ್ರಾವೋ 2019ರಲ್ಲಿ ನಿವೃತ್ತಿ ಘೋಷಿಸಿ ಮತ್ತೆ ತಮ್ಮ ನಿರ್ಧಾರ ಹಿಂತೆಗೆದುಕೊಂಡಿದ್ದರು. ಆದರೆ ಈ ಬಾರಿಯ ಟೂರ್ನಿಯಲ್ಲಿ ತಂಡ ಉತ್ತಮ ಪ್ರದರ್ಶನ ನೀಡದೆ ಹೊರಹೋಗಿದೆ. ಹೀಗಾಗಿ ವಿದಾಯ ಹೇಳಲು ಮುಂದಾಗಿದ್ದಾರೆ.

2012 ಮತ್ತು 2016ರಲ್ಲಿ ಟಿ20 ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವಲ್ಲಿ ಬ್ರಾವೋ ಪ್ರಮುಖ ಆಟಗಾರ ಎನಿಸಿದ್ದರು. ಅವರು ಈವರೆಗೆ 90 ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿದ್ದಾರೆ.

  • West Indies all-rounder Dwayne Bravo confirms he will retire at the end of the ICC Men's T20 World Cup: International Cricket Council

    (Photo courtesy: ICC) pic.twitter.com/ZwAOA4Y1pE

    — ANI (@ANI) November 5, 2021 " class="align-text-top noRightClick twitterSection" data=" ">

ಈ ವಿದಾಯ ಕುರಿತಂತೆ ಮಾತನಾಡಿರುವ ಅವರು, ಇದೀಗ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ನಾನು ಉತ್ತಮ ವೃತ್ತಿ ಜೀವನ ಗಳಿಸಿದ್ದೆ. 18 ವರ್ಷಗಳ ಕಾಲ ವೆಸ್ಟ್​ ಇಂಡೀಸ್ ತಂಡ ಪ್ರತಿನಿಧಿಸಿದ್ದೆ. ಈ ನಡುವೆ ಕೆಲ ಏರಿಳಿತ, ಸವಾಲು ಎದುರಿಸಿದ್ದೇನೆ. ಹಿಂದಿರುಗಿ ನೋಡಿದಾಗ ನನ್ನ ದೇಶ ಮತ್ತು ಕೆರಿಬಿಯನ್ ಜನರನ್ನು ಪ್ರತಿನಿಧಿಸಿದ್ದಕ್ಕಾಗಿ ತುಂಬಾ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.

ಮೂರು ಐಸಿಸಿ ಟ್ರೋಫಿಗಳನ್ನು ಗೆಲ್ಲಲು, ನನ್ನ ನಾಯಕ (ಡೇರೆನ್ ಸಾಮಿ) ಜೊತೆ ಎರಡು ಟ್ರೋಫಿ ಗೆದ್ದಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ.

ನಾಳೆ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪಂದ್ಯವು ಡ್ವೇನ್ ಬ್ರಾವೋ ಅವರಿಗೆ ಕೊನೆಯ ಪಂದ್ಯವಾಗಿರಲಿದೆ.

ಓದಿ: ಶ್ರೀಲಂಕಾ ವಿರುದ್ಧ ಸೋತು ಟೂರ್ನಿಯಿಂದ ಹೊರ ಬಿದ್ದ ಚಾಂಪಿಯನ್​ ವಿಂಡೀಸ್​

Last Updated : Nov 5, 2021, 1:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.