ದುಬೈ: ಟಿ20 ವಿಶ್ವಕಪ್ನಲ್ಲಿ ಭಾರತ ಅಭೂತಪೂರ್ವ ದಾಖಲೆ ಬರೆದಿದೆ. ಸ್ಕಾಟ್ಲೆಂಡ್ ವಿರುದ್ದ ಎಂಟು ವಿಕೆಟ್‌ಗಳಿಂದ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, ಬೌಲರ್ಗಳ ಮಾರಕದಾಳಿಗೆ ಸ್ಕಾಟ್ಲೆಂಡ್ ಬೆದರಿದೆ.
ಸ್ಕಾಟ್ಲೆಂಡ್ ನೀಡಿದ್ದ 85 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ, ಕೇವಲ 6.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಕೆ.ಎಲ್.ರಾಹುಲ್ ಕೇವಲ 19 ಎಸೆತಕ್ಕೆ ಅರ್ಧಶತಕ ಗಳಿಸಿ ದಾಖಲೆ ಬರೆದರು.
ರೋಹಿತ್ ಶರ್ಮಾ ಕೂಡಾ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದು, 16 ಎಸೆತಕ್ಕೆ 30 ರನ್ ಗಳಿಸಿದ್ದಾರೆ. ಸೂರ್ಯ ಕುಮಾರ್ ಯಾದವ್ ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಬೌಲಿಂಗ್ ವಿಭಾಗದಲ್ಲಿಯೂ ಟೀಂ ಇಂಡಿಯಾದ ಮಾರಕ ದಾಳಿಗೆ ಸ್ಕಾಟ್ಲೆಂಡ್ ತತ್ತರಿಸಿದೆ. ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ತಲಾ ಮೂರು ವಿಕೆಟ್ ಪಡೆದರೆ, ಜಸ್ಪ್ರೀತ್ ಬೂಮ್ರಾ 2, ರವಿಚಂದ್ರನ್ ಆಶ್ವಿನ್ ಒಂದು ವಿಕೆಟ್ ಪಡೆದು ಮಿಂಚಿದರು.
17.4 ಓವರ್ಗಳಲ್ಲಿ ಆಲೌಟಾಗಿ 85 ರನ್ ಗಳಿಸಿದ್ದ ಸ್ಕಾಟ್ಲೆಂಡ್ ತಂಡದ ಪರ ಜಾರ್ಜ್ ಮುನ್ಸೆ 24, ಮೈಖಲ್ ಲೀಸ್ಕ್ 21, ಕ್ಯಾಲಂ ಮ್ಯಾಕ್ಲಿಯೋಡ್ 16 ರನ್ ಗಳಿಸಿ, ತಂಡಕ್ಕೆ ಅಲ್ಪ ಮೊತ್ತದ ಕೊಡುಗೆ ನೀಡಿದರು. ಸ್ಕಾಟ್ಲೆಂಡ್ ಪರ ಬೌಲಿಂಗ್ನಲ್ಲಿ ಮಾರ್ಕ್ ವ್ಯಾಟ್ ಮತ್ತು ಬ್ರಾಡ್ ವೀಲ್ ತಲಾ ಒಂದು ವಿಕೆಟ್ ಪಡೆದಿದ್ದರು.