ETV Bharat / sports

ಟಿ20 ವಿಶ್ವಕಪ್ ಪಂದ್ಯದ ವೇಳೆ ಪುನೀತ್​ ನಿಧನಕ್ಕೆ ಸಂತಾಪ ಸೂಚಿಸಿದ ಅಭಿಮಾನಿ

ಸ್ಯಾಂಡಲ್​ವುಡ್ ರಾಜಕುಮಾರ ಪುನೀತ್ ರಾಜಕುಮಾರ್ ನಿಧನಕ್ಕೆ ಕೋಟ್ಯಂತರ ಮಂದಿ ಕಂಬನಿ ಮಿಡಿದಿದ್ದು, ಅಬುಧಾಬಿಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಕ್ರಿಕೆಟ್ ಅಭಿಮಾನಿಯೊಬ್ಬರು ಸಂತಾಪ ಸೂಚಿಸಿದ್ದಾರೆ.

Puneeth Rajkumar photo displayed by cricket  fan in Abu Dhabi
ದುಬೈನಲ್ಲಿ ಪುನೀತ್​​ ರಾಜಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ ಕ್ರಿಕೆಟ್ ಅಭಿಮಾನಿ
author img

By

Published : Nov 3, 2021, 9:42 PM IST

ಅಬುಧಾಬಿ: ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲೂ ದಿವಂಗತ ನಟ ಪುನೀತ್ ರಾಜಕುಮಾರ್ ಅವರಿಗೆ ಸಂತಾಪ ಸೂಚಿಸಲಾಗಿದೆ. ಟೀಂ ಇಂಡಿಯಾದ ಅಭಿಮಾನಿ ಸುಗುಮಾರ್ ಕುಮಾರ್ ಕ್ರಿಕೆಟ್​ ಪಂದ್ಯಾವಳಿಯ ವೇಳೆ ಪುನೀತ್ ಭಾವಚಿತ್ರ ಹಾಗೂ ನಾಡಬಾವುಟ ಪ್ರದರ್ಶಿಸಿ ಸಂತಾಪ ಸೂಚಿಸಿದರು.

ನಮ್ಮನ್ನು ಬೇಗನೇ ಅಗಲಿದ್ದೀರಿ. ನಾನು ನಿಮ್ಮನ್ನು ನಿಜವಾಗಲೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಪುನೀತ್ ರಾಜಕುಮಾರ್ ಸರ್. ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಪರವಾಗಿ ನಿಮಗೆ ಅತಿ ದೊಡ್ಡ ಸೆಲ್ಯೂಟ್. ಓಂ ಶಾಂತಿ ಎಂದು ಟ್ವಿಟರ್​ನಲ್ಲಿ ಬರೆದು, ಫೋಟೋ ಹಂಚಿಕೊಂಡಿದ್ದಾರೆ.

ಅಬುಧಾಬಿಯಲ್ಲಿರುವ ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ಪಂದ್ಯವೊಂದರ ವೇಳೆ ಸುಗುಮಾರ್ ಫೋಟೋ ಪ್ರದರ್ಶಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Puneeth Rajkumar photo displayed by cricket  fan in Abu Dhabi
ಕ್ರಿಕೆಟ್ ಅಭಿಮಾನಿ ಸುಗುಮಾರ್ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.