ದುಬೈ: ಐಸಿಸಿ ಟಿ-20 ವಿಶ್ವಕಪ್ (ICC T20 World Cup Final) ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಈ ಮೂಲಕ ಕೀವಿಸ್ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡಿದೆ.
ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್(New Zealand vs Australia) ತಂಡಗಳು ಮುಖಾಮುಖಿಯಾಗುತ್ತಿವೆ. ದುಬೈನ ಅಂತಾರಾಷ್ಟ್ರೀಯ(Dubai International Cricket Stadium) ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಗೆಲುವು ಸಾಧಿಸುವ ತಂಡ ಚುಟುಕು ಕ್ರಿಕೆಟ್ ಜಗತ್ತಿನ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಲಿದೆ.
ಚೊಚ್ಚಲ ಪ್ರಶಸ್ತಿಗಾಗಿ ಸೆಣಸಾಟ
ಐಸಿಸಿ ಟಿ-20 ವಿಶ್ವಕಪ್(T20 World cup Final)ನಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ತಂಡಗಳು ಇಲ್ಲಿಯವರೆಗೆ ಪ್ರಶಸ್ತಿಗೆ ಮುತ್ತಿಕ್ಕಿಲ್ಲ. ಹೀಗಾಗಿ ಎರಡು ತಂಡಗಳಿಂದ ಬಲಿಷ್ಠ ಪೈಪೋಟಿ ಏರ್ಪಡುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ 2010ರಲ್ಲಿ ಕಾಂಗರೂ ಪಡೆ ಫೈನಲ್ಗೆ ಪ್ರವೇಶ ಪಡೆದುಕೊಂಡಿದ್ರೂ, ಇಂಗ್ಲೆಂಡ್ ವಿರುದ್ಧ ಸೋಲು ಕಾಣುವ ಮೂಲಕ ರನ್ನರ್-ಅಪ್ಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ ನ್ಯೂಜಿಲ್ಯಾಂಡ್ ತಂಡ ಇದೇ ಮೊದಲ ಬಾರಿಗೆ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ.
ಸಾಂಪ್ರದಾಯಿಕ ಬದ್ಧ ಎದುರಾಳಿಗಳ ಕಾದಾಟ
ಟಿ-20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್-ಆಸ್ಟ್ರೇಲಿಯಾ ಸಮಾನ ಅಂಕ ಸಾಧಿಸಿ ಸೆಮಿಫೈನಲ್ಗೆ ಲಗ್ಗೆ ಹಾಕಿದ್ದವು. ಸೆಮೀಸ್ನಲ್ಲಿ ನ್ಯೂಜಿಲ್ಯಾಂಡ್ ತಂಡ ಇಂಗ್ಲೆಂಡ್ ಮೇಲೆ ಹಾಗೂ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾ(Australia Team) ಭರ್ಜರಿ ಗೆಲುವು ದಾಖಲು ಮಾಡಿ ಫೈನಲ್ಗೆ ಲಗ್ಗೆ ಹಾಕಿವೆ. ಭಾರತ-ಪಾಕಿಸ್ತಾನದಂತೆ ಸಾಂಪ್ರದಾಯಿಕ ಬದ್ದ ಎದುರಾಳಿಗಳಾಗಿರುವ ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ ತಂಡ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಗೆಲುವು ಸಾಧಿಸುವ ತಂಡ ಹೊಸ ಇತಿಹಾಸ ರಚನೆ ಮಾಡುವುದರ ಜೊತೆಗೆ ಚೊಚ್ಚಲ ಟಿ-20 ಚಾಂಪಿಯನ್ ಆಗಿ ಹೊರಹೊಮ್ಮಲಿದೆ.
ಇದನ್ನೂ ಓದಿರಿ: ನಿಜಕ್ಕೂ ಪವಾಡ: ಮೊಹಮ್ಮದ್ ರಿಜ್ವಾನ್ಗೆ ಚಿಕಿತ್ಸೆ ನೀಡಿದ ಭಾರತೀಯ ವೈದ್ಯನ ಮಾತು!
ಸಂಘಟಿತ ಹೋರಾಟದಿಂದ ಫೈನಲ್ಗೆ ಲಗ್ಗೆ
ಐಸಿಸಿ ಟಿ-20 ವಿಶ್ವಕಪ್ನಲ್ಲಿ ಉಭಯ ತಂಡಗಳು ತಲಾ 1 ಪಂದ್ಯದಲ್ಲಿ ಸೋಲು ಕಂಡಿದ್ದರೂ, ತದನಂತರ ಫಿನಿಕ್ಸ್ನಂತೆ ಕಮ್ಬ್ಯಾಕ್ ಮಾಡಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿನ ಸಂಘಟಿತ ಹೋರಾಟದಿಂದ ಇದೀಗ ಫೈನಲ್ಗೆ ಲಗ್ಗೆ ಹಾಕಿವೆ. ಎರಡು ತಂಡಗಳಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಬಲಿಷ್ಠವಾಗಿವೆ.
ತಂಡಗಳು:
ನ್ಯೂಜಿಲ್ಯಾಂಡ್: ಮಾರ್ಟಿನ್ ಗಪ್ಟಿಲ್, ಮಿಚೆಲ್, ಕೆನ್ ವಿಲಿಯಮ್ಸನ್(ಕ್ಯಾಪ್ಟನ್) ಟಿಮ್ ಸಿಫರ್ಟ್(ವಿ.ಕೀ), ಗ್ಲೆನ್ ಪಿಲಿಪ್ಸ್, ಜೇಮ್ಸ್ ನಿಶಮ್, ಮಿಚೆನ್ ಸ್ನ್ಯಾಟರ್, ಆ್ಯಡಂ ಮಿಲ್ನೆ, ಥಿಮ್ ಸೌಥಿ, ಇಶಾ ಸೋಧಿ, ಟ್ರೆಂಟ್ ಬೌಲ್ಟ್,
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಆ್ಯರೋನ್ ಫಿಂಚ್(ಕ್ಯಾಪ್ಟನ್), ಮಿಚನ್ ಮಾರ್ಷ್, ಸ್ಟೀವ್ ಸ್ಮಿತ್, ಗ್ಲೇನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ವ್ಯಾಡ್(ವಿ,ಕೀ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಆ್ಯಂಡ ಜಂಪಾ, ಹ್ಯಾಜಲ್ವುಡ್,